ನಮ್ಮ ನಿಮ್ಮೆಲ್ಲರ ನೆಚ್ಚಿನ ನರಸಿಂಹ ರಾಜು ರವರ ಮಗಳ ಕುರಿತು ನಿಮಗೆ ತಿಳಿಯದ ಮಾಹಿತಿ, ಟಾಪ್ ಪೋಷಕ ನಟಿ.

ನಮ್ಮ ನಿಮ್ಮೆಲ್ಲರ ನೆಚ್ಚಿನ ನರಸಿಂಹ ರಾಜು ರವರ ಮಗಳ ಕುರಿತು ನಿಮಗೆ ತಿಳಿಯದ ಮಾಹಿತಿ, ಟಾಪ್ ಪೋಷಕ ನಟಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ವಿವಿಧ ರೀತಿಯ ಕಲಾವಿದರನ್ನು ನೋಡಿದೆ. ನಾವು ಹಾಸ್ಯ ಕಲಾವಿದರ ಬಗ್ಗೆ ಮಾತನಾಡುವುದಾದರೆ ಕೆಲವೊಂದು ಹೆಸರುಗಳು ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತವೆ. ಅಂತಹ ಹೆಸರಿನಲ್ಲಿ ಕಂಡುಬರುವ ಪ್ರಮುಖ ಹೆಸರು ಎಂದರೆ ಹಾಸ್ಯಚಕ್ರವರ್ತಿ ಎಂದು ಖ್ಯಾತಿ ಪಡೆದುಕೊಂಡಿದ್ದ ನಮ್ಮ ನಿಮ್ಮೆಲ್ಲರ ನೆಚ್ಚಿನ ನರಸಿಂಹರಾಜು. ಇನ್ನು ಸ್ನೇಹಿತರೆ ಹೀಗಿನ ಕಾಲದಲ್ಲಿ ಹಾಸ್ಯ ಎಂದ ತಕ್ಷಣ ಒಂದು ಡಬಲ್ ಮೀನಿಂಗ್ ಡೈಲಾಗ್ ಎಂದರ್ಥ ಆದರೆ ಅಂದಿನ ಕಾಲದಲ್ಲಿ ಯಾವುದೇ ಡಬಲ್ ಮೀನಿಂಗ್ ಡೈಲಾಗ್ ಗಳಿಲ್ಲದೆ ಜನರನ್ನು ನಕ್ಕು ನಲಿಸುವಲ್ಲಿ ಡೈಲಾಗ್ ಗಳ ಮೂಲಕ ಅಷ್ಟೇ ಅಲ್ಲದೆ ತಮ್ಮ ಹಾವಭಾವದ ಮೂಲಕ ನರಸಿಂಹರಾಜು ಅವರು ಯಶಸ್ವಿಯಾಗಿದ್ದರು.

1956 ತಿಂದ 1979 ರವರೆಗೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿರುವ ನರಸಿಂಹರಾಜು ರವರ ಕುಟುಂಬದ ಬಗ್ಗೆ ನಾವು ಮಾತನಾಡುವುದಾದರೆ ನರಸಿಂಹರಾಜು ಅವರ ಪತ್ನಿ ಹೆಸರು ಶಾರದಮ್ಮ ಹಾಗೂ ಈ ದಂಪತಿಗಳಿಗೆ ನರಹರಿ ರಾಜು, ಸುಧಾ ನರಸಿಂಹರಾಜು ಹಾಗೂ ಧರ್ಮಾವತಿ ಎಂಬ ಮಕ್ಕಳಿದ್ದಾರೆ. ಸುಧಾ ನರಸಿಂಹರಾಜು ರವರು ಇದೀಗ ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕನ್ನಡದ ಟಾಪ್ ಧಾರವಾಹಿ ಒಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ.

ಹೌದು ಸ್ನೇಹಿತರೇ ಸುಧಾ ನರಸಿಂಹರಾಜು ರವರು 7 ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿದ್ದರು, ಅದ್ಯಾಕೋ ತಿಳಿದಿಲ್ಲ 1995 ರಲ್ಲಿ ಸಿನಿಮಾ ಚಿತ್ರರಂಗದಿಂದ ದೂರ ಹೋಗಲು ನಿರ್ಧಾರ ಮಾಡುತ್ತಾರೆ. ಬರೋಬ್ಬರಿ 20 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದ ಸುಧಾ ನರಸಿಂಹರಾಜು ಅವರು ತದನಂತರ ಕಿರುತೆರೆಯಲ್ಲಿ ನಟನೆ ಮಾಡಲು ನಿರ್ಧಾರ ಮಾಡಿ ಕನ್ನಡದ ಟಾಪ್ ಧಾರವಾಹಿ ಒಂದಾಗಿರುವ ಗಟ್ಟಿಮೇಳ ಧಾರಾವಾಹಿಯಲ್ಲಿ ನಟನೆ ಮಾಡಲು ಒಪ್ಪಿಕೊಳ್ಳುತ್ತಾರೆ. ನಾಲ್ಕು ಹೆಣ್ಣು ಮಕ್ಕಳ ತಾಯಿಯಾಗಿ ಪಾತ್ರ ನಿರ್ವಹಣೆ ಮಾಡಿರುವ ಸುಧಾ ನರಸಿಂಹರಾಜು ಅವರು, ಇದೀಗ ತಮ್ಮ ಕಿರುತೆರೆಯ ನಟನೆಯ ಮೂಲಕ ಎಲ್ಲರ ಮನಗೆದ್ದಿದ್ದಾರೆ.