ಜಂಗಲ್ ಬುಕ್ ಭಗೀರನಿಂದ ಹಿಡಿದು,ಖ್ಯಾತ ವಿಲ್ಲನ್ ಗಳಿಗೆ ಧ್ವನಿ ನೀಡಿರುವ ಜೊತೆ ಜೊತೆಯಲಿ ಪಾತ್ರದಾರಿ ಯಾರು ಗೊತ್ತೇ??

ಜಂಗಲ್ ಬುಕ್ ಭಗೀರನಿಂದ ಹಿಡಿದು,ಖ್ಯಾತ ವಿಲ್ಲನ್ ಗಳಿಗೆ ಧ್ವನಿ ನೀಡಿರುವ ಜೊತೆ ಜೊತೆಯಲಿ ಪಾತ್ರದಾರಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾವು ಹಲವಾರು ಕಲಾವಿದರನ್ನು ಪರದೆಯ ಮೇಲೆ ನೋಡಿರುತ್ತೇವೆ, ಪರದೆಯ ಮೇಲೆ ನಟನೆ ಕುರಿತು ನಮಗೆಲ್ಲರಿಗೂ ತಿಳಿದೇ ಇರುತ್ತದೆ. ಅಂತಹ ಸಂದರ್ಭದಲ್ಲಿ ಪರದೆಯ ಹಿಂದೆ ನಡೆಯುವ ಅದೆಷ್ಟು ವಿಷಯಗಳು ನಮಗೆ ತಿಳಿದಿರುವುದಿಲ್ಲ. ಪರದೆಯ ಮುಂದೆ ನಟನೆ ಮಾಡುವ ಹಲವಾರು ಕಲಾವಿದರು ಪರದೆಯ ಹಿಂದೆ ಇನ್ನು ವಿವಿಧ ರೀತಿಯಲ್ಲಿ ಕಮಲ್ ನಡೆಸುತ್ತಾರೆ. ನಾವು ಇಂದು ಅದೇ ರೀತಿ ಒಬ್ಬ ನಟನ ಬಗ್ಗೆ ಹೇಳುತ್ತೇವೆ, ಆ ನಟ ಪ್ರತಿದಿನ ನಿಮ್ಮ ಮುಂದೆ ಟಿವಿಯಲ್ಲಿ ಕಾಣಿಸಿ ಕೊಳ್ಳುತ್ತಾರೆ ಆದರೆ ಅವರ ಕುರಿತು ನಿಮಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ ಎಂದರೆ ನೀವು ನಂಬಲೇಬೇಕು.

ಬನ್ನಿ ಹಾಗಿದ್ದರೆ, ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಹಾಗೂ ಯಾಕೆ ಇಂದು ಅವರ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳೋಣ. ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚೆಗೆ ಇಂಗ್ಲಿಷ್ ಸೇರಿದಂತೆ ಇತರ ಭಾಷೆಗಳ ಸಿನಿಮಾಗಳು ಕನ್ನಡಕ್ಕೆ ಅನುವಾದ ಗೊಳ್ಳುತ್ತಿವೆ, ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದಗೊಳ್ಳುವುದು ಇದೀಗ ಸರ್ವೇಸಾಮಾನ್ಯವಾಗಿದೆ. ಇಂಗ್ಲೀಷ್ ನಿಂದ ಭಾರತೀಯ ಭಾಷೆಗಳಿಗೆ, ಭಾರತದ ಭಾಷೆಗಳಿಂದ ಇಂಗ್ಲಿಷ್ ಭಾಷೆಗಳಿಗೆ ಅನುವಾದ ಮಾಡಿಕೊಂಡು ಪ್ರಸಾರವಾಗುವ ಚಿತ್ರಗಳು ದಿನೇ ದಿನೇ ಹೆಚ್ಚಾಗುತ್ತಿವೆ.

ಇಂತಹ ಸಂದರ್ಭದಲ್ಲಿ ಹಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಗಳಿಸಿರುವ ಜಂಗಲ್ ಬುಕ್ ಸಿನಿಮಾದಲ್ಲಿ ಪ್ರಮುಖ ಪಾತ್ರವಾದ ಭಗೀರ ಪಾತ್ರಕ್ಕೆ ಧ್ವನಿ ನೀಡಿರುವುದು ಮತ್ತ್ಯಾರು ಅಲ್ಲ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ಆರ್ಯವರ್ಧನ್ ಗೆಳೆಯನಾಗಿ ಸುಖ ದುಃಖದಲ್ಲಿ ಭಾಗಿಯಾಗಿ, ನಮ್ಮೆಲ್ಲರನ್ನು ಮನರಂಜಿಸುತ್ತಿರುವ ಝೇಂಡೇ ಪಾತ್ರದಾರಿ ವೆಂಕಟೇಶ್. ಇಷ್ಟೇ ಅಲ್ಲ ಇವರು ತೆಲುಗು ಚಿತ್ರರಂಗದ ಖ್ಯಾತ ವಿಲ್ಲನ್ ಗಳಾದ ಆಶಿಶ್ ವಿದ್ಯಾರ್ಥಿ, ಜಗಪತಿ ಬಾಬು ರವರಿಗೆ ಕಂಠದಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸುರೇಶ್ ಹೆಬ್ಳೀಕರ್ ಅವರ ಡಾಕ್ಯುಮೆಂಟರಿಗೆ ಕೂಡ ಇವರು ಧ್ವನಿ ನೀಡಿದ್ದಾರೆ. ಸಾಹಿತ್ಯದ ಕಡೆ ಒಲವನ್ನು ಹೊಂದಿರುವ ಇವರು ಹಲವಾರು ಪುಸ್ತಕಗಳನ್ನು ಓದಿದ್ದಾರೆ, ಕಂಠದಾನ ಬರವಣಿಗೆ ವಿಭಾಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೀಗೆ ಹಲವಾರು ಪಾತ್ರಗಳಿಗೆ ಕಂಠದಾನ ಮಾಡಿರುವ ಝೇಂಡೇ ರವರಿಗೆ ಮುಂದಿನ ದಿನಗಳು ಮತ್ತಷ್ಟು ಯಶಸ್ಸಿನ ದಿನಗಳ ಆಗಲಿ ಎಂದು ಹಾರೈಸುತ್ತೇವೆ.