ಎಷ್ಟೇ ಹೊತ್ತು ಇಟ್ಟರು ಗಟ್ಟಿಯಾಗದೆ ಇರುವ ಹಾಗೆ ಶಾವಿಗೆ ಪಾಯಸ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಾವು ಹಲವಾರು ಬಾರಿ ಶಾವಿಗೆ ಪಾಯಸ ವನ್ನು ಮನೆಯಲ್ಲಿ ಮಾಡಿರುತ್ತೇವೆ, ಆದರೆ ಆಧುನಿಕ ಜೀವನ ಶೈಲಿಯಲ್ಲಿ ಎಲ್ಲರೂ ಒಂದೇ ಸಮಯದಲ್ಲಿ ಕೂತು ಊಟ ಮಾಡುವುದು ಕೊಂಚ ಕಷ್ಟವೇ ಸರಿ. ಹೀಗಿರುವಾಗ ಶಾವಿಗೆ ಪಾಯಸ ಮಾಡಿದ ಕೆಲ ಹೊತ್ತಿಗೆ ಗಟ್ಟಿಯಾಗಿ ಬಿಡುತ್ತದೆ, ನಿಮ್ಮ ಮನೆಯಲ್ಲೂ ಕೂಡ ಇದೇ ರೀತಿಯ ಸಮಯಗಳನ್ನು ನೀವು ಎದುರಿಸಿದ್ದರೆ ಬನ್ನಿ, ಇಂದು ನಾವು ಶಾವಿಗೆ ಪಾಯಸ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ನಾವು ಹೇಳುವ ರೀತಿಯಲ್ಲಿ ಶಾವಿಗೆ ಪಾಯಸ ಮಾಡಿದರೆ ಎಷ್ಟೇ ಹೊತ್ತು ಇಟ್ಟರು ಸಹ ಪಾಯಸವು ಗಟ್ಟಿಯಾಗುವುದಿಲ್ಲ. ಶಾವಿಗೆ ಪಾಯಸ ಮಾಡಲು ಬೇಕಾಗುವ ಸಾಮಗ್ರಿಗಳು: ಕಾಲು ಬಟ್ಟಲು ತುಪ್ಪ,1 ಬಟ್ಟಲು ಶಾವಿಗೆ, 2 ಬಟ್ಟಲು ನೀರು, 1 ಲೀಟರ್ ಹಾಲು ,1 ಚಮಚ ಏಲಕ್ಕಿ ಪುಡಿ, ಕೇಸರಿ, ಸ್ವಲ್ಪ ಡ್ರೈ ಫ್ರೂಟ್.

ಶಾವಿಗೆ ಪಾಯಸ ಮಾಡುವ ವಿಧಾನ: ಒಂದು ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಕಾಲು ಬಟ್ಟಲಷ್ಟು ತುಪ್ಪವನ್ನು ಹಾಕಿ ಕಾಯಲು ಬಿಡಿ. ತುಪ್ಪ ಕಾದ ನಂತರ ಗೋಡಂಬಿ ಮತ್ತು ಬಾದಾಮಿಯನ್ನು ಹಾಕಿ ಪ್ರೈ ಮಾಡಿ ಪಕಕ್ಕೆ ತೆಗೆದು ಇಟ್ಟುಕೊಳ್ಳಿ. ನಂತರ ದ್ರಾಕ್ಷಿಯನ್ನು ಹಾಕಿ ಪ್ರೈ ಮಾಡಿ ಪಕಕ್ಕೆ ಇಟ್ಟುಕೊಳ್ಳಿ. ಬಾಣಲೆಯಲ್ಲಿ ಉಳಿದ ತುಪ್ಪಕ್ಕೆ 1 ಕಪ್ ಶಾವಿಗೆಯನ್ನು ಹಾಕಿಸಣ್ಣ ಹುರಿಯಲ್ಲಿ ಶಾವಿಗೆ ಕೆಂಪಗೆ ಹಾಗುವವರೆಗೂ ಹುರಿದುಕೊಳ್ಳಿ. ಮತ್ತೊಂದು ಕಡೆ 2 ಬಟ್ಟಲಿನಷ್ಟು ನೀರನ್ನು ಕಾಯಲು ಇಡಿ.

ನಂತರ ನೀರನ್ನು ಹುರಿದ ಶಾವಿಗೆಗೆ ಹಾಕಿಕೊಳ್ಳಿ.ತದನಂತರ 5 ನಿಮಿಷಗಳ ಕಾಲ ಕುದಿಯಲು ಬಿಡಿ.ಇದಕ್ಕೆ 1 ಲೀಟರ್ ಹಾಲನ್ನು ಹಾಕಿ ,ನಂತರ ಅರ್ಧ ಕಪ್ ನಷ್ಟು ಸಕ್ಕರೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮತ್ತೆ ಕುದಿಯಲು ಬಿಡಿ .ಪಾಯಸದ ಕಲರ್ ಗಾಗಿ ಸ್ವಲ್ಪ ಕೇಸರಿಯನ್ನು ಹಾಕಿ.ಕೇಸರಿ ಹಾಕುವುದು ನಿಮ್ಮ ಇಷ್ಟಕ್ಕೆ ಬಿಟ್ಟದ್ದು.ನಂತರ ಮತ್ತೆ ಕುದಿಯಲು ಬಿಡಿ .ಇದಕ್ಕೆ ಸ್ವಲ್ಪ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ತಿರುಗಿಸಿ.ಕೊನೆಯದಾಗಿ ಪಕಕ್ಕೆ ಇಟ್ಟುಕೊಂಡಿದ್ದ ಹುರಿದ ಡ್ರೈ ಫ್ರೂಟ್ ಹಾಕಿ ಮಿಕ್ಸ್ ಮಾಡಿದರೆ ಶಾವಿಗೆ ಪಾಯಸ ಸವಿಯಲು ಸಿದ್ಧ.

Post Author: Ravi Yadav