ಭಾರತಕ್ಕೆ ಮತ್ತೊಂದು ದಿಗ್ವಿಜಯ, ಚೀನಾಗೆ ಬಾರಿ ಮುಖಭಂಗ. ಶಾಕ್ ನೀಡಿದ ಸೌತ್ ಆಫ್ರಿಕಾ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಇಡೀ ವಿಶ್ವದಲ್ಲಿ ಹಲವಾರು ದೇಶಗಳ ನಡುವೆ ಲಸಿಕೆ ಸ್ಪರ್ಧೆ ಹೆಚ್ಚಾಗುತ್ತಿದೆ. ಬೆರಳೆಣಿಕೆಯ ರಾಷ್ಟ್ರಗಳು ಲಸಿಕೆ ತಯಾರಿಸಿರುವ ಕಾರಣ ತಮ್ಮ ರಾಷ್ಟ್ರದ ಲಸಿಕೆಯನ್ನು ವಿಶ್ವದ ಇತರ ಭಾಗಗಳಿಗೆ ತಲುಪಿಸುವ ಮೂಲಕ ಒಂದು ಕಡೆ ಹೆಸರು ಮತ್ತೊಂದು ಕಡೆ ಹಣ ಮಾಡುವ ಯೋಜನೆಯಲ್ಲಿ ಎಲ್ಲ ದೇಶಗಳು ತೊಡಗಿಕೊಂಡಿವೆ. ಆದರೆ ಬಹುತೇಕ ರಾಷ್ಟ್ರಗಳ ಲಸಿಕೆಗಳ ಮೇಲೆ ಹಲವಾರು ರಾಷ್ಟ್ರಗಳಿಗೆ ನಂಬಿಕೆ ಇಲ್ಲದ ಕಾರಣ ಲಸಿಕೆ ಖರಿದಿಸಲು ಬಹುತೇಕ ರಾಷ್ಟ್ರಗಳು ಹಿಂದೆಮುಂದೆ ನೋಡುತ್ತವೆ. ಆದರೆ ವಿಶ್ವದ ಕಣ್ಣಿಗೆ ಭಾರತದ ಲಸಿಕೆಗಳು ಮಾತ್ರ ಸಂಜೀವಿನಿಯಂತೆ ಕಾಣುತ್ತಿರುವುದು ಸುಳ್ಳಲ್ಲ.

ಅದೇ ಕಾರಣಕ್ಕಾಗಿ ವಿಶ್ವದ ಹಲವಾರು ರಾಷ್ಟ್ರಗಳಿಂದ ಭಾರತದ ಲಸಿಕೆ ಗಳಿಗೆ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಕಡೆ ಚೀನಾ ದೇಶವು ತಾನೆ ಹೋಗಿ ವಿಶ್ವದ ಇನ್ನಿತರ ದೇಶಗಳ ಬಾಗಿಲು ತಟ್ಟಿ ಲಸಿಕೆ ತೆಗೆದುಕೊಳ್ಳಿ ಎಂದು ಮನವಿ ಮಾಡುತ್ತಿದೆ, ಇದೇ ರೀತಿ ಬ್ರೆಜಿಲ್ ದೇಶವನ್ನು ಒಪ್ಪಿಸುವುದರಲ್ಲಿ ಚೀನಾ ದೇಶ ಯಶಸ್ವಿಯಾಗಿತ್ತು ಆದರೆ ಅದ್ಯಾಕೋ ತಿಳಿದಿಲ್ಲ ಚೀನಾ ಲಸಿಕೆ ಬಳಸಿದ ಬಳಿಕ ಬ್ರೆಜಿಲ್ ದೇಶ ಭಾರತದಲ್ಲಿ ಲಸಿಕೆ ತಯಾರಾಗಿದೆ ಎಂದು ತಿಳಿದ ತಕ್ಷಣ 5 ಮಿಲಿಯನ್ ಲಸಿಕೆ ಕಳುಹಿಸಿ ಕೊಡುವಂತೆ ಮನವಿ ಮಾಡಿದೆ.

ಬ್ರೆಜಿಲ್ ದೇಶ ಯಾವುದೇ ಒ’ತ್ತಡಗಳಿಗೆ ಮಣಿಯುವ ಇಲ್ಲ ಎಂದು ಚೀನಾ ದೇಶಕ್ಕೆ ತಿಳಿದಿರುವ ಕಾರಣ ಬಡ ದೇಶಗಳನ್ನು ಚೀನಾ ದೇಶ ಟಾ’ರ್ಗೆಟ್ ಮಾಡುವ ಆಲೋಚನೆ ನಡೆಸಿದೆ. ಅದೇ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ದೇಶದ ಜೊತೆ ಮಾತುಕತೆ ನಡೆಸಿದ ಚೀನಾ ದೇಶವು ಲಸಿಕೆ ಕೊಂಡುಕೊಳ್ಳುವಂತೆ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಮಾಡಲು ಸಿದ್ಧವಾಗಿತ್ತು. ಆದರೆ ದಕ್ಷಿಣ ಆಫ್ರಿಕಾ ಕೊನೆಯ ಕ್ಷಣದಲ್ಲಿ ಚೀನಾ ದೇಶಕ್ಕೆ ಕೈಕೊಟ್ಟು ಭಾರತಕ್ಕೆ 1.5 ಮಿಲಿಯನ್ ಲಸಿಕೆಗಳನ್ನು ಕಳುಹಿಸಿ ಕೊಡುವಂತೆ ಮನವಿ ಮಾಡಿದೆ. ಒಂದು ಕಡೆ ಚೀನಾ ದೇಶ ಇತರ ದೇಶಗಳ ಬಳಿ ತೆರಳಿ ಪರದಾಡುತ್ತಿದ್ದರೂ ಕೂಡ ಒಪ್ಪದ ರಾಷ್ಟ್ರಗಳು ಭಾರತವನ್ನು ಹುಡುಕಿಕೊಂಡು ಬಂದು ಲಸಿಕೆ ಕಳುಹಿಸಿಕೊಡುವಂತೆ ಮನವಿ ಮಾಡುತ್ತಿವೆ.

Facebook Comments

Post Author: Ravi Yadav