ರಾತ್ರಿ ಅಕ್ಕಿ ನೆನೆಸಿಲ್ಲವಾ?? ಪರವಾಗಿಲ್ಲ, ಮುಂಜಾನೆ ನೆನೆಸಿ ದಿಡೀರ್ ಎಂದು ಮಾಡಿ ಸಬ್ಬಕ್ಕಿ ಇಡ್ಲಿ. ಹೇಗೆ ಗೊತ್ತಾ??

ರಾತ್ರಿ ಅಕ್ಕಿ ನೆನೆಸಿಲ್ಲವಾ?? ಪರವಾಗಿಲ್ಲ, ಮುಂಜಾನೆ ನೆನೆಸಿ ದಿಡೀರ್ ಎಂದು ಮಾಡಿ ಸಬ್ಬಕ್ಕಿ ಇಡ್ಲಿ. ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಜೀವನದಲ್ಲಿ ಮರೆವು ಸಾಮಾನ್ಯ, ಒಮ್ಮೊಮ್ಮೆ ರಾತ್ರಿ ಇಡ್ಲಿ ಹಾಗೂ ದೋಸೆಗೆ ಹಾಕುವುದನ್ನು ಕೂಡ ನಾವು ಮರೆತುಬಿಡುತ್ತೇವೆ. ನಿಮ್ಮ ಮನೆಯಲ್ಲಿಯೂ ಕೂಡ ಖಂಡಿತವಾಗಲೂ ಈ ರೀತಿಯ ಘಟನೆ ನಡೆದಿರುತ್ತದೆ. ನಾಳೆ ಇಡ್ಲಿ ಮಾಡೋಣ ಎಂದು ಆಲೋಚನೆ ಮಾಡಿ ಅಕ್ಕಿ ನೆನೆ ಹಾಕದೇ ಮಲಗಿ ಬಿಡುತ್ತಾರೆ, ಹೀಗೆ ಅಕ್ಕಿ ನೆನೆಸದೇ ಮಲಗಿದ್ದರೇ ಮುಂಜಾನೆ ಎದ್ದ ತಕ್ಷಣ ಮತ್ತೆ ಏನು ಮಾಡಬೇಕು ಎಂಬ ಆಲೋಚನೆ ಮಾಡಬೇಕಾಗುತ್ತದೆ. ಆದರೆ ಈ ಲೇಖನದಲ್ಲಿ ನಾವು ನೀವು ಒಂದು ವೇಳೆ ರಾತ್ರಿ ಅಕ್ಕಿ ನೆನೆಸಲು ಮರೆತಿದ್ದರೂ ಕೂಡ, ಮುಂಜಾನೆ ಎದ್ದಾಗ ನೆನೆಸಿಕೊಂಡರೂ ಕೂಡ, ಒಂಬತ್ತು ಗಂಟೆಗೆ ರುಚಿರುಚಿಯಾದ ಸಬ್ಬಕ್ಕಿ ಇಡ್ಲಿ ಮಾಡಬಹುದು. ಬನ್ನಿ ಹಾಗಿದ್ದರೇ ಹಿಡಿಯಿರಿ ಎಂದು ಸಬ್ಬಕ್ಕಿ ಇಡ್ಲಿ ಮಾಡುವುದು ಹೇಗೆ ಎಂಬುದನ್ನು ತಿಳಿಸಿ ಕೊಡುತ್ತೇವೆ, ನಿಮ್ಮ ಅನುಕೂಲತೆಗಾಗಿ ವಿಡಿಯೋ ಕೂಡ ಹಾಕಲಾಗಿದ್ದು ಒಮ್ಮೆ ನೋಡಿ ಟ್ರೈ ಮಾಡಿ ರುಚಿ ಹೇಗಿದೆ ಎಂಬುದನ್ನು ತಿಳಿಸುವುದನ್ನು ಮರೆಯಬೇಡಿ.

ಸಬ್ಬಕ್ಕಿ ಇಡ್ಲಿ ಮಾಡಲು ಬೇಕಾಗುವ ಸಾಮಗ್ರಿಗಳು: ಅರ್ಧ ಬಟ್ಟಲು ಸಬ್ಬಕ್ಕಿ (ನೆನೆಸಿದ ನಂತರ 1 ಬಟ್ಟಲು ಆಗುತ್ತದೆ), 1 ಬಟ್ಟಲು ರವೆ, 1 ಬಟ್ಟಲು ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಅಡುಗೆ ಸೋಡಾ.

ಸಬ್ಬಕ್ಕಿ ಇಡ್ಲಿ ಮಾಡುವ ವಿಧಾನ: ಮೊದಲಿಗೆ ಅರ್ಧ ಬಟ್ಟಲಿನಷ್ಟು ಸಬ್ಬಕ್ಕಿಯನ್ನು ತೆಗೆದುಕೊಂಡು ಒಂದು ದೊಡ್ಡ ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ಸಬ್ಬಕ್ಕಿ ಮುಳುಗುವಷ್ಟು ನೀರನ್ನು ಹಾಕಿ 3 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಒಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ನೆನೆಸಿದ ಸಬ್ಬಕ್ಕಿ, ಮೊಸರು, ರವೆ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಒಂದು ವೇಳೆ ನೀರಿನ ಅವಶ್ಯಕತೆ ಇದ್ದರೆ ಇಡ್ಲಿ ಹಿಟ್ಟಿನ ಹದಕ್ಕೆ ಬೇಕಾಗುವಷ್ಟು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 30 ನಿಮಿಷಗಳ ಕಾಲ ನೆನೆಯಲು ಬಿಡಿ.

30 ನಿಮಿಷಗಳ ನಂತರ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮಾಡಿಕೊಳ್ಳಿ. ಅವಶ್ಯಕತೆ ಇದ್ದರೆ ಸ್ವಲ್ಪ ನೀರನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚದಷ್ಟು ಅಡುಗೆ ಸೋಡಾವನ್ನು ಹಾಕಿ ಮಾಡಿಕೊಳ್ಳಿ. ನಂತರ ಹಿಟನ್ನು ಇಡ್ಲಿ ಪ್ಲೇಟಿಗೆ ಹಾಕಿ 10 ನಿಮಿಷಗಳ ಕಾಲ ಮಧ್ಯಮ ಉ’ರಿಯಲ್ಲಿ ಬೇಯಿಸಿಕೊಂಡರೆ ಸಬ್ಬಕ್ಕಿ ಇಡ್ಲಿ ಸವಿಯಲು ಸಿದ್ಧ.