ಕನ್ನಡತಿಗೆ ಶಾಕ್, ವಾರದ ಟಿಆರ್ಪಿ ಲಿಸ್ಟ್ ಹೊರಗೆ, ತುಸು ನೆಮ್ಮದಿ ಪಡೆದ ಗಿಣಿರಾಮ. ಹೇಗಿದೆ ಗೊತ್ತಾ ಟಿಆರ್ಪಿ ಲಿಸ್ಟ್??

ನಮಸ್ಕಾರ ಸ್ನೇಹಿತರೇ ಈ ವಾರವೂ ಕೂಡ ಕನ್ನಡ ಧಾರಾವಾಹಿಗಳ ನಡುವೆ ಹೆಚ್ಚಿನ ಪೈಪೋಟಿ ಕಂಡುಬಂದಿದೆ. ಆದರೆ ಈ ಬಾರಿಯ ಪಿಆರ್ಪಿ ಲಿಸ್ಟಿನಲ್ಲಿ ಕೆಲವೊಂದು ಅಚ್ಚರಿಯ ಘಟನೆಗಳು ನಡೆದು ಹೋಗಿದೆ. ಹೌದು ಸ್ನೇಹಿತರೇ ಭಾರೀ ಭರವಸೆ ಮೂಡಿಸಿದ್ದ ಕನ್ನಡತಿ ಧಾರಾವಾಹಿಗೆ ಒಂದು ಕಡೆ ಶಾಕ್ ಎದುರಾದರೆ ಮತ್ತೊಂದು ಕಡೆ ಇಷ್ಟು ದಿವಸ ಟಿಆರ್ಪಿ ಲಿಸ್ಟಿನಲ್ಲಿ ಮೇಲಕ್ಕೇರಲು ಕಷ್ಟಪಡುತ್ತಿದ್ದ ಗಿಣಿ ರಾಮ ಧಾರವಾಹಿಗೆ ತುಸು ನೆಮ್ಮದಿ ದೊರಕಿದೆ.

ಹೌದು ಸ್ನೇಹಿತರೇ ಪ್ರತಿ ವಾರದಂತೆ ಇವರು ಕೂಡ ಕನ್ನಡ ಧಾರವಾಹಿಗಳ ನಡುವೆ ಭಾರೀ ಪೈಪೋಟಿ ಕಂಡುಬಂದಿದ್ದು ಕಳೆದ ಕೆಲವು ವಾರಗಳಿಂದ ಬಹಳ ನಿರೀಕ್ಷೆ ಮೂಡಿಸಿ ವಾರದಿಂದ ವಾರಕ್ಕೆ ಹಲವಾರು ಸ್ಥಾನಗಳನ್ನು ಮೇಲೇರುತ್ತಿದ್ದ ಕನ್ನಡತಿ ಧಾರವಾಹಿ ಈ ವಾರ ನಿರಾಸೆಯನ್ನು ಅನುಭವಿಸಿದೆ. ಹಾಗಿದ್ದರೆ ಇನ್ಯಾಕೆ ತಡ ಬನ್ನಿ ಈ ವಾರದ ರೇಟಿಂಗ್ ಹೇಗಿದೆ ಎಂಬುದನ್ನು ಟಿಆರ್ಪಿ ಲೆಕ್ಕಾಚಾರದ ಮೂಲಕ ತಿಳಿದುಕೊಳ್ಳೋಣ.

ಸ್ನೇಹಿತರೇ ಕಳೆದ ಕೆಲವು ವಾರಗಳ ಟ್ರೆಂಡ್ ನಂತೆ ಈ ವಾರವೂ ಕೂಡ ಸತ್ಯ ಧಾರವಾಹಿ ಟಿಆರ್ಪಿ ಲಿಸ್ಟಿನಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಆರಂಭದಲ್ಲಿ ಮೊದಲನೇ ಸ್ಥಾನ ಪಡೆದು ಕೊಳ್ಳುವುದು ಸಾಮಾನ್ಯ ಸಂಗತಿ ಆದರೂ ಕೂಡ ಬಿಡುಗಡೆಯಾಗಿ ಹಲವಾರು ವಾರಗಳು ಕಳೆದರೂ ಕೂಡ ಸತ್ಯ ಧಾರವಾಹಿ ಮೊದಲನೇ ಸ್ಥಾನವನ್ನು ಭದ್ರವಾಗಿ ನೆಲೆಯೂರುವಲ್ಲಿ ಯಶಸ್ವಿಯಾಗಿದೆ. ಇನ್ನು ಎರಡನೇ ಸ್ಥಾನದಲ್ಲಿ ಕಳೆದ ವಾರ ಮೂರನೇ ಸ್ಥಾನಕ್ಕೆ ಜಾರಿದ್ದ ಗಟ್ಟಿಮೇಳ ಧಾರವಾಹಿ ಈ ಬಾರಿ ತನ್ನ ಮೂಲ ಸ್ಥಾನವಾದ ಎರಡನೇ ಸ್ಥಾನಕ್ಕೆ ವಾಪಸಾಗಿದೆ.

ಇನ್ನೂ ಹಲವಾರು ತಿರುವುಗಳನ್ನು ಪಡೆದುಕೊಂಡು ಕಳೆದ ವಾರ ಎರಡನೇ ಸ್ಥಾನಕ್ಕೆ ಏರಿದ್ದ ಜೊತೆ ಜೊತೆಯಲಿ ಧಾರವಾಹಿ ಇವಾಗ ಒಂದು ಸ್ಥಾನ ಕೆಳಗಡೆ ಬಂದು ಮೂರನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಕಳೆದ ವಾರದಂತೆ ಈ ವಾರವೂ ಕೂಡ ನಾಗಿಣಿ ಧಾರವಾಹಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ ಹಾಗೂ 5ನೇ ಸ್ಥಾನದಲ್ಲಿ ಪಾರು ಧಾರವಾಹಿ ಈ ವಾರವೂ ಕೂಡ ಮುಂದುವರೆದಿದೆ.

ಇನ್ನು ಕಳೆದ ವಾರ ಆರನೇ ಸ್ಥಾನ ಪಡೆದುಕೊಂಡಿದ್ದ ಮಂಗಳ ಗೌರಿ ಮಾಡುವೆ ಧಾರವಾಹಿ ಈ ವಾರವೂ ಕೂಡ 6ನೇ ಸ್ಥಾನದಲ್ಲಿ ಸ್ಥಾನ ಪಡೆದುಕೊಂಡಿದೆ. ಆದರೆ ಕಳೆದ ವಾರ ಎರಡು ಸ್ಥಾನ ಮೇಲಕ್ಕೇರಿ 9ನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಬಂದಿದ್ದ ಕನ್ನಡತಿ ಧಾರಾವಾಹಿ ಈ ವಾರ ಒಂದು ಸ್ಥಾನ ಕೆಳಗಡೆ ಹೋಗಿದೆ, ಅಂದರೆ ಎಂಟನೇ ಸ್ಥಾನಕ್ಕೆ ಜಾರಿದೆ. ಇನ್ನು ಇದೇ ಮೊಟ್ಟ ಮೊದಲ ಬಾರಿಗೆ ಗಿಣಿರಾಮ ಧಾರಾವಾಹಿ ಟಾಪ್ ಹತ್ತನೇ ಸಾಲಿಗೆ ಸೇರಿಕೊಂಡಿದ್ದು ಮುದ್ದುಲಕ್ಷ್ಮಿ ಧಾರವಾಹಿ ಜೊತೆ ಏಳನೇ ಸ್ಥಾನವನ್ನು ಹಂಚಿಕೊಂಡಿದೆ.

ಎಂಟನೇ ಸ್ಥಾನದಲ್ಲಿ ಕನ್ನಡತಿ ಧಾರಾವಾಹಿ ಸ್ಥಾನ ಪಡೆದು ಕೊಂಡಿದ್ದು, ಒಂಬತ್ತನೇ ಸ್ಥಾನದಲ್ಲಿ ನನ್ನರಸಿ ರಾಧೆ ಸ್ಥಾನ ಪಡೆದುಕೊಂಡಿದೆ. ಇನ್ನು ಹಲವಾರು ವಾರಗಳ ನಂತರ ಗೀತ ಧಾರಾವಾಹಿ 10ನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಟ್ಟಿನಲ್ಲಿ ಈ ವಾರವೂ ಟಾಪ್ ಹತ್ತರ ಸಾಲಿನಲ್ಲಿ ಹೆಚ್ಚಿನ ಸ್ಥಾನ ಪಲ್ಲಟವಾಗದೇ ಇದ್ದರೂ ಕೂಡ 7 8 9 10ನೇ ಸ್ಥಾನಕ್ಕೆ ಬಾರಿ ಬದಲಾವಣೆ ನಡೆದಿದೆ. ಒಟ್ಟಿನಲ್ಲಿ ಅದೇನೇ ಆಗಲಿ ಇದು ಈ ವಾರದ ಟಿಆರ್ಪಿ ಲಿಸ್ಟ್ ಹೀಗಿದ್ದೂ ಮುಂದಿನ ವಾರದ ಟಿಆರ್ಪಿ ಲಿಸ್ಟಿ ಅನ್ನು ಕೂಡ ಮುಂದಿನ ಗುರುವಾರ ನಿಮ್ಮ ಮುಂದೆ ತರುತ್ತವೆ ಧನ್ಯವಾದಗಳು.

Post Author: Ravi Yadav