ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಕನ್ನಡತಿಗೆ ಒಂದು ವರ್ಷ, ಅಭಿಮಾನಿಗಳಿಗಾಗಿ ಭುವಿ ಹೊತ್ತು ತರುತ್ತಿದ್ದಾರೆ ವಿಶೇಷ ಉಡುಗೊರೆ ಏನು ಗೊತ್ತಾ??

4

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡಿಗರ ಮನಗೆದ್ದಿರುವ ಕನ್ನಡತಿ ಧಾರಾವಾಹಿ ಭಾರಿ ಸದ್ದು ಮಾಡುತ್ತಿದೆ. ಆರಂಭದಲ್ಲಿ ಹೆಚ್ಚಿನ ಪ್ರಮೋಷನ್ ಮಾಡದೇ ಇದ್ದರೂ ಕೂಡ ಕನ್ನಡತಿ ಧಾರಾವಾಹಿಗೆ ದಿನೇ ದಿನೇ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಕಥೆಯಲ್ಲಿ ಬಹಳ ಸ್ಪಷ್ಟತೆ, ಸಂಭಾಷಣೆ, ಪಾತ್ರದಾರಿಗಳ ನಟನೆ ಎಲ್ಲವೂ ಸೇರಿ ಕನ್ನಡತಿ ಒಂದು ಅದ್ಭುತ ದಾರವಾಹಿ ಆಗಿ ಮೂಡಿ ಬರುತ್ತಿದೆ ಎಂಬುದು ಜನರ ಅಭಿಪ್ರಾಯವಾಗಿದೆ. ಇದೀಗ ಈ ಜನಪ್ರಿಯ ಧಾರವಾಹಿ ಜನವರಿ 27 ನೇ ತಾರೀಕಿಗೆ ಸರಿಯಾಗಿ ಒಂದು ವರ್ಷ ಪೂರ್ತಿ ಆಗಲಿದೆ.

ಬಿಡುಗಡೆಗೊಂಡು ಒಂದು ವರ್ಷವಾಗಿದೆ ಎಂದು ಜನರಿಗೆ ಅನಿಸುವುದಿಲ್ಲ ಯಾಕೆಂದರೆ ಕನ್ನಡತಿ ಧಾರವಾಹಿ ಎಷ್ಟು ಬೇಗ ಬೇಕೋ ಅಷ್ಟು ವೇಗವಾಗಿ, ಅಗತ್ಯವಿರುವ ಸಂದರ್ಭದಲ್ಲಿ ಸರಿಯಾದ ತಿರುವುಗಳನ್ನು ಪಡೆದುಕೊಳ್ಳುತ್ತಾ ಮುಂದಕ್ಕೆ ಸಾಗುತ್ತಿದೆ. ರಂಜಿನಿ ರಾಘವನ್, ಕಿರಣ್ ರಾಜ್, ಸಾರಾ ಅಣ್ಣಯ್ಯ, ರಾಮುಲ, ಚಿತ್ಕಲ ಬಿರದರ್ ರವರು ಪ್ರಮುಖ ಪಾತ್ರಗಳಲ್ಲಿ ನಟನೆ ಮಾಡಿರುವ ಕನ್ನಡತಿ ಧಾರವಾಹಿ ಇದೀಗ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ, ಕನ್ನಡತಿ ಭುವಿ ಖ್ಯಾತಿಯ ರಂಜನಿ ರಾಘವನ್ ರವರು ಒಂದು ಸರ್ಪ್ರೈಸ್ ನೀಡುತ್ತೇನೆಂದು ಪೋಸ್ಟ್ ಮಾಡಿದ್ದರು.

ಆ ಸರ್ಪ್ರೈಸ್ ಏನು ಎಂದು ಅಭಿಮಾನಿಗಳು ಪ್ರಶ್ನೆ ಕೇಳಲು ಆರಂಭಿಸಿದಾಗ ಭುವಿ ರವರು ಅಭಿಮಾನಿಗಳನ್ನು ಹೆಚ್ಚಾಗಿ ಕಾಯಿಸದೇ ಇರಲು ನಿರ್ಧಾರ ಮಾಡಿ, ಆ ಉಡುಗೊರೆ ಏನು ಎಂದು ಉತ್ತರ ನೀಡಿದ್ದಾರೆ. ಹೌದು ಸ್ನೇಹಿತರೇ ಕನ್ನಡತಿ ಧಾರಾವಾಹಿ ಒಂದು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಈ ಧಾರಾವಾಹಿಯಲ್ಲಿ ಬಹಳ ಸುಮಧುರ ಎನಿಸುವ ಕ್ಷಣಗಳನ್ನು ಒಟ್ಟುಗೂಡಿಸಿ, ಸ್ವತಹ ಭುವಿ ರವರು ಒಂದು ವಿಡಿಯೋ ಮಾಡಿದ್ದು ಆ ವಿಡಿಯೋವನ್ನು ಜನವರಿ 27 ನೇ ತಾರೀಖಿನಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ವಿಡಿಯೋ ದಲ್ಲಿ ಯಾವ ಯಾವ ಕ್ಷಣಗಳನ್ನು ಸೇರಿಸಬೇಕು ಎಂಬುದು ನಿಮ್ಮ ಆಸೆ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.