ಮತ್ತೊಂದು ವಾರದ ಟಿಆರ್ಪಿ ಲಿಸ್ಟ್ ಬಿಡುಗಡೆ, ಜಿಗಿದ ಕನ್ನಡತಿ, ಜೊತೆ ಜೊತೆಯಲಿ, ಯಾವುದಕ್ಕೆ ಎಷ್ಟನೇ ಸ್ಥಾನ ಗೊತ್ತಾ??

ಮತ್ತೊಂದು ವಾರದ ಟಿಆರ್ಪಿ ಲಿಸ್ಟ್ ಬಿಡುಗಡೆ, ಜಿಗಿದ ಕನ್ನಡತಿ, ಜೊತೆ ಜೊತೆಯಲಿ, ಯಾವುದಕ್ಕೆ ಎಷ್ಟನೇ ಸ್ಥಾನ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಧಾರಾವಾಹಿಗಳ ನಡುವಿನ ಪೈಪೋಟಿ ಪ್ರತಿದಿನವೂ ಹೆಚ್ಚಾಗುತ್ತಿದೆ ಎಂದರೆ ಸುಳ್ಳಾಗಲಾರದು. ಪ್ರತಿ ಧಾರವಾಹಿಗಳು ಟಿಆರ್ಪಿ ಪಡೆದುಕೊಂಡು ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳಲು ಹಲವಾರು ರೀತಿಯ ಪ್ರಯತ್ನಗಳು ಹಾಗೂ ಯೋಜನೆಗಳನ್ನು ರೂಪಿಸಿ ಧಾರವಾಹಿ ನಿರ್ಮಾಣ ಮಾಡುತ್ತವೆ. ಇದೀಗ ಕಳೆದ ವಾರದ ಪಿಆರ್ಪಿ ಲಿಸ್ಟ್ ಬಿಡುಗಡೆಯಾಗಿದ್ದು ಹಿಂದಿನ ಟಿಆರ್ಪಿ ಲಿಸ್ಟಿನಲ್ಲಿ ಆದಂತಹ ಹೆಚ್ಚು ಬದಲಾವಣೆಗಳು ಈ ಲಿಸ್ಟಿನಲ್ಲಿ ಕೂಡ ಆಗಿದೆ,

ಇದಕ್ಕೆಲ್ಲಾ ಕಾರಣಗಳೆಂದರೆ ದಿನೇ ದಿನೇ ಧಾರವಾಹಿಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿರುವುದು. ಹೌದು ಸ್ನೇಹಿತರೇ ಇದೀಗ ಕಳೆದ ವಾರದಲ್ಲಿ ಟಿಆರ್ಪಿ ಲಿಸ್ಟ್ ಬಿಡುಗಡೆಯಾಗಿದ್ದು ಕೆಲವು ದಾರವಾಹಿಗಳು ಸಾಕಷ್ಟು ಹೊಸ ಪ್ರಯತ್ನಗಳ ನಂತರ ತಮ್ಮ ಟಿಆರ್ಪಿ ಯನ್ನು ಹೆಚ್ಚಿಸಿಕೊಂಡಿವೆ. ಇನ್ನು ಕನ್ನಡತಿ ಧಾರಾವಾಹಿ ಕೂಡ ಅಂದುಕೊಂಡಂತೆ ದಿನೇದಿನೇ ತನ್ನ ಟಿಆರ್ಪಿ ಅನ್ನು ಹೆಚ್ಚಿಸಿಕೊಳ್ಳುತ್ತಿದೆ. ಬನ್ನಿ ಆಗಿದ್ದರೆ ಈ ವಾರದ ಟಿಆರ್ಪಿ ಲಿಸ್ಟ್ ಹೇಗಿದೆ ಎಂಬುದನ್ನು ತಿಳಿಯೋಣ.

ಸ್ನೇಹಿತರೇ ಕಳೆದ ಕೆಲವು ವಾರಗಳ ಟ್ರೆಂಡ್ ನಂತೆ ಈ ವಾರವೂ ಕೂಡ ಸತ್ಯ ಧಾರವಾಹಿ ಟಿಆರ್ಪಿ ಲಿಸ್ಟಿನಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೊಸ ಧಾರವಾಹಿ ಆದರೂ ಕೂಡ ಸತತ ಬಿಡುಗಡೆಯಾದ ದಿನದಿಂದಲೂ ಈ ಧಾರವಾಹಿ ಮೊದಲನೇ ಸ್ಥಾನದಲ್ಲಿ ಭದ್ರವಾಗಿ ನೆಲೆಯೂರಿದೆ. ಇನ್ನು ಎಷ್ಟು ದಿವಸ ಟಿಆರ್ಪಿ ಲೆಕ್ಕಾಚಾರದಲ್ಲಿ ಕೊಂಚ ಹಿಂದೆ ಉಳಿಡಿದ್ದ ಜೊತೆ ಜೊತೆಯಲಿ ಧಾರವಾಹಿ ಈ ಬಾರಿ ಗಟ್ಟಿಮೇಳ ಧಾರವಾಹಿ ಹಲವಾರು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದರೂ ಕೂಡ ಗಟ್ಟಿಮೇಳ ಧಾರಾವಾಹಿಯನ್ನು ಮೀರಿಸಿ ಎರಡನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇನ್ನು ಎರಡನೇ ಸ್ಥಾನದಲ್ಲಿ ಭದ್ರವಾಗಿ ಹಲವಾರು ತಿಂಗಳುಗಳಿಂದ ನೆಲೆಯುರಿರುವ ಗಟ್ಟಿಮೇಳ ಧಾರವಾಹಿಯ ಮೂರನೇ ಸ್ಥಾನ ಸ್ಥಾನಕ್ಕೆ ಜಾರಿದೆ, ಇನ್ನುಳಿದಂತೆ ಕಳೆದ ವಾರದಲ್ಲಿ ಟಿಆರ್ಪಿ ಲಿಸ್ಟಿನಲ್ಲಿ ಇರುವಂತೆ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಕ್ರಮವಾಗಿ ನಾಗಿಣಿ ಭಾಗ-2 ಧಾರವಾಹಿ ಹಾಗೂ ಜೀ ಕನ್ನಡ ವಾಹಿನಿಯ ಮತ್ತೊಂದು ಧಾರವಾಹಿ ಪಾರು ಸ್ಥಾನ ಪಡೆದುಕೊಂಡಿದೆ. ಕಳೆದ ವಾರ ಕೂಡ ಈ ಎರಡು ಧಾರವಾಹಿಗಳು ನಾಲ್ಕು ಮತ್ತು ಐದನೇ ಸ್ಥಾನವನ್ನು ಕ್ರಮವಾಗಿ ಪಡೆದುಕೊಂಡಿದ್ದವು, ಈ ವಾರವೂ ಕೂಡ ಅದೇ ರೀತಿ ಆಗಿದೆ.

ಇನ್ನು ಹಲವಾರು ದಿನಗಳಿಂದ ಬಹು ನಿರೀಕ್ಷೆಗಳಿಂದ ಟಿಆರ್ಪಿ ಲಿಸ್ಟಿನಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಕನ್ನಡತಿ ಧಾರಾವಾಹಿ ದಿನೇ ದಿನೇ ತನ್ನ ಟಿಆರ್ಪಿ ಹೆಚ್ಚಿಸಿಕೊಳ್ಳುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ, ಕಳೆದ ವಾರ ಒಂಬತ್ತನೇ ಸ್ಥಾನದಲ್ಲಿದ್ದ ಕನ್ನಡದ ಧಾರವಾಹಿ ಈ ವಾರ ಒಮ್ಮೆಲೆ ಎರಡು ಸ್ಥಾನ ಜಿಗಿದು ಏಳನೇ ಸ್ಥಾನಕ್ಕೆ ಬಂದು ನಿಂತಿದೆ, ಇನ್ನು 6ನೇ ಸ್ಥಾನದಲ್ಲಿ ಮಂಗಳ ಗೌರಿ ಧಾರವಾಹಿ ಈ ವಾರವೂ ಕೂಡ ಮುಂದುವರೆದಿದ್ದು, ಮುದ್ದು ಲಕ್ಷ್ಮಿ ಧಾರವಾಹಿ ಎಂಟನೇ ಸ್ಥಾನಕ್ಕೆ ಏರಿಕೆಯಾಗಿದೆ. ಇನ್ನುಳಿದಂತೆ ಕಮಲಿ, ನಮ್ಮನೆ ಯುವರಾಣಿ ಧಾರವಾಹಿಗಳು 9 ಹಾಗೂ ಹತ್ತನೇ ಸ್ಥಾನದಲ್ಲಿದ್ದು, ಈ ಎಲ್ಲಾ ದಾರವಾಹಿಗಳು ಈ ವಾರದ ಟಾಪ್ 10 ಧಾರಾವಾಹಿಗಳಾಗಿವೆ.

ಒಟ್ಟಿನಲ್ಲಿ ಅದೇನೇ ಆಗಲಿ ಈ ವಾರವೂ ಕೂಡ ಪಿಆರ್ಪಿ ಲಿಸ್ಟಿನಲ್ಲಿ ಮೊದಲ ಐದು ಸ್ಥಾನಗಳಲ್ಲಿ ಯಾವುದೇ ಹೆಚ್ಚಿನ ಬದಲಾವಣೆ ಕಂಡು ಬರದೆ ಇದ್ದರೂ ಕೂಡ ಕನ್ನಡತಿ ಧಾರವಾಹಿ ಎರಡು ಸ್ಥಾನಗಳನ್ನು ಏರುವ ಮೂಲಕ ಖಂಡಿತ ಇನ್ನು ಕೆಲವೇ ಕೆಲವು ದಿನಗಳಲ್ಲಿ ಟಾಪ್ ಐದರ ಸಾಲಿಗೆ ಬರುವ ಸೂಚನೆ ನೀಡಿದೆ. ಹೀಗೆ ಆದರೂ ಕೂಡ ಅಚ್ಚರಿಪಡಬೇಕಾಗಿಲ್ಲ. ಇನ್ನು ಮಂಗಳ ಗೌರಿಮದುವೆ ಎಂದಿನಂತೆ ಹಿರಿಯ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಕಾರಣ 6 ನೇ ಸ್ಥಾನದಲ್ಲಿ ಭದ್ರವಾಗಿ ಕುಳಿತಿದೆ.