ಕೆಲವು ದಿನಗಳ ಫೋನ್ ಕವರ್ ಯಾಕೆ ಹಳದಿ ಬಣ್ಣಕ್ಕೆ ಬದಲಾಗುತ್ತದೆ ಗೊತ್ತೇ?? ಕಾರಣ ಇಲ್ಲಿದೆ.

ಕೆಲವು ದಿನಗಳ ಫೋನ್ ಕವರ್ ಯಾಕೆ ಹಳದಿ ಬಣ್ಣಕ್ಕೆ ಬದಲಾಗುತ್ತದೆ ಗೊತ್ತೇ?? ಕಾರಣ ಇಲ್ಲಿದೆ.

ನಮಸ್ಕಾರ ಸ್ನೇಹಿತರೇ ಇದೀಗ ಸ್ಮಾರ್ಟ್ಫೋನ್ಗಳು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿವೆ. ಬಹುತೇಕ ಎಲ್ಲರ ಕೈಯಲ್ಲೂ ಸ್ಮಾರ್ಟ್ಫೋನ್ಗಳು ಇರುತ್ತವೆ, ಕೇವಲ ನಾವು ಕರೆ ಅಥವಾ ಮೆಸೇಜು ಕಳುಹಿಸಲು ಮಾತ್ರ ನಾವು ಇಂದು ಫೋನುಗಳನ್ನು ಬಳಸುತ್ತಿಲ್ಲ, ಬದಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ ವಾಗಲು, ಹಣಕಾಸಿನ ವಹಿವಾಟು, ವಿಡಿಯೋ ನೋಡುವುದು, ಇಮೇಲ್ ಕಳುಹಿಸುವುದು, ಕಚೇರಿ ಕೆಲಸಗಳಿಗಾಗಿ ಹಾಗೂ ಇನ್ನಿತರ ಹಲವಾರು ಕೆಲಸಗಳಿಗೆ ನಾವು ಸ್ಮಾರ್ಟ್ಫೋನ್ ಬಳಸಲು ಆರಂಭಿಸಿದ್ದೇವೆ.

ಆದ ಕಾರಣಕ್ಕಾಗಿ ಬಹುತೇಕರ ಕೈಯಲ್ಲಿ ಸ್ಮಾರ್ಟ್ಫೋನ್ ನೋಡಬಹುದಾಗಿದೆ. ಒಂದು ವಾಕ್ಯದಲ್ಲಿ ಸರಳವಾಗಿ ಹೇಳುವುದಾದರೆ ನಮ್ಮ ಸ್ಮಾರ್ಟ್ ಫೋನ್ ನಮ್ಮ ಕುಟುಂಬದ ಸದಸ್ಯರು ಗಿಂತಲೂ ಹೆಚ್ಚು ಕಾಲವನ್ನು ನಮ್ಮ ಕೈಯಲ್ಲಿ ಕಳೆಯುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ದಿಂದ ರಾತ್ರಿ ಮಲಗುವವರೆಗೂ ಹೆಚ್ಚಿನ ಸಮಯ ಸ್ಮಾರ್ಟ್ಫೋನ್ಗಳು ನಮ್ಮ ಕೈಯಲ್ಲಿ ಇರುತ್ತದೆ. ಹೀಗೆ ಪ್ರತಿಯೊಂದು ಕೆಲಸಗಳಲ್ಲಿಯೂ ನಾವು ಸ್ಮಾರ್ಟ್ಫೋನ್ ಬಳಸಲು ಆರಂಭಿಸಿ ರುವ ಕಾರಣ ಬಹಳ ಕಡಿಮೆ ಬೆಲೆಗೆ ಇಂದ ಅಂದರೇ ಸುಮಾರು ಐದು ಸಾವಿರದಿಂದ ಹಿಡಿದು ಒಂದು ಲಕ್ಷದ ವರೆಗಿನ ಸ್ಮಾರ್ಟ್ ಫೋನ್ ಗಳನ್ನು ಜನರು ಬಳಸಲು ಆರಂಭಿಸಿದ್ದಾರೆ.

ಇದು ಮಧ್ಯಮ ವರ್ಗ ಹಾಗೂ ಸಾಮಾನ್ಯ ಶ್ರೀಮಂತರ ವರ್ಗದ ಜನರು ಬಳಸುವ ದರ ಗಳಾಗಿವೆ. ಹೀಗೆ ಇಷ್ಟೆಲ್ಲ ಹಣ ನೀಡಿ ಖರೀದಿಸುವ ಕಾರಣ ತಮ್ಮ ಸ್ಮಾರ್ಟ್ಫೋನ್ ನಿಜಕ್ಕೂ ಸುರಕ್ಷಿತವಾಗಿರಬೇಕು ಎಂಬ ಆಲೋಚನೆಯಿಂದ ಸ್ಮಾರ್ಟ್ ಫೋನಿನ ಜೊತೆಗೆ ಪ್ರತಿಯೊಬ್ಬರು ಸಾಮಾನ್ಯವಾಗಿ ಹಲವಾರು ವಿವಿಧ ರೀತಿಯ ಕವರ್ ಗಳನ್ನು ಬಳಸುತ್ತಾರೆ. ಹೀಗೆ ಕೇವಲ ಸ್ಮಾರ್ಟ್ ಫೋನ್ ಕವರ್ ಗಳಿಗಾಗಿಯೇ ಪ್ರತಿಯೊಬ್ಬರು ನೂರಾರು ರೂಪಾಯಿ ಖರ್ಚು ಮಾಡುತ್ತಾರೆ.

ಕೆಲವು ಅಂಕಿ ಅಂಶಗಳ ಪ್ರಕಾರ ದಿನಕ್ಕೆ ಇಡೀ ಭಾರತದಲ್ಲಿ 2 ಕೋಟಿಗೂ ಅಧಿಕ ಬೆಲೆಬಾಳುವ ಫೋನ್ ಕವರ್ ಗಳು ಮಾರಾಟವಾಗುತ್ತವೆ. ಇಷ್ಟೆಲ್ಲಾ ಖರ್ಚುಮಾಡಿ ಕೊಂಡುಕೊಳ್ಳುವ ಫೋನ್ ಕವರ್ ಗಳು, ಕೆಲವು ದಿನಗಳು ಕಳೆದಂತೆ ಕ್ರಮೇಣ ಹಳದಿ ಹಣಕ್ಕೆ ಬದಲಾಗುತ್ತವೆ. ಕೆಲವು ತಿಂಗಳುಗಳ ನಂತರ ಯಾಕೆ ಹೀಗೆ ಹಳದಿ ಬಣ್ಣಕ್ಕೆ ಫೋನ್ ಕವರ್ ಗಳು ಬದಲಾಗುತ್ತವೆ ಎಂಬುದರ ಕಾರಣ ನಿಮಗೆ ತಿಳಿದಿದೆಯೇ?? ಇದಕ್ಕೆ ಎರಡು ಕಾರಣಗಳಿಂದ ಈ ರೀತಿ ಫೋನ್ ಕವರ್ ಹಳದಿ ಬಣ್ಣಕ್ಕೆ ಬದಲಾಗುತ್ತದೆ.

ಮೊದಲನೆಯದಾಗಿ ಸ್ನೇಹಿತರೇ ಈ ಫೋನ್ ಕವರ್ ಗಳನ್ನು ಸಿಲಿಕೋನ್ ಎಂಬ ಪಾಲಿಮಾರ್ ನಿಂದ ತಯಾರಿಸಲಾಗುತ್ತದೆ. ಇದು ಬಹಳ ಕಡಿಮೆ ಬೆಲೆಯ ಹಾಗೂ ಸುಲಭವಾಗಿ ಇದರ ಆಕಾರವನ್ನು ಬದಲಾಯಿಸಬಹುದಾದ ಕಾರಣದಿಂದ ಸಿಲಿಕಾನ್ ಬಳಸಲಾಗುತ್ತದೆ. ಸಿಲಿಕಾನ್ ಸಾಮಾನ್ಯವಾಗಿ ಬೆಳಕು, ಶಾಖ ಹಾಗೂ ರಾಸಾಯನಿಕಗಳಿಗೆ ಒಡ್ಡುಕೊಂಡಂತೆ ಸಿಲಿಕಾನ್ ಬಣ್ಣ ಹಳದಿ ಬಣ್ಣಕ್ಕೆ ಬದಲಾಗುತ್ತದೆ, ಒಂದೆಡೆ ಕಡಿಮೆ ಬೆಲೆ ಎಂಬ ಕಾರಣಕ್ಕೆ ಸಿಲಿಕಾನ್ ಬಳಸುವುದಾದರೆ ಮತ್ತೊಂದು ಕಡೆ ಹೀಗೆ ಹಳದಿ ಬಣ್ಣಕ್ಕೆ ಕೆಲವು ತಿಂಗಳುಗಳ ಬಳಿಕ ಬದಲಾಗುತ್ತದೆ ಎಂದು ಬೇಕಂತಲೇ ಬಳಸುತ್ತಾರೆ.

ಯಾಕೆಂದರೆ ಸ್ನೇಹಿತರೇ ಹೀಗೆ ಹಳದಿ ಬಣ್ಣ ತಿರುಗುವ ಪ್ರಕ್ರಿಯೆ ನಡೆದ ಬಳಿಕ ಜನರು ಇದನ್ನು ಮತ್ತೆ ಸಾಮಾನ್ಯ ರೀತಿ ಬದಲಾಯಿಸಲು ವಿವಿಧ ರೀತಿಯಲ್ಲಿ ತೊಳೆಯಲು ಪ್ರಯತ್ನ ಪಡುತ್ತಾರೆ, ಆದರೆ ಕೆಲವೊಂದು ಕ್ರಮಗಳು ಪರಿಣಾಮಕಾರಿ ಆಗಿದ್ದರೂ ಕೂಡ ಸಂಪೂರ್ಣವಾಗಿ ಮತ್ತೊಮ್ಮೆ ಬಿಳಿ ಬಣ್ಣಕ್ಕೆ ಬದಲಾಗುವುದಿಲ್ಲ. ಇದರಿಂದ ಬೇರೆ ದಾರಿ ಇಲ್ಲದೆ ಜನರು ಮತ್ತೊಮ್ಮೆ ಫೋನ್ ಕವರ್ ಖರೀದಿ ಮಾಡುತ್ತಾರೆ, ಫೋನ್ ಕವರ್ ಹಳದಿ ಇದ್ದರೆ ಜನರು ಇಷ್ಟಪಡುವುದಿಲ್ಲ ಆದಕಾರಣ ಕೆಲವು ತಿಂಗಳುಗಳ ನಂತರ ಹಳದಿ ಬಣ್ಣಕ್ಕೆ ತಿರುಗಿ್ದೇ ಇದ್ದರೇ ಜನರು ಮತ್ತೊಮ್ಮೆ ಕಂಡುಕೊಳ್ಳುವುದಿಲ್ಲ ಎಂಬ ಲೆಕ್ಕಾಚಾರದ ಮೇರೆಗೆ ಸಿಲಿಕಾನ್ ಬಳಸಿ ಈ ಕವರ್ಗಳನ್ನು ತಯಾರಿ ಮಾಡಲಾಗುತ್ತದೆ.