ಧಾರವಾಹಿ ಬಿಡಿ, ಹೊರಗೆ ಕೂಡ ಉತ್ತಮ ಕಾರ್ಯದ ಮೂಲಕ ಜನರ ಮನಗೆಲ್ಲುವಲ್ಲಿ ಯಶಸ್ವಿಯಾದ ಅನಿರುದ್ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿರುವ ಜೊತೆ ಜೊತೆಯಲಿ ಧಾರವಾಹಿ ಮೂಲಕ ಇದೀಗ ಕರ್ನಾಟಕದ ಮನೆಮಾತಾಗಿರುವ ಅನಿರುದ್ ರವರು ಆರ್ಯವರ್ಧನ್ ಪಾತ್ರದ ಮೂಲಕ ಹೀಗೆ ಜನರ ಮನ ಗೆದ್ದಿದ್ದಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅಕ್ಷರ ಸಹ ಎಲ್ಲರನ್ನು ಫಿದಾ ಆಗುವಂತೆ ಮಾಡಿರುವ ಅನಿರುದ್ ರವರು ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಇದೀಗ ಹೊಂದಿದ್ದಾರೆ. ಜೊತೆ ಜೊತೆಯಲಿ ಧಾರವಾಹಿ ಅನಿರುದ್ರ ವರಿಗೆ ಬಹಳ ಉತ್ತಮ ಹೆಸರು ತಂದುಕೊಟ್ಟಿದ್ದು, ಅನಿರುದ್ ರವರು ಈ ಉತ್ತಮ ಹೆಸರನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಹೌದು ಸ್ನೇಹಿತರೇ ಕನ್ನಡ ಚಿತ್ರರಂಗದ ನಟನಾಗಿ ಅನಿರುದ್ ರವರು ತಮ್ಮದೇ ಆದ ಪ್ರತ್ಯೇಕ ಅಭಿಮಾನಿ ಪ್ರತ್ಯೇಕ ಬಳಗವನ್ನು ಹೊಂದಿರಲಿಲ್ಲ. ಆದರೆ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಯಶಸ್ಸಿನ ಉತ್ತುಂಗಕ್ಕೆ ಏರಿರುವ ಅನಿರುದ್ ರವರು ಇದೀಗ ತಮ್ಮ ಹೆಸರು ಬಂದ ತಕ್ಷಣ ಯಶಸ್ಸು ಸಿಕ್ಕಿತು ಎಂದು ಕೈಕಟ್ಟಿ ಕುಳಿತಿಲ್ಲ ಅಥವಾ ಆ ಯಶಸ್ಸನ್ನು ಇನ್ಯಾವುದೋ ಅನಗತ್ಯ ಕೆಲಸಕ್ಕೆ ಬಳಸಿಕೊಳ್ಳುತ್ತಿಲ್ಲ ಬದಲಾಗಿ ಸಮಾಜದ ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ಮೂಲಕ ಜನರ ಮನಗೆಲ್ಲುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ.

ಹೌದು ಸ್ನೇಹಿತರೇ ಯಾಕಪ್ಪ ಇಷ್ಟೆಲ್ಲ ಹೊಗಳುತ್ತಿದ್ದೇವೆ ಎಂದುಕೊಳ್ಳಬೇಡಿ, ಯಾಕೆಂದರೆ ನಿಜವಾಗಲೂ ಅನಿರುದ್ ರವರು ಈ ರೀತಿಯ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಇಮೇಲ್ ಗಳ ಮೂಲಕ ಜನರು ತಮ್ಮ ಪರಿಸರದ ಸುತ್ತಮುತ್ತಲಿರುವ ಕಸದ ರಾಶಿ ಹಾಗೂ ಇನ್ನಿತರ ಸಮಾಜದಲ್ಲಿನ ಯಾವುದೇ ತೊಂದರೆಗಳನ್ನು ಅನಿರುದ್ ರವರಿಗೆ ತಿಳಿಸಿದರೇ ಸಾಕು ಅನಿರುದ್ ರವರು ತಮ್ಮ ಜನಪ್ರಿಯತೆ ಬಳಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಅಧಿಕಾರಿಗಳಿಗೆ ಜನರ ಸಮಸ್ಯೆಯನ್ನು ತಿಳಿಸಿಕೊಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇನ್ನು ಖ್ಯಾತ ಸೆಲೆಬ್ರೆಟಿ ಹೇಳಿದರೇ ಅಧಿಕಾರಿಗಳು ಖಂಡಿತ ಕೆಲಸ ಮಾಡುತ್ತಾರೆ. ಆದಕಾರಣ ಕಸದ ಸಮಸ್ಯೆ ಸೇರಿದಂತೆ ಇನ್ನಿತರ ಹಲವಾರು ಸಮಸ್ಯೆಗಳಿಗೆ ತಮ್ಮ ಜನಪ್ರಿಯತೆ ಬಳಸಿಕೊಂಡು ಅನಿರುದ್ ರವರು ಪರಿಹಾರ ನೀಡುತ್ತಿದ್ದಾರೆ. ಇವರ ಈ ಸಾಮಾಜಿಕ ಕಳಕಳಿ ಮೆರೆಯುವ ಕಾರ್ಯಗಳು ಹೀಗೆ ಇನ್ನಷ್ಟು ಮುಂದುವರೆಯಲಿ ಎಂದು ನಮ್ಮ ತಂಡದ ಪರವಾಗಿ ಹಾರೈಸುತ್ತೇವೆ.

Post Author: Ravi Yadav