ಗಡಿಯಲ್ಲಿ ಪ್ರಾಣ ಅರ್ಪಿಸಿ, ಅಶೋಕ ಚಕ್ರ ಪಡೆದ ಮೊದಲ ಕನ್ನಡಿಗನ ಮಗಳು ಕನ್ನಡದ ಖ್ಯಾತ ನಟಿ.

ನಮಸ್ಕಾರ ಸ್ನೇಹಿತರೇ ಕನ್ನಡದ ಖ್ಯಾತ ನಟರಾಗಿರುವ ರಕ್ಷಿತ್ ಶೆಟ್ಟಿ ರವರು ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ಯಾರ ಅಭಿಮಾನಿ ಆಗಿದ್ದರೂ ಕೂಡ ರಕ್ಷಿತ್ ಶೆಟ್ಟಿ ರವರ ಸಿನಿಮಾವನ್ನು ಒಮ್ಮೆ ನೋಡಿ ಬರುತ್ತಾರೆ, ಇಂತಹ ರಕ್ಷಿತ್ ಶೆಟ್ಟಿ ರವರೆ ಜೊತೆ ನಟಿಯಾಗಿ ಅವಕಾಶ ಪಡೆಯುವುದು ಸುಲಭದ ಕೆಲಸವಲ್ಲ. ಇನ್ನು ಕರ್ನಾಟಕಕ್ಕೆ ಒಂದು ಹೆಮ್ಮೆಯ ಗುರುತಿನಂತೆ ಇರುವ ಅಶೋಕ ಚಕ್ರ ಪಡೆದ ಮೊದಲ ಕನ್ನಡಿಗ ಎಂಬ ಖ್ಯಾತಿಗೆ ಪಾತ್ರರಾದ ಸೈನಿಕನ ಮಗಳು ಇದೀಗ ರಕ್ಷಿತ್ ಶೆಟ್ಟಿ ಅವರ ಜೊತೆ ಸಿನಿಮಾ ಮಾಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡಿದ್ದಾರೆ.

ಹೌದು ಸ್ನೇಹಿತರೇ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಪ್ತಸಾಗರದಾಚೆಯೆಲ್ಲೊ ಸಿನಿಮಾದ ನಾಯಕಿಯನ್ನು ರಕ್ಷಿತ್ ಶೆಟ್ಟಿ ರವರು ಪರಿಚಯ ಮಾಡಿದ್ದಾರೆ. ಮೊದಲಿಗೆ ಇವರ ಸಂಪೂರ್ಣ ಮುಖ ತೋರಿಸದ ರಕ್ಷಿತ್ ಶೆಟ್ಟಿ ರವರು, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಇವರು ಯಾರು ಎಂದು ಗುರುತಿಸಿ ಇವರು ನನ್ನ ಮುಂದಿನ ಸಿನಿಮಾದ ನಟಿ ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಇದಾದ ಬಳಿಕ ಮರುದಿನ ಆ ನಟಿ ಯಾರು ಎಂದು ಘೋಷಣೆ ಮಾಡಿರುವ ರಕ್ಷಿತ್ ಶೆಟ್ಟಿ ರವರು ಅಭಿಮಾನಿಗಳಿಗೆ ಇದ್ದ ಎಲ್ಲಾ ಅನುಮಾನಗಳಿಗೆ ಬ್ರೇಕ್ ಹಾಕಿದ್ದಾರೆ. ಇನ್ನು ಹೀಗೆ ರಕ್ಷಿತ್ ಶೆಟ್ಟಿ ರವರ ಜೊತೆ ನಟಿಸುವ ಅವಕಾಶ ಪಡೆದುಕೊಂಡ ನಟಿ ಮತ್ಯಾರು ಅಲ್ಲ ಅವರೇ ರುಕ್ಮಿನಿ ವಸಂತ್. ಇವರು ಯಾರು ಎಂಬುದನ್ನು ನೋಡುವುದಾದರೆ ಸ್ನೇಹಿತರೇ ನೀವು ಗಡಿಯಲ್ಲಿ ನಡೆದ ಒಂದು ಘಟನೆಯ ಬಗ್ಗೆ ತಿಳಿದುಕೊಳ್ಳಲೇಬೇಕು

ಹೌದು ಸ್ನೇಹಿತರೇ ಭಾರತ ಹಾಗೂ ಪಾಕಿಸ್ತಾನ ದೇಶಗಳ ಗಡಿಯಲ್ಲಿ ಉರಿ ಎಂಬ ಪ್ರದೇಶ ಕೇಳಿದ ಕೂಡಲೇ ನಿಮಗೆ ಸರ್ಜಿಕಲ್ ಸ್ಟ್ರೈಕ್ ನೆನಪಾಗುತ್ತದೆ. ಅಂದು ಭಾರತೀಯ ಸೇನೆಯು ಗಡಿದಾಟಿ ಪಾಕಿಸ್ತಾನಕ್ಕೆ ತನ್ನ ತಾಕತ್ತನ್ನು ಕೇವಲ ಪಾಕಿಸ್ತಾನಕ್ಕೆ ಅಲ್ಲದೆ ಇಡೀ ವಿಶ್ವಕ್ಕೆ ಸಾರಿತ್ತು. ಇದೇ ಉರಿ ಪ್ರದೇಶದಲ್ಲಿ ಕಳೆದ 2007ರಲ್ಲಿ ಒಮ್ಮೆ ಪಾಕಿಸ್ತಾನದ ನುಸುಳುಕೋರರು ಗಡಿಯೊಳಗೆ ಅಕ್ರಮ ಪ್ರವೇಶ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತದೆ. ಈ ಸುದ್ದಿ ಕೇಳಿದ ಕೂಡಲೇ ಮರಾಠ ಲೈಟ್ ಇನ್ಫೆಂಟ್ರಿಯ 9ನೇ ಬೆಟಾಲಿಯನ್ ನಾ ಕಮಾಂಡಿಂಗ್ ಆಫೀಸರ್ ಆಗಿದ್ದ ಕನ್ನಡಿಗ ವಸಂತ್ ನೇತೃತ್ವದ ಸೈನಿಕ ಪಡೆ ನುಸುಳುಕೋರರನ್ನು ತಡೆಯಲು ಅಲ್ಲಿಗೆ ತೆರಳುತ್ತದೆ.

ಸೈನ್ಯವನ್ನು ಮುನ್ನಡೆಸುತ್ತಿದ್ದ ಕರ್ನಲ್ ವಸಂತ್ ರವರು ನುಸುಳುಕೋರರನ್ನು ತಡೆಯುವಲ್ಲಿ ಯಶಸ್ವಿಯಾಗುತ್ತಾರೆ, ಎಂಟು ಜನ ಪಾಕಿಸ್ತಾನಿಯನ್ನು ಉಡೀಸ್ ಮಾಡುತ್ತಾರೆ. ಆದರೆ ವಿಧಿಯಾಟದಲ್ಲಿ ಬಂಧಿಯಾದ ಕರ್ನಲ್ ವಸಂತ್ ಕುಮಾರ್ ರವರು ಅದೇ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಭಾರತಮಾತೆಗೆ ಅರ್ಪಿಸುತ್ತಾರೆ. ಇವರು ಇಹಲೋಕ ತ್ಯಜಿಸಿದಾಗ ಚಿಕ್ಕವಯಸ್ಸಿನ ಪತ್ನಿ ಹಾಗೂ ಮಗಳು ಇಬ್ಬರು ಕೂಡ ಅನಾಥರಾಗುತ್ತಾರೆ. ತದನಂತರ ಇವರ ಕಾರ್ಯವನ್ನು ಗುರುತಿಸಿದ ಭಾರತ, ವಸಂತ್ ರವರಿಗೆ ಅತ್ಯುನ್ನತ ಸೇನಾ ಗೌರವವಾದ ಅಶೋಕ ಚಕ್ರವನ್ನು ಪ್ರಶಸ್ತಿಯಾಗಿ ನೀಡಲಾಗುತ್ತದೆ.

ಇಂತಹ ಮಹಾನ್ ಯೋಧನ ಮಗಳು ಬೇರೆ ಯಾರು ಅಲ್ಲ ಅವರೇ ರುಕ್ಮಿನಿ ವಸಂತ್. ಇದೀಗ ಅವರಿಗೆ 26 ವರ್ಷ, ತಾಯಿಯು ಭರತ ನಾಟ್ಯ ಕಲಾವಿದೆಯಾಗಿರುವ ಕಾರಣ ಇವರು ಭರತನಾಟ್ಯ ಕಲಿತು ಕ್ರಮೇಣ ಮಾಡಲಿಂಗ್ ಕಡೆಗೆ ಮುಖ ಮಾಡುತ್ತಾರೆ. ತದನಂತರ ಸ್ಯಾಂಡಲ್ವುಡ್ನಲ್ಲಿ ಬೀರಬಲ್ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ. ಇದಾದ ಬಳಿಕ ಇದೀಗ ಇವರಿಗೆ ರಕ್ಷಿತ್ ಶೆಟ್ಟಿ ರವರ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದ್ದು, ನಿರ್ದೇಶಕ ಹೇಮಂತ್ ರವರು ಇವರ ಕಲೆಯನ್ನು ಗುರುತಿಸಿ ಅವಕಾಶ ನೀಡಿದ್ದಾರೆ. ಒಟ್ಟಿನಲ್ಲಿ ಭಾರತ ಯೋಧನ ಹೆಮ್ಮೆಯ ಪುತ್ರಿ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ಇಡೀ ಭಾರತದಲ್ಲಿ ಸದ್ದು ಮಾಡಲಿ ಎಂದು ನಮ್ಮ ತಂಡದ ಪರವಾಗಿ ಹಾರೈಸುತ್ತೇವೆ.

Post Author: Ravi Yadav