ಡಾನ್ಸ್ ನೋಡಿ ದರ್ಶನ ರವರು ಹೇಳಿದ ಮಾತುಗಳನ್ನು ಕೇಳಿ ಕಣ್ಣೀರು ಹಾಕಿದ ಅನ್ನಪೂರ್ಣ ಅಜ್ಜಿ ಯಾಕೆ ಗೊತ್ತೇ?

ಡಾನ್ಸ್ ನೋಡಿ ದರ್ಶನ ರವರು ಹೇಳಿದ ಮಾತುಗಳನ್ನು ಕೇಳಿ ಕಣ್ಣೀರು ಹಾಕಿದ ಅನ್ನಪೂರ್ಣ ಅಜ್ಜಿ ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅಡಿಷನಲ್ಲಿ ಅತ್ಯುತ್ತಮ ರೇಟಿಂಗ್ ಪಡೆದುಕೊಂಡು ಆರಂಭದಲ್ಲಿಯೇ ಸಾಕಷ್ಟು ಯಶಸ್ಸು ಗಳಿಸುವ ಸೂಚನೆ ನೀಡಿದೆ. ಟಿಆರ್ಪಿ ಲೆಕ್ಕಾಚಾರದ ಮೂಲಕ ನೋಡುವುದಾದರೆ ಇದೇ ಸಮಯದಲ್ಲಿ ಇಷ್ಟು ದಿವಸ ಪ್ರಸಾರವಾಗುತ್ತಿದ್ದ ಸರಿಗಮಪ ಶೋ 8ರಿಂದ 9ರವರೆಗೂ ಟಿವಿಆರ್ ಪಡೆದುಕೊಳ್ಳುತ್ತಿತ್ತು, ಆದರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಇದೀಗ ಶನಿವಾರದಂದು 12.4 ಮತ್ತು ಭಾನುವಾರದಂದು 12.3 ಟಿವಿಆರ್ ಪಡೆದುಕೊಂಡು ಹೊಸ ದಾಖಲೆ ಸೃಷ್ಟಿಸಿದೆ.

ಇಷ್ಟೇ ಅಲ್ಲ ಸ್ನೇಹಿತರೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಆಡಿಷನ್ ನಲ್ಲಿ ಕೇವಲ ಒಮ್ಮೆ ಡ್ಯಾನ್ಸ್ ಮಾಡುವ ಮೂಲಕ ಅನ್ನಪೂರ್ಣ ರವರು ಕರ್ನಾಟಕ ರಾಜ್ಯದ ಮನೆಮಾತಾಗಿದ್ದಾರೆ. ತಮಗೆ ಆಗಿರುವ ವಯಸ್ಸಿಗೂ ಹಾಗೂ ತಾವು ಮಾಡುತ್ತಿರುವ ನೃತ್ಯಕ್ಕೂ ಸಂಬಂಧವೇ ಇಲ್ಲದಂತೆ ಅತ್ಯುತ್ತಮವಾಗಿ ಡ್ಯಾನ್ಸ್ ಮಾಡಿ ಆಡಿಶನ್ ನಲ್ಲಿಯೇ ಶೇಕ್ ಬೇಬಿ ಎಂಬ ಹೆಸರನ್ನು ಜಡ್ಜ್ ಗಳಿಂದ ಪಡೆದುಕೊಂಡಿರುವ ಅನ್ನಪೂರ್ಣ ರವರು ಇದೀಗ ಎಲ್ಲೆಡೆ ನೋಡಿದರೂ ತಮ್ಮ ಹೆಸರು ಕೇಳಿ ಬರುವಂತೆ ಮಾಡಿದ್ದಾರೆ.

ಇವರ ಡ್ಯಾನ್ಸ್ ಎಷ್ಟು ಅದ್ಭುತವಾಗಿತ್ತು ಎಂದರೇ ಸ್ವತಹ ಕನ್ನಡದ ಖ್ಯಾತ ನಟರಾಗಿರುವ ಡಿ ಬಾಸ್ ಖ್ಯಾತಿಯ ದರ್ಶನ್ ರವರು ಅನ್ನಪೂರ್ಣ ರವರ ಕುರಿತು ಮಾತನಾಡಿದ್ದಾರೆ. ಹೌದು ಸ್ನೇಹಿತರೇ ದರ್ಶನ್ ರವರು ಅನ್ನಪೂರ್ಣರವರ ಡ್ಯಾನ್ಸ್ ನೋಡಿ ಅಕ್ಷರಸಹ ಫಿದಾ ಆಗಿದ್ದು ಈ ಕುರಿತು ಮಾತನಾಡಿ, ಒಳ್ಳೆಯದಾಗಲಿ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತೀರಾ, ನಿಮಗೆ ಮಕ್ಕಳು ಇಲ್ಲ ಅಥವಾ ಯಾರು ಇಲ್ಲ ಎಂಬ ಕೊರಗು ಬಿಟ್ಟುಬಿಡಿ ನಾವೆಲ್ಲರೂ ಕೂಡ ನಿಮ್ಮ ಮಕ್ಕಳು ಇದ್ದಂತೆ ನಿಮಗೆ ಏನು ಸಹಾಯ ಬೇಕಾದರೂ ತಿಳಿಸಿ ನಿಮ್ಮ ಮಗನ ಸ್ಥಾನದಲ್ಲಿ ನಿಂತು ನಾವು ಆ ಕೆಲಸವನ್ನು ನೆರವೇರಿಸುತ್ತವೆ. ಅಷ್ಟೇ ಅಲ್ಲ ಯಾವುದೇ ಕಾರಣಕ್ಕೂ ಡ್ಯಾನ್ಸ್ ಅನ್ನು ನಿಲ್ಲಿಸಬೇಡಿ, ಡ್ಯಾನ್ಸ್ ಅನ್ನು ಮುಂದುವರಿಸಿ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಕಷ್ಟ ಎಂದ ತಕ್ಷಣ ಸಹಾಯ ಹಸ್ತ ಚಾಚಲು ಸದಾ ಸಿದ್ಧವಿರುವುದಾಗಿ ತಿಳಿಸಿರುವ ದರ್ಶನ್ ರವರ ಈ ಗುಣಕ್ಕೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇಬೇಕು ಅಲ್ಲವೇ?