ಗ್ಯಾಸ್, ತೈಲ ಅಥವಾ ಹಾಲಿನ ಟ್ಯಾಂಕರ್ಗಳು ಯಾಕೆ ಸಿಲಿಂಡರಾಕಾರದಲ್ಲಿ ಮಾತ್ರ ಇರುತ್ತವೆ ಗೊತ್ತಾ??

ಗ್ಯಾಸ್, ತೈಲ ಅಥವಾ ಹಾಲಿನ ಟ್ಯಾಂಕರ್ಗಳು ಯಾಕೆ ಸಿಲಿಂಡರಾಕಾರದಲ್ಲಿ ಮಾತ್ರ ಇರುತ್ತವೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನೀವು ಸರಕು ಸಾಗಾಣಿಕೆ ಮಾಡುವ ಹಲವಾರು ಕಂಟೇನರ್ಗಳು ನೋಡಿರುತ್ತೀರಾ, ಆ ಕಂಟೇನರ್ಗಳಲ್ಲಿ ಸಾಮಾನ್ಯವಾಗಿ ಘನ ವಸ್ತುಗಳನ್ನು ತೆಗೆದುಕೊಂಡು ಹೋಗುವ ಕಂಟೇನರ್ಗಳು ಆಯತಾಕಾರವಾಗಿ ಇರುತ್ತವೆ. ಆದರೆ ಗ್ಯಾಸ್, ತೈಲ ಅಥವಾ ಹಾಲಿನ ಟ್ಯಾಂಕರ್ಗಳು ಸಿಲಿಂಡರ್ ಆಕಾರದಲ್ಲಿ ಇರುವುದನ್ನು ನೀವು ಗಮನಿಸಿರಬಹುದು. ಆದರೆ ಘನವಸ್ತುಗಳನ್ನು ಯಾಕೆ ಆಯತಾಕಾರ ದಲ್ಲಿರುವ ಕಂಟೈನರ್ ಗಳಲ್ಲಿ ಸಾಗಿಸಲಾಗುತ್ತದೆ ಹಾಗೂ ಯಾವುದೇ ದ್ರವ ರೂಪದ ವಸ್ತುಗಳನ್ನು ಸಾಗಾಣಿಕೆ ಮಾಡುವಾಗ ಯಾಕೆ ಸಿಲಿಂಡರಾಕಾರದ ಕಂಟೇನರ್ಗಳನ್ನು ಬಳಸಲಾಗುತ್ತದೆ ಎಂದು ಎಂದಾದರೂ ಆಲೋಚನೆ ಮಾಡಿದ್ದೀರಾ??

ಇವುಗಳನ್ನು ಉರುಳಿಸಲು ಸುಲಭವೆಂದು ಮಾತ್ರ ಅಂದುಕೊಳ್ಳಬೇಡಿ. ಇದಕ್ಕೆ ವೈಜ್ಞಾನಿಕ ಕಾರಣಗಳು ಹೆಚ್ಚಾಗಿವೆ. ಹೌದು ಸ್ನೇಹಿತರೇ ಆಯತಾಕಾರ ದಲ್ಲಿರುವ ಕಂಟೈನರ್ ಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೊತ್ತೊಯ್ಯ ಬಹುದಾದರಾರು ಹೀಗೆ ಸಿಲಿಂಡರಾಕಾರದ ಕಂಟೇನರ್ಗಳನ್ನು ಬಳಸಲು ಎರಡು ಕಾರಣಗಳಿದ್ದು ಮೊದಲನೆಯದಾಗಿ ದ್ರವಗಳನ್ನು ಸಾಗಿಸುವಾಗ ಯಾವುದೋ ಒಂದು ಮೂಲೆಯಲ್ಲಿ ಒ’ತ್ತಡವು ಹೆಚ್ಚಾಗಬಾರದು. ಒಂದು ವೇಳೆ ಸಾಗಿಸುವ ಕಂಟೈನರ್ ಆಯತಾಕಾರದಲ್ಲಿ ಇದ್ದರೆ ಮೂಲೆಗಳಲ್ಲಿ ಒ’ತ್ತಡ ಅಥವಾ ತೂಕ ಹೆಚ್ಚಾಗಿರುತ್ತದೆ.

ಒ’ತ್ತಡವು ಮೂಲೆಗಳ ಮೇಲೆ ಹೆಚ್ಚು ಕೇಂದ್ರೀಕೃತವಾದಗ, ಕಂಟೇನರ್ಗಳು ಬಿರುಕು ಬಿಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಆದರೆ ಸಿಲಿಂಡರ್ ಆಕಾರದಲ್ಲಿ ಇರುವಾಗ ಒ’ತ್ತಡವು ಎಲ್ಲಾ ಮೂಲೆಯಲ್ಲಿಯೂ ಸಮವಾಗಿರುತ್ತದೆ, ಇನ್ನು ಎರಡನೆಯದಾಗಿ ಯಾವುದೇ ದ್ರವರೂಪದ ಇಂಧನಗಳನ್ನು ಕಂಟೇನರ್ ನಿಂದ ತೆಗೆಯುವಾಗ ಕಂಟೇನರ್ ಆಯತಾಕಾರದಲ್ಲಿ ಇದ್ದರೆ ಮೂಲೆ ಮೂಲೆಯಲ್ಲಿ ಇಂಧನ ಉಳಿದುಬಿಡುತ್ತದೆ, ಆದರೆ ಸಿಲಿಂಡರ್ ಆಕಾರದಲ್ಲಿ ಇದ್ದರೆ ದ್ರವ ರೂಪಗಳ ಯಾವುದೇ ಇಂಧನಗಳನ್ನು ಬಹಳ ಸುಲಭವಾಗಿ ಹೊರತೆಗೆಯಬಹುದು.