ಕನ್ನಡ ಸಿನಿಮಾ ರಂಗದಲ್ಲಿ ಟಾಪ್ ನಟಿಯರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ??

ಕನ್ನಡ ಸಿನಿಮಾ ರಂಗದಲ್ಲಿ ಟಾಪ್ ನಟಿಯರು ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಸಿನಿಮಾ ಚಿತ್ರರಂಗದಲ್ಲಿ ಒಮ್ಮೆ ನಟರಾಗಿರಲಿ ಅಥವಾ ನಟಿಯರಾಗಿರಲಿ ಯಶಸ್ಸಿನ ಚಿತ್ರಗಳನ್ನು ನೀಡಿದ ತಕ್ಷಣ ಬೇಡಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಸಾಲು-ಸಾಲು ಯಶಸ್ಸಿನ ಚಿತ್ರಗಳು ನೀಡಿದರೇ ಸಾಕು ನಟರಾಗಿರಲಿ ಅಥವಾ ನಟಿಯರಾಗಿರಲಿ ಅವರ ಮುಂದೆ ನಿರ್ಮಾಪಕರು ಹಾಗೂ ನಿರ್ದೇಶಕರು ತಮಗೆ ಕಾಲ್ ಶೀಟ್ ನೀಡುವಂತೆ ಕ್ಯೂ ನಿಲ್ಲುತ್ತಾರೆ. ಹೀಗೆ ಕ್ರಮೇಣ ನಟರಿಗೆ ಹಾಗೂ ನಟಿಯರಿಗೆ ಬೇಡಿಕೆ ಹೆಚ್ಚಾದಂತೆ ಕಲಾವಿದರು ತಮ್ಮ ಸಂಭಾವನೆಯನ್ನು ಕೂಡ ಹೆಚ್ಚು ಮಾಡಿಕೊಳ್ಳುತ್ತಾರೆ. ಬನ್ನಿ ಹಾಗಿದ್ದರೆ ಇಂದು ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಬೇಡಿಕೆಯಲ್ಲಿರುವ ನಟಿಯರ ಸಂಭಾವನೆ ಎಷ್ಟು ಎಂಬುದರ ಕುರಿತು ನಾವು ತಿಳಿದುಕೊಳ್ಳೋಣ.

ಸ್ನೇಹಿತರೇ ಟಗರು ಚಿತ್ರದಲ್ಲಿನ ನಟನೆಯ ಮೂಲಕ ಕನ್ನಡ ಸಿನಿಮಾ ಪ್ರಿಯರ ಮನಗೆದ್ದಿದ್ದ ಮಾನ್ವಿತಾ ಕಾಮತ್ ರವರ ಕುರಿತು ಮಾತನಾಡುವುದಾದರೇ, ಕೆಂಡಸಂಪಿಗೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ತಮ್ಮ ನಟನೆಯ ಮೂಲಕ ಛಾಪು ಮೂಡಿಸಿ ತದನಂತರ ಚೌಕ ಹಾಗೂ ಟಗರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಮಾನ್ವಿತಾ ರವರು 20 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳುತ್ತಾರೆ. ಇನ್ನು ಇತ್ತೀಚೆಗೆ ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ ನಟಿಸಿದ್ದು ಕೆಲವೇ ಕೆಲವು ಚಿತ್ರಗಳಾದರೂ, ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿರುವ ಶ್ರೀಲೀಲಾ ರವರು ಒಂದು ಸಿನಿಮಾಗೆ ಪಡೆಯುವ ಸಂಭಾವನೆ 15ಲಕ್ಷ.

ಇನ್ನು ಚುಟು-ಚುಟು ಬೆಡಗಿ ಆಶಿಕಾ ರಂಗನಾಥ್ ಅವರು ಇದೀಗ ಕನ್ನಡ ಚಿತ್ರರಂಗದ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಇವರು ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ಒಂದು ಚಿತ್ರಕ್ಕೆ 15ರಿಂದ 20 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಇನ್ನು ಸ್ನೇಹಿತರೇ ಇದುವರೆಗೂ ಯಾವುದೇ ವಿವಾದವಿಲ್ಲದೇ ಬಹಳ ಸುಲಭವಾಗಿ ಕ್ಲಾಸ್ ಹಾಗೂ ಮಾಸ್ ಹುಡುಗರ ಮನೆಗೆದ್ದು ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಉತ್ತಮ ನಟಿಯಾಗಿ ಗುರುತಿಸಿಕೊಂಡಿರುವ ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಹಲವಾರು ಯಶಸ್ಸು ಪಡೆದುಕೊಂಡ ಚಿತ್ರಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಗಾಂಧಿನಗರದ ಲೆಕ್ಕಾಚಾರದ ಪ್ರಕಾರ ಹರಿಪ್ರಿಯ ರವರು ಒಂದು ಸಿನಿಮಾಗೆ 30ರಿಂದ 35 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನು ಯು ಟರ್ನ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೆಲವೇ ಕೆಲವು ಚಿತ್ರಗಳಲ್ಲಿ ನಟನೆ ಮಾಡಿದ್ದರೂ ಕೂಡ ತಮ್ಮ ನಟನೆಯ ಮೂಲಕ ಸಿನಿಪ್ರಿಯರ ಮನಗೆದ್ದಿರುವ ಶ್ರದ್ಧಾ ಶ್ರೀನಾಥ್ ರವರು ಒಂದು ಸಿನಿಮಾಗೆ 10 ಲಕ್ಷ ರೂಪಾಯಿ ಪಡೆಯುತ್ತಾರೆ ಎಂಬ ಮಾಹಿತಿ ಇದೆ. ಆದರೆ ಇವರು ಇತ್ತೀಚೆಗೆ ತೆಲುಗು ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡ ನಟನೆ ಮಾಡುತ್ತಿರುವ ಕಾರಣ ಬಹುತೇಕ ಮತ್ತೊಮ್ಮೆ ಕನ್ನಡಕ್ಕೆ ವಾಪಸಾದರೆ ಖಂಡಿತ ಇವರ ಸಂಭಾವನೆ ಹೆಚ್ಚಿರಲಿದೆ.

ಇನ್ನು ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಕನ್ನಡ ಸಿನಿಮಾರಂಗದಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಜಾಹೀರಾತು ರಿಯಾಲಿಟಿ ಶೋಗಳು ಸೇರಿದಂತೆ ಕನ್ನಡ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿ ಆಗಿರುವ ರಚಿತ ರಾಮ್ ರವರು ಕನ್ನಡ ಚಿತ್ರರಂಗದಲ್ಲಿ ಇದೀಗ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಹೌದು ಸ್ನೇಹಿತರೇ ಇವರು ಬರೋಬ್ಬರಿ ಒಂದು ಸಿನಿಮಾಗೆ ಒಂದು ಕೋಟಿ ರೂಪಾಯಿ ಸಂಭಾವನೆಯಾಗಿ ಪಡೆಯುತ್ತಾರೆ. ಇನ್ನು ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಭಾರೀ ಬೇಡಿಕೆಯ ನಟಿಯಾಗಿದ್ದರು. ಒಂದು ಸಿನಿಮಾಗೆ 1.5 ಕೋಟಿ ರೂಪಾಯಿಗಳನ್ನು ಸಂಭಾವನೆಯನ್ನು ಪಡೆಯುತ್ತಾರೆ. ಮೂಲಗಳ ಪ್ರಕಾರ ಅಂತ ಪೊಗರು ಚಿತ್ರದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ ರವರು ಬರೋಬ್ಬರಿ 1.5 ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದಾರೆ