ಡಾಕ್ಟರ್ ಹೇ, ಡೈಲಾಗ್ ಖ್ಯಾತಿಯ ಸಿಲ್ಲಿಲಲ್ಲಿ ಎನ್ಎಂಲ್ (NML) ಈಗ ಏನು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಾವು ನೀವು ಎಲ್ಲರೂ ಕೂಡ ಬಾಲ್ಯದಲ್ಲಿರುವಾಗ ಮಿಸ್ ಮಾಡದೆ ನೋಡುತ್ತಿದ್ದ ಕಾರ್ಯಕ್ರಮಗಳಲ್ಲಿ ಒಂದು ಎಂದರೆ ಅದು ಸಿಲ್ಲಿ ಲಲ್ಲಿ ಧಾರಾವಾಹಿ. ಹೌದು ಸ್ನೇಹಿತರೇ ಈ ಸಿಲ್ಲಿ ಲಲ್ಲಿ ಧಾರಾವಾಹಿ ಯನ್ನು ಇಷ್ಟಪಡದವರು ಯಾರು ಇಲ್ಲ. ಇನ್ನು ಸಿಲ್ಲಿ ಲಲ್ಲಿ ಧಾರಾವಾಹಿ ಎಂದ ತಕ್ಷಣ ನಮಗೆ ನೆನಪಾಗುವುದು, ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ನಟನೆ ಮಾಡಿದ್ದ ವಿಠಲರಾವ್, ಲಲಿತಾಂಬಾ, ವಿಶಾಲಾಕ್ಷಿ, NML ಹಾಗೂ ರಂಗನಾಥ. ಇದರಲ್ಲಿ ವಿಠಲರಾವ್ ಅವರ ಪಾತ್ರವನ್ನು ಮಾಡಿದ್ದು ರವಿಶಂಕರ್, ಇನ್ನು ಲಲಿತಾಂಬಾ ಪಾತ್ರವನ್ನು ಮಂಜು ಭಾಷಿಣಿ, NML ಪಾತ್ರವನ್ನು ನಮಿತಾ ರಾವ್ ರವರು ಮಾಡಿದ್ದಾರೆ.

ಅಂದಹಾಗೆ ಇಂದು ನಾವು ಎನ್ಎಂಎಲ್ ಪಾತ್ರವನ್ನು ಮಾಡಿದ ನಮಿತಾ ರಾವ್ ರವರು, ಈಗ ಎಲ್ಲಿದ್ದಾರೆ ಹಾಗೂ ಅವರ ಕುಟುಂಬ ಹೇಗಿದೆ, ಅವರು ಈಗ ಏನು ಮಾಡುತ್ತಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ನೀಡುತ್ತೇವೆ ಕೇಳಿ. ಸ್ನೇಹಿತರೇ ನಮಿತಾ ರಾವ್ ರವರು 16ನೇ ವಯಸ್ಸಿನಲ್ಲಿ ಇರುವಾಗಲೇ ತಮ್ಮ ತಂದೆಗೆ ಸಹಾಯ ಆಗಲಿ ಎಂದು ಪಾರ್ಟ್ ಟೈಮ್ ನಿರೂಪಕರಾಗಿ ಸಿಟಿ ಕೇಬಲ್ ಎಂಬ ಒಂದು ಚಾನೆಲ್ನಲ್ಲಿ ನಿರೂಪಕಿಯಾಗಿ ಕೆಲಸ ಮಾಡಲು ಆರಂಭಿಸುತ್ತಾರೆ.

ನಂತರ ರಂಗಭೂಮಿಯಲ್ಲಿ ಕ್ರಮೇಣ ಕೆಲಸ ಮಾಡಲು ಶುರು ಮಾಡಿದ ನಮಿತಾ ರಾವ್ ರವರು ಡ್ಯಾನ್ಸ್ ಕ್ಲಾಸ್ ಗೆ ಸೇರಿಕೊಂಡು ಡ್ಯಾನ್ಸ್ ಕೂಡ ಕಲಿಯುತ್ತಾರೆ. ಇದಾದ ಬಳಿಕ ನಾಟಕಗಳಲ್ಲಿ ನಟಿಸಲು ಆರಂಭಿಸಿದ ನಮಿತಾ ರಾವ್ ರವರು, ಹಲವಾರು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇವರು ನಾಟಕಗಳಲ್ಲಿ ನಟನೆ ಮಾಡುತ್ತಿದ್ದ ರೀತಿಯನ್ನು ನೋಡಿದ ವಿಜಯ್ ಪ್ರಸಾದ್ ರವರು, ತಾವು ನಿರ್ದೇಶನ ಮಾಡುತ್ತಿದ್ದ ಸಿಲ್ಲಿಲಲ್ಲಿ ಧಾರವಾಹಿಯಲ್ಲಿ ನಟಿಸುವಂತೆ ಅವಕಾಶ ನೀಡುತ್ತಾರೆ. ಇಲ್ಲಿಯವರೆಗೂ ಯಾರಿಗೂ ತಿಳಿಯದ ನಮಿತಾ ರಾವ್ ರವರು, ಸಿಲ್ಲಿ ಲಲ್ಲಿ ಧಾರವಾಹಿಯಲ್ಲಿ ಡಾಕ್ಟರ್ ವಿಠಲರಾವ್ ಅವರ ಜೊತೆ ಸಾಕಷ್ಟು ಹಾಸ್ಯ ದೃಶ್ಯಗಳಲ್ಲಿ ನಟನೆ ಮಾಡಿ ಅದ್ಭುತವಾಗಿ ನಟಿಸಿ ಕರ್ನಾಟಕದ ಜನತೆಯ ಗೆಲ್ಲುವುದರಲ್ಲಿ ಯಶಸ್ವಿಯಾಗುತ್ತಾರೆ.

ಭಾರೀ ಜನಪ್ರಿಯತೆಯನ್ನು ಪಡೆದು ಕೊಂಡ ಪಾತ್ರಗಳಲ್ಲಿ NML ಪಾತ್ರ ಒಂದಾಗುತ್ತದೆ. ಇದಾದ ಬಳಿಕ ಸಿಲ್ಲಿ ಲಲ್ಲಿ ಧಾರಾವಾಹಿ ಮುಗಿದ ನಂತರ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಆರಂಭಿಸಿದ ನಮಿತಾ ರಾವ್ ರವರು ಹಾಸ್ಯ ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ ಕೆಲಸ ಮಾಡುತ್ತಾರೆ, ಶೋ ಬೇರೆ ಯಾವುದೂ ಅಲ್ಲ ಅದುವೇ ಕಾಮಿಡಿ ದರ್ಬಾರ್. ಹೀಗೆ ನಿರೂಪಕರಾಗಿ ಹಾಗೂ ನಟಿಯಾಗಿ ಕೆಲಸ ಮಾಡುತ್ತಾ ಹಲವಾರು ದಿನಗಳ ಬಳಿಕ ಮತ್ತೊಂದು ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿರುವ ಪಾಪಪಾಂಡು ಖ್ಯಾತಿಯ ಗೋಪಿ ಅಂದರೆ ವಿಕ್ರಮ್ ರವರ ಜೊತೆ ಮದುವೆಯಾಗುತ್ತಾರೆ.

ಮದುವೆಯಾದ ಬಳಿಕ ಕೆಲವು ವರ್ಷಗಳ ಕಾಲ ಕಿರುತೆರೆಯಿಂದ ದೂರವುಳಿದು, ತದನಂತರ ಫ್ಯಾಮಿಲಿ ಲೈಫ್ನಲ್ಲಿ ಬಿಜಿಯಾಗಿ ಇದೀಗ ಇವರು ನವಿ ನಿರ್ಮಿತಿ ಎಂಬ ಸಂಸ್ಥೆಯನ್ನು ಹೊಂದಿದ್ದಾರೆ. ಇಲ್ಲಿ ಚಿತ್ರಗಳನ್ನು ಹಾಡುಗಳನ್ನು ಹಾಗೂ ವಿಡಿಯೋಗಳನ್ನು ನಿರ್ಮಾಣ ಮಾಡಲಾಗುತ್ತದೆ. ಇಷ್ಟೇ ಅಲ್ಲದೆ ಅವಾಗವಾಗ ನಮಿತಾ ರಾವ್ ರವರು ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಹಾಗೂ ಸ್ಪರ್ಧಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸುದ್ದಿಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಹಾಗೂ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ

Post Author: Ravi Yadav