ಜೂನಿಯರ್ ಚಿರು ರವರ ಕುರಿತು ಮಾಧ್ಯಮಗಳಿಗೆ ಛೀಮಾರಿ ಹಾಕುತಿದ್ದಾರೆ ಜನ ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಳೆದ ವರ್ಷ ಕನ್ನಡ ಚಿತ್ರರಂಗ ಹಲವಾರು ಖ್ಯಾತನಾಮರನ್ನು ಕಳೆದುಕೊಂಡಿತು. ಜನರ ಮನಗೆದ್ದಿದ್ದ ನಮ್ಮ ನಿಮ್ಮೆಲ್ಲರ ನೆಚ್ಚಿನ ಚಿರಂಜೀವಿ ಸರ್ಜಾ ರವರು ಕಳೆದ ವರ್ಷ ವಿಧಿಯಾಟ ದಂತೆ ಇಹಲೋಕ ತ್ಯಜಿಸಿದರು. ಈ ಸುದ್ದಿಯನ್ನು ಅದೆಷ್ಟು ಜನ ಕೆಲವು ಗಂಟೆಗಳ ಕಾಲ ನಂಬಿರಲಿಲ್ಲ. ಆದರೆ ಸತ್ಯ ಎಂದಿಗೂ ಕಹಿಯಾಗುತ್ತದೆ ಎಂಬುದು ಅರ್ಥವಾಗಲು ಕೆಲವು ಗಂಟೆಗಳ ನಂತರ ತಿಳಿಯಿತು. ಇದಾದ ಬಳಿಕ ಎರಡು ಮೂರು ದಿನಗಳ ಕಾಲ ಎಲ್ಲಿ ನೋಡಿದರೂ ಚಿರಂಜೀವಿ ಸರ್ಜಾ ರವರ ಕುರಿತು ಹಲವಾರು ಸುದ್ದಿಗಳು ಪ್ರಕಟಣೆ ಯಾಗುತ್ತಿದ್ದವು

ಇದಾದ ಬಳಿಕ ಸರ್ಜಾ ಕುಟುಂಬ ಪ್ರತಿಬಾರಿಯೂ ಚಿಕ್ಕ ಕೆಲಸ ಮಾಡಿದರು ಕೂಡ ಮಾಧ್ಯಮಗಳು ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳಲು ಬಳಸಿಕೊಂಡವು. ಇದೆಲ್ಲ ಸರಿ ಯಾವುದಾದರೂ ಮಾಹಿತಿ ಇದ್ದರೆ ಖಂಡಿತ ಜನಗಳಿಗೆ ತಿಳಿಸಬಹುದು ಆದರೆ ಪ್ರತಿಯೊಬ್ಬ ನಟ ನಟಿ ಅಥವಾ ಯಾರೇ ಆಗಿರಲಿ ಅವರಿಗೂ ಕೂಡ ವೈಯಕ್ತಿಕ ಜೀವನ ಎಂದು ಇರುತ್ತದೆ. ಇದನ್ನು ಮರೆತ ಮಾಧ್ಯಮಗಳು ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳಲು ಇಲ್ಲಸಲ್ಲದ ಸುದ್ದಿಗಳನ್ನು ಹರಡಲು ಆರಂಭಿಸಿದರು, ಇಂದಿಗೂ ಕೂಡ ಪುಟ್ಟ ಮಗು ಎಂಬುದನ್ನು ನೋಡದೆ ಚಿರು ರವರ ಪುತ್ರ ಮುಂದೇನು ಆಗುತ್ತಾನೆ ಎಂದು ಜಾತಕ ಪರಿಶೀಲನೆ ಮಾಡುವುದು, ಈ ಸಮಯ ಚೆನ್ನಾಗಿದೆ ಆ ಸಮಯ ಚೆನ್ನಾಗಿಲ್ಲ ಎಂದು ವಿವರಣೆ ನೀಡುವುದು,

ಫೋಟೋ ಬಹಿರಂಗ, ಹೆಸರು ಬಹಿರಂಗ ಎಂದು ಟಿಆರ್ಪಿ ಹೆಚ್ಚಿಸಿಕೊಳ್ಳುವ ಕೆಲಸ ಮಾಡುವುದು, ಹೀಗೆ ವಿವಿಧ ರೀತಿಯಲ್ಲಿ ಸುದ್ದಿ ಇಲ್ಲದೆ ಇದ್ದರೂ ಕೂಡ ತಾವೇ ಸುದ್ದಿ ಸೃಷ್ಟಿಸಿ ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುವಲ್ಲಿ ಮಾಧ್ಯಮಗಳು ಯಶಸ್ವಿಯಾದವು. ಈಗಲೂ ಕೂಡ ಅಷ್ಟೇ ಚಿರಂಜೀವಿ ಮಗುವಿನ ನಾಮಕರಣ ಕೆಲವೇ ಕೆಲವು ದಿನಗಳಲ್ಲಿ ನಡೆಯುವುದು ಖಚಿತ ಆದರೆ ಅದಕ್ಕೂ ಮುನ್ನವೇ ಹಲವಾರು ಮಾಧ್ಯಮಗಳು ಈ ಕುರಿತು ಸುದ್ದಿ ಪ್ರಸಾರ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಿದ್ಧತೆ ನಡೆಸುತ್ತಿವೆ. ಹೆಸರು ಬಹಿರಂಗಗೊಂಡ ಮೇಲೆ ಸುದ್ದಿ ಪ್ರಸಾರ ಮಾಡಿ ಪಡೆದುಕೊಳ್ಳಲಿ ಆದರೆ ಹೆಸರು ಬಹಿರಂಗ ಮಾಡಿದೆ ಕೂಡ ಹೆಸರು ಜಾತಕದ ಪ್ರಕಾರ ಹೀಗೆ ಇಡಬೇಕು ಯಾವ ರಾಶಿ ಯಾವ ನಕ್ಷತ್ರ ಹೀಗೆ ಎಲ್ಲದರ ಮೇಲೂ ಒಂದೊಂದು ಹೆಸರು ತೆಗೆದುಕೊಂಡು ಒಬ್ಬಬ್ಬರು ಮನಬಂದಂತೆ ಹೆಸರುಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಅದೇನೇ ಆಗಲಿ ಸರ್ಜಾ ಕುಟುಂಬದ ನೋವು ಎಲ್ಲರಿಗೂ ತಿಳಿದಿದೆ ಹಾಗೆಂದು ಅವರ ನೋವಿನಿಂದ ಟಿಆರ್ಪಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav