ನಾಣ್ಯಗಳಲ್ಲಿ ಈ ಗುರುತುಗಳನ್ನು ನೀವು ಗಮನಿಸಿದ್ದೀರಾ? ಇವುಗಳ ಅರ್ಥವೇನು ಗೊತ್ತೇ??

ನಾಣ್ಯಗಳಲ್ಲಿ ಈ ಗುರುತುಗಳನ್ನು ನೀವು ಗಮನಿಸಿದ್ದೀರಾ? ಇವುಗಳ ಅರ್ಥವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮಗೆ ಕೆಲವು ವಸ್ತುಗಳ ಬಗ್ಗೆ ಮಾಹಿತಿ ಇಲ್ಲದೆಯೇ ನಾವು ನಮ್ಮ ದೈನಂದಿನ ಜೀವನದಲ್ಲಿ ಹಲವಾರು ಬಾರಿ ಬಳಸುತ್ತೇವೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ನಾವು ಪ್ರತಿನಿತ್ಯದ ಜೀವನದಲ್ಲಿ ಹಲವಾರು ನಾಣ್ಯ ಗಳನ್ನು ಬಳಸುತ್ತೇವೆ. ಆದರೆ ನಾಣ್ಯಗಳಲ್ಲಿನ ಕೆಲವೊಂದು ಗುರುತುಗಳು ವಿಶೇಷವಾದವು ಗಳನ್ನು ಸೂಚಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೇ?? ಬನ್ನಿ ನಾವು ಇಂದು ನಾಣ್ಯಗಳಲ್ಲಿನ ಕೆಲವೊಂದು ಗುರುತುಗಳು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಸ್ನೇಹಿತರೇ ನಿಮಗೆ ತಿಳಿದಿರಬಹುದು ಸೆಕ್ಯೂರಿಟಿ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಸ್ ಪಿ ಎಂ ಸಿ ಐ ಎಲ್) ಸಂಸ್ಥೆಯು ನಾವು ಬಳಸುತ್ತಿರುವ ದಿನನಿತ್ಯದ ನಾಣ್ಯಗಳನ್ನು ಮುದ್ರಿಸುವ ಜವಾಬ್ದಾರಿಯನ್ನು ಹೊಂದಿದೆ. ಇಡೀ ಭಾರತದಲ್ಲಿ ಕೇವಲ ನಾಲ್ಕು ಸ್ಥಳಗಳಲ್ಲಿ ನಾಣ್ಯಗಳನ್ನು ಮುದ್ರಿಸುವ ಕೆಲಸ ಮಾಡಲಾಗುತ್ತದೆ, ಹೈದರಾಬಾದ್, ಮುಂಬೈ, ನೋಯಿಡಾ ಮತ್ತು ಕೊಲ್ಕತ್ತಾ ನಗರಗಳಲ್ಲಿ ನಾಣ್ಯವನ್ನು ಮುದ್ರಿಸಲಾಗುತ್ತದೆ. ಇನ್ನು ಈ ಪ್ರತಿಯೊಂದು ನಾಣ್ಯಗಳು ಈ ಮುದ್ರಣ ಸಂಸ್ಥೆಯ ಗುರುತುಗಳನ್ನು ಹೊಂದಿದ್ದು ಅವು ಏನನ್ನು ಸೂಚಿಸುತ್ತವೆ ಎಂಬುದನ್ನು ತಿಳಿಸಿಕೊಡುತ್ತೇವೆ ಕೇಳಿ.

ಸ್ನೇಹಿತರೇ ಮುಂಬೈ ನಗರದಲ್ಲಿರುವ ನಾಣ್ಯ ಮುದ್ರಿತ ಕೇಂದ್ರವು 1829 ರಲ್ಲಿ ಭಾರತೀಯ ಸ’ರ್ಕಾರಕ್ಕೆ ಹಸ್ತಾಂತರಿಸಲಾಯಿತು. ವಿಶೇಷವೆಂದರೆ ಈ ಮುಂಬೈ ನಗರದ ನಾಣ್ಯ ಮುದ್ರಿತ ಕೇಂದ್ರದಲ್ಲಿ ಮುದ್ರಿಸಲಾಗುವ ನಾಣ್ಯಗಳು ಬಿಡುಗಡೆಯಾದ ವರ್ಷದ ಕೆಳಗಡೆ ವಜ್ರದ ಗುರುತನ್ನು ಹೊಂದಿರುತ್ತವೆ. ಇದನ್ನು ಹೊರತುಪಡಿಸಿಯೂ ಕೂಡ ಬಿಡುಗಡೆಯಾದ ವರ್ಷದ ಕೆಳಗಡೆ ನೀವು ಬಿ ಅಥವಾ ಎಂ ಎಂಬ ಗುರುತು ನೋಡಿದರೇ ಅದು ಮುಂಬೈ ನಗರದಲ್ಲಿ ಮುದ್ರಿತವಾಗಿದೆ ಎಂದರ್ಥ. ಆದರೆ ಬಹುತೇಕ ಬಾರಿ ನೀವು ಮೇಲಿನ ಚಿತ್ರದಲ್ಲಿ ನೋಡುವಂತೆ ಡೈಮಂಡ್ ಆಕಾರದ ಗುರುತನ್ನು ಹೊಂದಿರುತ್ತವೆ.

ಸ್ನೇಹಿತರೇ ನೀವು ಬಳಸುವ ನಾಣ್ಯಗಳಲ್ಲಿ ಮುದ್ರಿತವಾದ ವರ್ಷದ ಕೆಳಗಡೆ ಯಾವುದೇ ಗುರುತು ಇಲ್ಲ ಎಂದಲ್ಲಿ ಖಂಡಿತ ಹೀಗೆ ಮುದ್ರಿಸಲಾದ ನಾಣ್ಯಗಳು 1757 ರಲ್ಲಿ ಸ್ಥಾಪನೆಯಾಗಿರುವ ಕೊಲ್ಕತ್ತಾ ನಗರದ ನಾಣ್ಯ ಮುದ್ರಿತ ಕೇಂದ್ರದಲ್ಲಿ ಮುದ್ರಿತವಾಗಿದೆ ಎಂದರ್ಥ. ಕೆಲವೊಮ್ಮೆ ಈ ನಾಣ್ಯಗಳ ಬಿಡುಗಡೆ ವರ್ಷದ ಕೆಳಗಡೆ ನಾಣ್ಯಗಳಿಗೆ ಸಿ ಎಂಬ ಅಕ್ಷರ ಆಗಿದ್ದರೆ ಅದು ಕೂಡ ಕೊಲ್ಕತ್ತಾ ನಗರದಲ್ಲಿರುವ ನಾಣ್ಯ ಮುದ್ರಿತ ಕೇಂದ್ರಗಳಲ್ಲಿ ಮುದ್ರಿತವಾಗಿದೆ ಎಂದು ಅರ್ಥ.

ಸ್ನೇಹಿತರೇ ಭಾರತ 1947 ರಲ್ಲಿ ಸ್ವಾತಂತ್ರ್ಯ ಪಡೆಯಿತು ಎಂಬುದು ನಮಗೆಲ್ಲರಿಗೂ ತಿಳಿದಿದೆ, ಹೀಗೆ ಭಾರತ ಸ್ವತಂತ್ರ ಪಡೆದ ನಂತರ ನಿರ್ಮಾಣ ಮಾಡಲಾಗಿರುವ ಏಕೈಕ ನಾಣ್ಯ ಮುದ್ರಿತ ಕೇಂದ್ರವು ನೋಯ್ಡಾದಲ್ಲಿ ಇದೆ, ಈ ಕೇಂದ್ರವನ್ನು 1988 ರಲ್ಲಿ ಸ್ಥಾಪನೆ ಮಾಡಲಾಯಿತು. ಒಂದು ವೇಳೆ ನೀವು ಬಳಸುತ್ತಿರುವ ನಾಣ್ಯದಲ್ಲಿ ಮುದ್ರಿತವಾದ ವರ್ಷದ ಕೆಳಗಡೆ ಒಂದು ಚಿಕ್ಕ ಚುಕ್ಕೆ ಇದ್ದರೆ, ಅದು ಈ ನೋಯಿಡಾ ನಗರ ಪ್ರದೇಶದಲ್ಲಿರುವ ನಾಣ್ಯ ಮುದ್ರಿತ ಕೇಂದ್ರದಲ್ಲಿ ಮುದ್ರಿತವಾಗಿದೆ ಎಂದು ಅರ್ಥ.

ಇನ್ನು ಕೊನೆಯದಾಗಿ ಹೈದರಾಬಾದ ನಗರದಲ್ಲಿರುವ ನಾಣ್ಯ ಮುದ್ರಿತ ಕೇಂದ್ರವು ಬರೋಬ್ಬರಿ 1803 ರಲ್ಲಿ ಸ್ಥಾಪಿಸಲಾಗಿದೆ. ಸಾವಿರದ ಒಂಬೈನೂರ ವರೆಗೂ ಇದು ಭಾರತದ ಸ’ರ್ಕಾರದ ಅಡಿಯಲ್ಲಿ ಬರುತ್ತಿರಲಿಲ್ಲ, ಸಾವಿರದ ಒಂಬೈನೂರ ಐವತ್ತರಲ್ಲಿ ಈ ನಾಣ್ಯ ಮುದ್ರಿತ ಕೇಂದ್ರ ಸ’ರ್ಕಾರದ ಒಂದು ಭಾಗವಾಯಿತು. ಇನ್ನು ಹೈದರಾಬಾದ್ ನಗರದಲ್ಲಿ ಇರುವ ಈ ಕೇಂದ್ರದಲ್ಲಿ ಮುದ್ರಿಸಲಾದ ನಾಣ್ಯಗಳು ಬಿಡುಗಡೆಯಾದ ವರ್ಷದ ಕೆಳಗಡೆ ನಕ್ಷತ್ರದ ಆಕೃತಿಯನ್ನು ಹೊಂದಿವೆ. ಆದರೆ ಕೆಲವೊಮ್ಮೆ ಇತರ ಗುರುತುಗಳಾದ ಸ್ಪ್ಲಿಟ್ ಡೈಮಂಡ್ ಅಥವಾ ವಜ್ರದಲ್ಲಿನ ಚುಕ್ಕೆ ಸಹ ನಾಣ್ಯಗಳಲ್ಲಿ ಕಂಡುಬರುತ್ತವೆ