ಸಕ್ಕತ್ ರುಚಿಯ ದಿಡೀರ್ ರವೆ ಪಡ್ಡು ಮಾಡಿ ಕೇವಲ 15 ನಿಮಿಷದಲ್ಲಿ. ಹೇಗೆ ಗೊತ್ತೇ??

ಸಕ್ಕತ್ ರುಚಿಯ ದಿಡೀರ್ ರವೆ ಪಡ್ಡು ಮಾಡಿ ಕೇವಲ 15 ನಿಮಿಷದಲ್ಲಿ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಎಂದು ನಾವು ಕೇವಲ 15 ನಿಮಿಷಗಳಲ್ಲಿ ಮಾಡಬಹುದಾದ ರವೆ ಪಡ್ಡು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ.ರವೆ ಪಡ್ಡು ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಬಾಂಬೆ ರವೆ, ಮುಕ್ಕಾಲು ಬಟ್ಟಲು ಮೊಸರು,ಮುಕ್ಕಾಲು ಬಟ್ಟಲು ನೀರು, 2 ಚಮಚ ಅಕ್ಕಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಕ್ಯಾರೆಟ್ ತುರಿ, 1 ಚಮಚ ತೆಂಗಿನಕಾಯಿತುರಿ, ಕಾಲು ಚಮಚ ಅಡಿಗೆ ಸೋಡ, 2 ಹಸಿ ಮೆಣಸಿನಕಾಯಿ, 1 ಈರುಳ್ಳಿ, ಸ್ವಲ್ಪ ಶುಂಠಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, ಎಣ್ಣೆ.

ರವೆ ಪಡ್ಡು ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ ರವೆಯನ್ನು ಹಾಕಿ ಮಧ್ಯಮ ಉರಿಯಲ್ಲಿ 2 – 3 ನಿಮಿಷಗಳ ಕಾಲ ಬಿಸಿ ಆಗುವವರೆಗೂ ಫ್ರೈ ಮಾಡಿಕೊಂಡು ಒಂದು ಬಟ್ಟಲಿಗೆ ಅಥವಾ ಪ್ಲೇಟಿಗೆ ಹಾಕಿಕೊಳ್ಳಿ. ಮತ್ತೆ ಅದೇ ಬಾಣಲಿಗೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿ, ಜಜ್ಜಿದ ಶುಂಠಿ, ಸಣ್ಣಗೆ ಹಚ್ಚಿದ ಈರುಳ್ಳಿ, ಸಣ್ಣಗೆ ಹಚ್ಚಿದ ಕರಿಬೇವನ್ನು ಹಾಕಿ ಈರುಳ್ಳಿ ಮೆತ್ತಗಾಗುವವರೆಗೂ ಫ್ರೈ ಮಾಡಿಕೊಳ್ಳಿ.

ನಂತರ ಇದಕ್ಕೆ ಕ್ಯಾರೆಟ್ ತುರಿಯನ್ನು ಹಾಕಿ ಫ್ರೈ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿಕೊಂಡು ತಣ್ಣಗಾಗಲು ಬಿಡಿ. ತದನಂತರ ಒಂದು ದೊಡ್ಡ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಹುರಿದುಕೊಂಡ ರವೆ, ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ತೆಗೆದುಕೊಂಡ ಮೊಸರನ್ನು ಹಾಕಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತದನಂತರ ಇದಕ್ಕೆ ಒಗ್ಗರಣೆ ಮಾಡಿಕೊಂಡ ಮಿಶ್ರಣ, ತೆಂಗಿನಕಾಯಿ ತುರಿ, ಮುಕ್ಕಾಲು ಬಟ್ಟಲು ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 10 ನಿಮಿಷಗಳ ಕಾಲ ನೆನೆಯಲು ಬಿಡಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು, ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಪಡ್ಡು ಹಿಟ್ಟು ರೆಡಿಯಾಗುತ್ತದೆ. ನಂತರ ಗ್ಯಾಸ್ ಮೇಲೆ ಪಟ್ಟು ಹೆಂಚನ್ನು ಇಟ್ಟು ಕಾಯಲು ಬಿಡಿ. ಕಾದ ನಂತರ ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿಕೊಳ್ಳಿ. ಕೊನೆಯದಾಗಿ ಹಿಟ್ಟನ್ನು ಹಾಕಿ ಎರಡು ಬದಿಯಲ್ಲಿ ಬೇಯಿಸಿಕೊಂಡರೆ ರವೆ ಪಡ್ಡು ಸವಿಯಲು ಸಿದ್ಧ.