ಅಕ್ಕಿ ನೆನೆಸದಿದ್ದರೂ, ದಿಡೀರ್ ಎಂದು ನಿಮಿಷಗಳಲ್ಲಿ ಮಾಡಿ ಟೊಮೊಟೊ ರವಾ ದೋಸೆ. ಹೇಗೆ ಗೊತ್ತೇ??

ಅಕ್ಕಿ ನೆನೆಸದಿದ್ದರೂ, ದಿಡೀರ್ ಎಂದು ನಿಮಿಷಗಳಲ್ಲಿ ಮಾಡಿ ಟೊಮೊಟೊ ರವಾ ದೋಸೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ಸಾಮಾನ್ಯ ದೋಸೆ ಮಾಡಲು ರಾತ್ರಿ ಅಕ್ಕಿ ನೆನೆಸಲು ಮರೆತು ಬಿಟ್ಟಿರಾ?? ಆದರೆ ಮನೆಯಲ್ಲಿ ತಿಂಡಿಗೆ ದೋಸೆ ಮಾಡಬೇಕು ಎಂಬ ಆಲೋಚನೆಯಲ್ಲಿ ನೀವು ಇದ್ದರೆ, ಬನ್ನಿ ಕೇವಲ ಕೆಲವೇ ಕೆಲವು ನಿಮಿಷಗಳಲ್ಲಿ ದಿಡೀರ್ ಟೊಮೇಟೊ ರವೇ ದೋಸೆ ಹೇಗೆ ಮಾಡುವುದು ಎಂಬುದನ್ನು ಇಂದು ಹೇಳಿಕೊಡುತ್ತೇವೆ. ಸ್ನೇಹಿತರೇ ನಿಮ್ಮ ಅನುಕೂಲಕ್ಕಾಗಿ ಹೇಗೆ ಮಾಡುವುದು ಎಂಬುದನ್ನು ವಿಡಿಯೋ ಮುಖಾಂತರ ಕೂಡ ತೋರಿಸಲಾಗಿದ್ದು, ಯೂಟ್ಯೂಬ್ ಚಾನೆಲಿನ ವಿಡಿಯೋ ಲಿಂಕ್ ಹಾಕಲಾಗಿದೆ ಒಮ್ಮೆ ನೋಡಿ ನಿಮ್ಮನೆಯಲ್ಲಿ ಟ್ರೈ ಮಾಡಿ ರುಚಿ ಹೇಗಿದೆಯೆಂದು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

ಟೊಮೋಟೊ ರವೆ ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು: ಕಾಲು ಕೆಜಿ ಟೊಮೇಟೊ ಹಣ್ಣು, ೨ ಚಮಚ ತೆಂಗಿನಕಾಯಿ ತುರಿ, 2 – 3 ನೆನೆಸಿದ ಬ್ಯಾಡಿಗೆ ಮೆಣಸಿನಕಾಯಿ,1 ಬಟ್ಟಲು ಮೀಡಿಯಂ ರವೆ, 2 ಚಮಚ ಅಕ್ಕಿ ಹಿಟ್ಟು, 1 ಚಮಚ ಮೈದಾ ಹಿಟ್ಟು, 1 ಚಮಚ ಜೀರಿಗೆ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಮೊಸರು.

ಟೊಮೋಟೊ ರವೆ ದೋಸೆ ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಸಣ್ಣಗೆ ಹಚ್ಚಿದ ಟೊಮೋಟೊ, 2 ಚಮಚ ತೆಂಗಿನಕಾಯಿ ತುರಿ, 2 – 3 ನೆನೆಸಿದ ಬ್ಯಾಡಿಗೆ ಮೆಣಸಿನಕಾಯಿ, ಸ್ವಲ್ಪ ನೀರನ್ನು ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ರುಬ್ಬಿದ ಮಿಶ್ರಣ, 1 ಬಟ್ಟಲು ರವೆ, 2 ಚಮಚ ಅಕ್ಕಿ ಹಿಟ್ಟು, 1 ಚಮಚ ಮೈದಾ, 1 ಚಮಚ ಜೀರಿಗೆ, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, 2 ಚಮಚ ಮೊಸರು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ.

10 – 15 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ಇದಕ್ಕೆ ದೋಸೆ ಹಿಟ್ಟಿನ ಹದಕ್ಕೆ ಬೇಕಾಗುವಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ದೋಸೆ ಹಿಟ್ಟು ರೆಡಿಯಾಗುತ್ತದೆ. ಕೊನೆಯದಾಗಿ ದೋಸೆ ಮಾಡುವ ರೀತಿಯಲ್ಲಿ ದೋಸೆ ಹಾಕಿ ಒಂದು ಕಡೆ ಮಾತ್ರ ಬೇಯಿಸಿದರೆ ಟೊಮೋಟೊ ರವೆ ದೋಸೆ ಸವಿಯಲು ಸಿದ್ಧ.