ಯಾರೇ ನೀನು ಚೆಲುವೆ ಚಿತ್ರದ ಮುದ್ದು ಮುಖದ ಚೆಲುವೆ ಸಂಗೀತ ಈಗ ಏನು ಮಾಡುತ್ತಿದ್ದಾರೆ ಗೊತ್ತಾ???

ನಮಸ್ಕಾರ ಸ್ನೇಹಿತರೇ 90ರ ದಶಕದ ಸಂದರ್ಭದಲ್ಲಿ ರವಿಚಂದ್ರನ್ ರವರು ಕನ್ನಡ ಚಿತ್ರರಂಗಕ್ಕೆ ಹಲವಾರು ಯಶಸ್ಸಿನ ಚಿತ್ರಗಳನ್ನು ನೀಡಿದ್ದಾರೆ. ಹಲವಾರು ಯಶಸ್ಸಿನ ಚಿತ್ರಗಳನ್ನು ನೀಡಿರುವ ರವಿಚಂದ್ರನ್ ಅವರ ಚಿತ್ರಗಳ ಸಾಲಿನಲ್ಲಿ ನಮಗೆ ಯಾರೆ ನೀನು ಚೆಲುವೆ ಚಿತ್ರ ಕೂಡ ಎದ್ದು ಕಾಣಿಸುತ್ತದೆ. ಬಹಳ ವಿಶೇಷವಾದ ರೀತಿಯ ಕಥೆಯನ್ನು ಹೊಂದಿದ್ದ ಯಾರೆ ನೀನು ಚೆಲುವೆ ಸಿನಿಮಾದಲ್ಲಿ ಹೀರೋ ಮತ್ತು ಹೀರೋಹಿನ್ ಒಬ್ಬರ ಮುಖ ಒಬ್ಬರು ನೋಡದೆ ಸಿನಿಮಾ ಪೂರ್ತಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುತ್ತಾರೆ.

ಈ ಚಿತ್ರ ಬಿಡುಗಡೆಯಾದ ಬಳಿಕ ಚಿತ್ರವನ್ನು ಗೆಲ್ಲಿಸುವುದಷ್ಟೇ ಅಲ್ಲದೆ ಈ ಚಿತ್ರ ನೋಡಿ ಪ್ರೇರಣೆಯಾಗಿ ಪಡೆದುಕೊಂಡು ಹಲವಾರು ಜನರು ಮುಖ ನೋಡದೆ ಪ್ರೀತಿ ಮಾಡುತ್ತಿರುವುದಾಗಿ ತಿಳಿದು ಬಂದಿತ್ತು ಎಂದು ಸಂದರ್ಶನದಲ್ಲಿ ಚಿತ್ರತಂಡ ಹೇಳಿಕೆ ನೀಡಿತ್ತು. ಇನ್ನು ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಜೊತೆ ನಟನೆ ಮಾಡಿದ ಸಂಗೀತ ರವರು, ತಮ್ಮ ಅದ್ಭುತ ನಟನೆ ಹಾಗೂ ಮುದ್ದು ಮುಖದ ಮೂಲಕ ಎಲ್ಲರ ಮನಗೆದ್ದಿದ್ದರು. ಈ ನಟನೆಯ ಮೂಲಕ ಅಂದಿನ ಕಾಲದಲ್ಲಿ ಯುವಕರ ಡ್ರೀಮ್ ಗರ್ಲ್ ಗಳ ಸಾಲಿಗೆ ಸಂಗೀತ ರವರು ಸೇರಿಕೊಂಡಿದ್ದರು ಎಂದರೆ ತಪ್ಪಾಗಲಾರದು.

ಇವರು ಈ ಚಿತ್ರ ಮಾಡಿದ ನಂತರ ಅದ್ಯಾಕೋ ತಿಳಿದಿಲ್ಲ ಸಿನಿಮಾ ರಂಗದಿಂದ ಕ್ರಮೇಣ ದೂರವುಳಿಯಲು ಆರಂಭಿಸಿದರು, ತದನಂತರ ಚಿತ್ರಗಳಲ್ಲಿ ನಟನೆ ಮಾಡುವುದನ್ನು ಸಂಪೂರ್ಣ ನಿಲ್ಲಿಸಿದ್ದರು. ಇವರು ಈಗ ಏನು ಮಾಡುತ್ತಿದ್ದಾರೆ ಎಂಬುದನ್ನು ನಾವು ನೋಡುವುದಾದರೆ, ಸಂಗೀತ ರವರು 2000 ಇಸವಿಯಲ್ಲಿ ಕ್ಯಾಮೆರಾಮೆನ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಸರ್ವಣ್ಣ ರವರನ್ನು ಮದುವೆಯಾಗುತ್ತಾರೆ. ಪತಿಯೂ ಕೂಡ ಚಿತ್ರರಂಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರೂ ಕೂಡ ಮದುವೆಯಾದ ಬಳಿಕ ಸಂಗೀತ ರವರು ಯಾವುದೇ ಚಿತ್ರದಲ್ಲಿ ನಟನೆ ಮಾಡದಿರಲು ನಿರ್ಧಾರ ಮಾಡಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದರು.

ಸಾಮಾನ್ಯ ಜೀವನವನ್ನು ನಡೆಸುವ ಇಚ್ಛೆ ಹೊಂದಿರುವ ಸಂಗೀತ ರವರು ಇದಾದ ಬಳಿಕ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. ಕುಟುಂಬ ನಿರ್ವಹಣೆ ಮಾಡುತ್ತಾ ಹಾಗೂ ಪತಿ ಸರ್ವಣ್ಣ ರವರು ಕ್ಯಾಮೆರಾಮೆನ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿರುವಾಗ ಅವರಿಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಾರೆ. ಕ್ಯಾಮೆರಾ ಮುಂದೆ ನಟನೆ ಮಾಡುತ್ತಿದ್ದ ಖ್ಯಾತ ನಟಿ ಕ್ಯಾಮರಾ ಹಿಂದೆ ನಿಂತು ಪತಿಗೆ ಸಹಾಯ ಮಾಡುತ್ತಿರುವುದು ವಿಭಿನ್ನವೆನಿಸುತ್ತಿದೆ. ಹೌದು, ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿ ಇದೀಗ ಸಂಗೀತ ರವರು ತಮ್ಮ ಪತಿಗೆ ಕ್ಯಾಮೆರಾಮೆನ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

Facebook Comments

Post Author: Ravi Yadav