ಸಲರ್ ಮುಹೂರ್ತಕ್ಕೆ ಕರೆಸಿ ಯಶ್ ಗೆ ಅವಮಾನ ಮಾಡಿದರೇ ಪ್ರಭಾಸ್?? ರೊಚ್ಚಿಗೆದ್ದ ಯಶ್ ಫ್ಯಾನ್ಸ್ ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಸಲರ್ ಚಿತ್ರ ಘೋಷಣೆಯಾದ ಕ್ಷಣದಿಂದಲೂ ಹಲವಾರು ರೀತಿಯ ವಿವಾದಗಳು ಚಿತ್ರದ ಸುತ್ತ ಸುತ್ತು ಕೊಳ್ಳುತ್ತಿವೆ. ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಇಡೀ ದೇಶದಲ್ಲಿ ಸದ್ದು ಮಾಡುತ್ತಿರುವ ಸಲರ್ ಚಿತ್ರ ಘೋಷಣೆಯಾದ ತಕ್ಷಣ ಪ್ರಶಾಂತ್ ನೀಲ್ ರವರ ಮೇಲೆ ಟೀಕೆಗಳ ಬಾಣಗಳನ್ನು ಸುರಿಸಲಾಗಿತ್ತು. ತದನಂತರ ಸಲಾರ್ ಚಿತ್ರ ಉಗ್ರಂ ಸಿನಿಮಾದ ರಿಮೇಕ್ ಎಂದು ಕೇಳಿಬಂದ ತಕ್ಷಣ, ಟೀಕೆಗಳು ಮತ್ತಷ್ಟು ಹೆಚ್ಚಾಗಿದ್ದವು.

ಇದಾದ ಬಳಿಕ ಎಲ್ಲವೂ ಶಾಂತವಾಗಿದೆ ಎಂದುಕೊಳ್ಳುವಷ್ಟರಲ್ಲಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಯಶ್ ರವರ ಅಭಿಮಾನಿಗಳು ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ರವರ ವಿರುದ್ಧ ಗರಂ ಆಗಿದ್ದಾರೆ. ಯಶ್ ರವರ ಅಭಿಮಾನಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಪ್ರಭಾಸ್ ಅಭಿಮಾನಿಗಳು ಕೆಣಕ್ಕೂತಿರುವುದು ಕೂಡ ಈ ವಿವಾದಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಅಷ್ಟಕ್ಕೂ ಈ ವಿವಾದ ಹುಟ್ಟಿಕೊಳ್ಳಲು ಕಾರಣವಾದರೂ ಏನು ಹಾಗೂ ವಿವಾದದ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಸ್ನೇಹಿತರೇ ಹೊಂಬಾಳೆ ಫಿಲಂಸ್ ಬ್ಯಾನರ್ನ ಅಡಿಯಲ್ಲಿ ಇದೀಗ ನಿರ್ಮಾಣವಾಗುತ್ತಿರುವ ಸಲರ್ ಚಿತ್ರದ ಮುಹೂರ್ತದ ಸಮಾರಂಭಕ್ಕೆ ಕೆಜಿಎಫ್ ಚಿತ್ರದ ಮೂಲಕ ಇಡೀ ದೇಶದಲ್ಲಿ ಅಭಿಮಾನಿಗಳನ್ನು ಗಳಿಸಿರುವ ಯಶ್ ರವರನ್ನು ಅತಿಥಿಯಾಗಿ ಕರೆಸಿಕೊಳ್ಳಲಾಗಿತ್ತು. ಇದೀಗ ಪ್ರಶಾಂತ ನೀಲ್ ರವರ ಜೊತೆ ಕೆಜಿಎಫ್ ಚಿತ್ರದಲ್ಲಿ ನಟನೆ ಮಾಡುತ್ತಿರುವ ಯಶ್ ರವರು ಪ್ರಶಾಂತ್ ನೀಲ್ ರವರ ಜೊತೆ ಉತ್ತಮ ಸಂಬಂಧವನ್ನು ಕಾಪಾಡಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ.

ಬಹುಶಹ ಅದೇ ಕಾರಣಕ್ಕಾಗಿಯೇ ಯಶ್ ಅವರು ಕೂಡ ಸಲರ್ ಚಿತ್ರದ ಮುಹೂರ್ತದ ಸಮಾರಂಭಕ್ಕೆ ಅತಿಥಿಯಾಗಿ ಹೋಗಿದ್ದರು. ಅಂದು ಕೊಂಡಂತೆ ಫೋಟೋಶೂಟ್ ನಲ್ಲಿ ಪ್ರಶಾಂತ ನೀಲ್, ಯಶ್ ಹಾಗೂ ಪ್ರಭಾಸ್ ರವರು ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದ್ದವು. ಒಂದು ಕಡೆ ಬಾಹುಬಲಿ ಚಿತ್ರದ ಮೂಲಕ ದೇಶದೆಲ್ಲೆಡೆ ಅಭಿಮಾನಿಗಳನ್ನು ಗಳಿಸಿರುವ ಪ್ರಭಾಸ್, ಮತ್ತೊಂದೆಡೆ ಕೆಜಿಎಫ್ ಚಿತ್ರದ ಮೂಲಕ ದೇಶದ ಎಲ್ಲಾ ಸಿನಿಮಾ ದಾಖಲೆಗಳನ್ನು ಪುಡಿಪುಡಿ ಮಾಡಿರುವಷ್ಟು ಅಭಿಮಾನಿಗಳನ್ನು ಹೊಂದಿರುವ ಯಶ್, ಅಷ್ಟೇ ಅಲ್ಲದೇ ಬೆರಳೆಣಿಕೆಯ ಚಿತ್ರಗಳಲ್ಲಿ ಅತ್ಯುತ್ತಮ ನಿರ್ದೇಶಕ ಎಂದು ಖ್ಯಾತಿ ಪಡೆದು ಕೊಂಡಿರುವ ಪ್ರಶಾಂತ್ ನೀಲ್ ರವರು ಒಟ್ಟಾಗಿ ಈ ಫೋಟೋ ಶೂಟ್ ನಲ್ಲಿ ಕಾಣಿಸಿಕೊಂಡಿದ್ದ ಕಾರಣ ಕೆಲವೇ ಕೆಲವು ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಪೂರ್ತಿ ಇವರದು ಫೋಟೋ ಹರಡಿತು

ಇಲ್ಲಿಯವರೆಗೂ ಎಲ್ಲಾ ಚೆನ್ನಾಗಿತ್ತು, ಕಾರ್ಯಕ್ರಮವೆಲ್ಲಾ ಮುಗಿದ ಮೇಲೆ ಅದ್ಯಾಕೋ ತಿಳಿದಿಲ್ಲ ನಟ ಪ್ರಭಾಸ್ ರವರು ಸಾಮಾಜಿಕ ಜಾಲತಾಣಗಳಲ್ಲಿ ಮುಹೂರ್ತ ಸಮಾರಂಭದ ಕುರಿತು ತಮ್ಮ ಅಧಿಕೃತ ಫೇಸ್ಬುಕ್ ಪೇಜಿನಲ್ಲಿ ಬರೆದುಕೊಂಡು, ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ವಿಪರ್ಯಾಸವೇನೆಂದರೆ ಕಾರ್ಯಕ್ರಮಕ್ಕೆ ಯಶ್ ರವರು ಅತಿಥಿಯಾಗಿದ್ದ ಹೋಗಿದ್ದರೂ ಕೂಡ, ಯಶ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಫೋಟೋಗಳನ್ನು ಪ್ರಭಾಸ್ ರವರು ಅಪ್ ಲೋಡ್ ಮಾಡಿದ್ದಾರೆ. ಇದನ್ನು ಕಂಡ ಯಶ್ ರವರ ಅಭಿಮಾನಿಗಳು ಫೇಸ್ಬುಕ್ ಪೇಜ್ ನಲ್ಲಿ ಪ್ರಭಾಸ್ ರವರನ್ನು ಪ್ರಶ್ನೆ ಮಾಡಲು ಆರಂಭಿಸಿದಾಗ,

ಪ್ರಭಾಸ್ ರವರ ಅಭಿಮಾನಿಗಳು ಉತ್ತರ ನೀಡಿದ್ದು, ಇಬ್ಬರು ಅಭಿಮಾನಿಗಳ ನಡುವೆ ಫೇಸ್ಬುಕ್ನಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಕ್ರಮೇಣ ಇದು ಬೆಳೆದು ದೊಡ್ಡದಾಗಿ, ಯಶ್ ರವರ ಅಭಿಮಾನಿಗಳು ಅತಿಥಿಯಾಗಿ ಹೋಗಿದ್ದ ಯಶ್ ರವರ ಫೋಟೋ ಬಿಟ್ಟು ಉಳಿದ ಎಲ್ಲಾ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಯಶ್ ಅವರಿಗೆ ಅ’ವಮಾನ ಮಾಡಲಾಗಿದೆ ಎಂದು ಟೀಕೆಗಳ ಬಾಣಗಳನ್ನು ಸುರಿಸಿದ್ದಾರೆ. ಯಶ ರವರಂತಹ ನಟ ಅತಿಥಿಯಾಗಿ ದೂರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಆದರೆ, ಸಿನಿಮಾ ನಟ ಪ್ರಭಾಸ್ ರವರು ಸರಿಯಾದ ಗೌರವ ನೀಡಿಲ್ಲ ಎಂದು ಯಶ್ ಅಭಿಮಾನಿಗಳು ಹೇಳಿಕೆ ನೀಡಿದ್ದಾರೆ.

Post Author: Ravi Yadav