ಸುಲಭ ಮತ್ತು ಸಿಂಪಲ್ ಆಗಿ ಆಲೂ ಪರೋಟ ಮಾಡಿ, ರುಚಿ ಮಾತ್ರ ಅದ್ಭುತ. ಹೇಗೆ ಗೊತ್ತೇ??

ಸುಲಭ ಮತ್ತು ಸಿಂಪಲ್ ಆಗಿ ಆಲೂ ಪರೋಟ ಮಾಡಿ, ರುಚಿ ಮಾತ್ರ ಅದ್ಭುತ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಬೆಳಗಿನ ತಿಂಡಿಗೆ ಆಗಿರಲಿ, ಅಥವಾ ಸಂಜೆಯ ಸ್ನಾಕ್ಸ್ ಗೆ ಹಾಗಿರಲಿ, ನೀವು ರುಚಿಯಾದ ತಿನಿಸು ಬೇಕು ಎಂಬ ಆಲೋಚನೆಯಲ್ಲಿ ಇದ್ದರೇ, ಬನ್ನಿ ಇಂದು ನಾವು ಆಲೂ ಪರೋಟ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಆಲೂ ಪರೋಟ ಮಾಡಲು ಬೇಕಾಗುವ ಸಾಮಗ್ರಿಗಳು: ಬೇಯಿಸಿದ 6 ಆಲೂಗಡ್ಡೆ, 2 ಬಟ್ಟಲು ಗೋದಿ ಹಿಟ್ಟು, ಸ್ವಲ್ಪ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಈರುಳ್ಳಿ, 2 ಹಸಿಮೆಣಸಿನ ಕಾಯಿ, ಸ್ವಲ್ಪ ಶುಂಠಿ, ಅರ್ಧ ಚಮಚ ಗರಂ ಮಸಾಲ, ಸ್ವಲ್ಪ ಅರಿಶಿನ ಪುಡಿ, ಸ್ವಲ್ಪ ಬೆಣ್ಣೆ.

ಆಲೂ ಪರೋಟ ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಗೋಧಿ ಹಿಟ್ಟು, ಸ್ವಲ್ಪ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರನ್ನು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ನಂತರ ಮತ್ತೊಂದು ಬಟ್ಟಲು ತೆಗೆದುಕೊಂಡು ಅದಕ್ಕೆ ಬೇಯಿಸಿ ಸಿಪ್ಪೆ ಬಿಡಿಸಿ ಸ್ಮ್ಯಾಶ್ ಮಾಡಿದ ಆಲೂಗೆಡ್ಡೆ, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣಗೆ ಹಚ್ಚಿದ ಈರುಳ್ಳಿ, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿ, ಸಣ್ಣಗೆ ಹಚ್ಚಿದ ಶುಂಠಿ, ಅರ್ಧ ಚಮಚ ಗರಂ ಮಸಾಲ, ಸ್ವಲ್ಪ ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಗೋಧಿ ಹಿಟ್ಟನ್ನು ತೆಗೆದುಕೊಂಡು ಸ್ವಲ್ಪ ಲಟ್ಟಿಸಿಕೊಳ್ಳಿ.

ನಂತರ ಅದರ ಮಧ್ಯಕ್ಕೆ ಮಿಕ್ಸ್ ಮಾಡಿಕೊಂಡು ಆಲೂಗೆಡ್ಡೆ ಮಿಶ್ರಣವನ್ನು ಇಟ್ಟು ಮತ್ತೆ ಗೋಧಿಹಿಟ್ಟಿನಿಂದ ಮುಚ್ಚಿಕೊಳ್ಳಿ. ನಂತರ ಚಪಾತಿಯ ರೀತಿಯಲ್ಲಿ ಲಟ್ಟಿಸಿಕೊಳ್ಳಿ. ಕೊನೆಯದಾಗಿ ಗ್ಯಾಸ್ ಮೇಲೆ ತವಾವನ್ನು ಇಟ್ಟು ಪರೋಟವನ್ನು ಹಾಕಿ ಎರಡೂ ಬದಿಯಲ್ಲಿ ಬೆಣ್ಣೆಯನ್ನು ಸವರಿ ಬೇಯಿಸಿಕೊಂಡರೆ ಆಲೂ ಪರೋಟ ಮೊಸರಿನೊಂದಿಗೆ ಸವಿಯಲು ಸಿದ್ಧ. ನೋಡಿದಿರಲ್ಲ ಸ್ನೇಹಿತರೇ, ಆಲೂ ಪರೋಟ ಹೇಗೆ ಮಾಡುವುದು ಎಂದು, ನಿಮ್ಮ ಅನುಕೂಲತೆಗಾಗಿ ಮೇಲೆ ಯೌಟ್ಯೂಬ್ ವಿಡಿಯೋ ಲಗತ್ತಿಸಲಾಗಿದ್ದು, ಒಮ್ಮೆ ನೋಡಿ ನಿಮ್ಮ ಮನೆಯಲ್ಲಿಯೂ ಕೂಡ ಟ್ರೈ ಮಾಡಿ, ರುಚಿ ಹೇಗಿದೆ ಏನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.