ಬಾಲ್ಯದಲ್ಲಿ ಹಠ ಮಾಡಿ, ಬಾಯಿ ಚಪ್ಪರಿಸಿಕೊಂಡು ತಿಂದಂತಹ ಹುಣಸೆ ಮಿಠಾಯಿಯನ್ನು ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ??

ಬಾಲ್ಯದಲ್ಲಿ ಹಠ ಮಾಡಿ, ಬಾಯಿ ಚಪ್ಪರಿಸಿಕೊಂಡು ತಿಂದಂತಹ ಹುಣಸೆ ಮಿಠಾಯಿಯನ್ನು ಮನೆಯಲ್ಲಿಯೇ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆ ಈಗ ಕನಿಷ್ಟ ಇಪ್ಪತ್ತು ವರ್ಷಗಳು ದಾಟಿದ್ದರೇ ಖಂಡಿತ ನಿಮ್ಮ ಬಾಲ್ಯದಲ್ಲಿ ನೀವು ಅಪ್ಪ ಅಮ್ಮ ಬೇಡ ಎಂದರೂ ಕೂಡ ಚಿಕ್ಕ ಪುಟ್ಟ ಅಂಗಡಿಗಳಿಗೆ ಹೋದ ತಕ್ಷಣ ಹಠಮಾಡಿ ಆದರೂ ಒಂದು ತಿಂಡಿಯನ್ನು ಖರೀದಿಸಿ ತಿಂದಿರುತ್ತೀರ. ಅಂದು ಪೋಷಕರು ಇದು ತಿನ್ನಬೇಡ ಆರೋಗ್ಯಕ್ಕೆ ಒಳ್ಳೆಯದಲ್ಲ ಏನೇನೋ ಹಾಕಿ ಮಾಡಿರುತ್ತಾರೆ ಎಂದು ಎಷ್ಟೆಲ್ಲಾ ಬುದ್ಧಿವಾದ ಹೇಳಿದರೂ ಕೂಡ ನಾವು ನೀವು ಎಲ್ಲರೂ ಕೂಡ ಹಠ ಮಾಡಿ ಖರೀದಿ ಮಾಡಿರುವ ತಿಂಡಿಯೇ ಹುಣಸೆ ಹಣ್ಣಿನ ಮಿಠಾಯಿ. ಇಂದು ನಾವು ನಮ್ಮ ಹಣದಲ್ಲಿ ಕೊಂಡುಕೊಳ್ಳುವ ಎಲ್ಲ ಸಾಮರ್ಥ್ಯವನ್ನು ಹೊಂದಿದ್ದೇವೆ. ಆದರೆ ಈಗ ಕೇವಲ ಬೆರಳೆಣಿಕೆಯ ಅಂಗಡಿಗಳಲ್ಲಿ ಹುಣಸೆ ಹಣ್ಣಿನ ಮಿಠಾಯಿ ಸಿಗುತ್ತದೆ, ಒಮ್ಮೆಲೆ ಒಂದು ಪ್ಯಾಕೆಟ್ ಕೊಳ್ಳುವಷ್ಟು ಹಣ ನಮ್ಮಲ್ಲಿ ಇದ್ದರೂ ಕೂಡ ಮಾರುವ ಅಂಗಡಿಗಳು ಕಡಿಮೆ. ಆದಕಾರಣ ನಾವೆಲ್ಲರೂ ಬಾಲ್ಯದಲ್ಲಿ ಬಾಯಿ ಚಪ್ಪರಿಸಿಕೊಂಡು ತಿಂದಿರುವಂತಹ ಹುಣಸೆ ಹಣ್ಣಿನ ಮಿಠಾಯಿ ಯನ್ನು ಮನೆಯಲ್ಲಿಯೇ ಮಾಡುವುದು ಹೇಗೆ ಎಂಬುದನ್ನು ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ.

ಹುಣಸೆ ಹಣ್ಣಿನ ಮಿಠಾಯಿ ಮಾಡಲು ಬೇಕಾಗುವ ಸಾಮಗ್ರಿಗಳು: 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿದ 1 ಬಟ್ಟಲು ಹುಣಸೆ ಹಣ್ಣು, ಮುಕ್ಕಾಲು ಬಟ್ಟಲು ಬೆಲ್ಲ, ಕಾಲು ಚಮಚ ಚಿಲ್ಲಿ ಫ್ಲಕ್ಸ್, ಅರ್ಧ ಚಮಚ ಜೀರಿಗೆ ಪುಡಿ, ಕಾಲು ಚಮಚ ಬ್ಲಾಕ್ ಸಾಲ್ಟ್, ಅರ್ಧ ಚಮಚ ಅಚ್ಚ ಖಾರದ ಪುಡಿ , 4 ಬೆಳ್ಳುಳ್ಳಿ, ರುಚಿಗೆ ತಕಷ್ಟು ಉಪ್ಪು, ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಸ್ಪೂನ್ ಅಥವಾ ಮರದ ಸ್ಪೂನ್, ಸ್ವಲ್ಪ ಕರಿಬೇವು.

ಹುಣಸೆ ಹಣ್ಣಿನ ಮಿಠಾಯಿ ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸ್ ಜಾರನ್ನು ತೆಗೆದುಕೊಂಡು ಅದಕ್ಕೆ ನೆನೆಸಿದ ಹುಣಸೆ ಹಣ್ಣು, ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, ರುಚಿಗೆ ತಕಷ್ಟು ಉಪ್ಪುನ್ನು ಹಾಕಿ 30 ಸೆಕೆಂಡುಗಳ ಕಾಲ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ.ನಂತರ ಗ್ಯಾಸ್ ಮೇಲೆ ಕಡಿಮೆ ಉರಿಯಲ್ಲಿ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ತೆಗೆದುಕೊಂಡ ಬೆಲ್ಲ ,1 ಚಮಚದಷ್ಟು ನೀರನ್ನು ಹಾಕಿ ಬೆಲ್ಲ ಕರಗುವವರೆಗೂ ಬಿಡಿ.

ನಂತರ ಇದಕ್ಕೆ ರುಬ್ಬಿನ ಹುಣಸೆ ಹಣ್ಣಿನ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪ ಉಪ್ಪು, ಬ್ಲಾಕ್ ಸಾಲ್ಟ್, ಅಚ್ಚ ಖಾರದ ಪುಡಿ, ಜೀರಿಗೆ ಪುಡಿ,ಚಿಲ್ಲಿ ಫ್ಲಕ್ಸ್ ಅನ್ನು ಹಾಕಿ ಮಿಕ್ಸ್ ಮಾಡಿ 15 ನಿಮಿಷಗಳ ಕಾಲ ತಳ ಹಿಡಿಯದ ಹಾಗೆ ಬೇಯಿಸಿಕೊಂಡು ತಣ್ಣಗಾಗಲು ಬಿಡಿ.ಕೊನೆಯದಾಗಿ ಈ ಮಿಶ್ರಣವನ್ನು ಸ್ಪೂನ್ ಮೇಲೆ ಇಟ್ಟು ಪ್ಲಾಸ್ಟಿಕ್ ಕವರ್ ನಿಂದ ಕವರ್ ಮಾಡಿದರೆ ಹುಣಸೆ ಹಣ್ಣಿನ ಮಿಠಾಯಿ ಸವಿಯಲು ಸಿದ್ದ.