ಹಿರಿಯ ನಟಿ ಸಿನೆಮಾದಿಂದ ದೂರ ಉಳಿದು ಮಾಡುತ್ತಿರುವ ಕೆಲಸ ನೋಡಿದರೇ, ನಿಜಕ್ಕೂ ಗ್ರೇಟ್ ಅನಿಸುತ್ತದೆ.

ಹಿರಿಯ ನಟಿ ಸಿನೆಮಾದಿಂದ ದೂರ ಉಳಿದು ಮಾಡುತ್ತಿರುವ ಕೆಲಸ ನೋಡಿದರೇ, ನಿಜಕ್ಕೂ ಗ್ರೇಟ್ ಅನಿಸುತ್ತದೆ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಹಿರಿಯ ನಟಿ ಆರತಿ ರವರ ಕುರಿತು ಯಾರಿಗೆ ತಿಳಿದಿಲ್ಲ ಹೇಳಿ. ಕನ್ನಡ ಚಿತ್ರರಂಗದ ಎಂದು ಮರೆಯಲಾಗದಂತಹ ನಟಿಯರಲ್ಲಿ ಆರತಿ ರವರ ಹೆಸರು ಕೇಳಿ ಬರುತ್ತದೆ. ಬಹಳ ಅದ್ಭುತವಾದ ನಟನೆಯ ಮೂಲಕ ಎಪ್ಪತ್ತರ ಹಾಗೂ ಎಂಬತ್ತರ ದಶಕದಲ್ಲಿ ಕನ್ನಡಿಗರ ಮನಗೆದ್ದಿದ್ದ ಖ್ಯಾತ ನಟಿ ಆರತಿ ರವರು ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕನ್ನಡಕ್ಕೆ ನೀಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಆರತಿ ರವರು ತಮ್ಮ ನಟನೆಯ ಮೂಲಕ ವಿಶೇಷವಾದ ಕೊಡುಗೆಗಳನ್ನು ನೀಡಿದ್ದಾರೆ ಎಂದರೆ ತಪ್ಪಾಗಲಾರದು. ಅಂದು ಬಹುತೇಕ ಸಿನಿಮಾ ನೋಡುಗರ ನೆಚ್ಚಿನ ನಟಿಯರಾಗಿದ್ದ ಆರತಿ ರವರು 1986 ರಲ್ಲಿ ತಮ್ಮ ನಟನೆಯನ್ನು ನಿಲ್ಲಿಸಿದರು. ಆದರೆ ಚಿತ್ರರಂಗದ ಕುರಿತು ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು 2005ರಲ್ಲಿ ಮಿಠಾಯಿ ಮನೆ ಎಂಬ ಮಕ್ಕಳ ಚಿತ್ರವನ್ನು ನಿರ್ದೇಶನ ಮಾಡಿ ನಿರ್ದೇಶನದಲ್ಲಿಯೂ ಕೂಡ ಸೈ ಎನಿಸಿಕೊಂಡರು.

ಈ ಮಿಠಾಯಿ ಮನೆ ಚಿತ್ರವು ಕರ್ನಾಟಕ ಸ್ಟೇಟ್ ಫಿಲಂ ಅವಾರ್ಡ್ ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿತ್ತು, ಹೌದು ಅತ್ಯುತ್ತಮ ಮಕ್ಕಳ ಚಿತ್ರ ಎಂಬ ಕ್ಯಾಟಗಿರಿ ಅಡಿಯಲ್ಲಿ ಈ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಸರಿ ಸುಮಾರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿರುವ ನಟಿ ಆರತಿ ರವರು ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದಲ್ಲಿ 12 ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಅವರೊಬ್ಬರ ನಿರ್ದೇಶನದಲ್ಲಿಯೇ 12 ಸಿನಿಮಾಗಳಲ್ಲಿ ನಟನೆ ಮಾಡಿರುವ ನಟಿ ಆರತಿ ರವರು ಇದೀಗ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಹಾಗಿದ್ದರೆ ಚಿತ್ರರಂಗದಿಂದ ದೂರ ಉಳಿದು ನಟಿ ಆರತಿ ರವರು ಮಾಡುತ್ತಿರುವ ಕೆಲಸವಾದರೂ ಏನು? ಹಾಗೂ ಇವರ ಕುರಿತು ಹೆಚ್ಚಿನ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ ಕೇಳಿ.

ಸ್ನೇಹಿತರೇ ನಾಗರಹಾವು, ಎಡಕಲ್ಲು ಗುಡ್ಡದಮೇಲೆ, ಧರ್ಮಸೆರೆ, ಹೊಂಬಿಸಿಲು, ಶುಭಮಂಗಳ, ಹಾಗೂ ರಂಗನಾಯಕಿ ಯಂತಹ ಜನಪ್ರಿಯ ಚಿತ್ರಗಳಲ್ಲಿ ನಟನೆ ಮಾಡಿರುವ ಆರತಿ ರವರು ಕನ್ನಡದ ಖ್ಯಾತ ನಟರಾದ ಡಾಕ್ಟರ್ ರಾಜಕುಮಾರ್, ಅಂಬರೀಶ್, ಅನಂತನಾಗ್, ಶಂಕರನಾಗ್, ಶ್ರೀನಾಥ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರ ಜೊತೆ ನಟಿಸುವ ಮೂಲಕ ಬಹುತೇಕ ಖ್ಯಾತನಾಮರ ಜೊತೆ ನಟಿಸಿರುವ ಅಪರೂಪದ ನಟಿಯರಲ್ಲಿ ಒಬ್ಬರಾಗಿದ್ದಾರೆ.

1986 ರಲ್ಲಿ ಟೈಗರ್ ಎಂಬ ಚಿತ್ರದಲ್ಲಿ ನಟನೆ ಮಾಡಿ ತದನಂತರ ಇವರು ನಟಿಯಾಗಿ ಚಿತ್ರರಂಗಕ್ಕೆ ಮರಳಲೇ ಇಲ್ಲ. ನಿರ್ದೇಶಕರಾಗಿ 2005ರಲ್ಲಿ ವಾಪಸ್ ಆದರೂ ಕೂಡ ಒಂದೇ ಒಂದು ಚಿತ್ರದ ಮೂಲಕ ಮತ್ತೆ ತಮ್ಮನ್ನು ತಾವು ಬೇರೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಿದ್ದರೆ ಈಗ ಆರತಿ ರವರು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡುವುದಾದರೇ,

ಸ್ನೇಹಿತರೇ ನಟಿ ಆರತಿ ರವರಿಗೆ ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಕಾರಣ ಇವರು ಜನತೆಗೆ ಏನಾದರೂ ಮಾಡಬೇಕು ಎಂದು ಉತ್ತರ ಕರ್ನಾಟಕದಲ್ಲಿ ಹಲವಾರು ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದಾರೆ, ಅಲ್ಲಿರುವ ಜನರಿಗೆ ಶೌಚಾಲಯ, ಆಸ್ಪತ್ರೆ ಹಾಗೂ ಹೆಣ್ಣುಮಕ್ಕಳಿಗೆ ವಿಶೇಷವಾಗಿ ಸ್ವಂತ ಉದ್ಯೋಗ ತರಬೇತಿ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ದೀನಬಂಧು ಎಂಬುವ ಮಕ್ಕಳ ಆಶ್ರಮವನ್ನು ಸ್ಥಾಪಿಸಿ ಹಾಸ್ಟೆಲ್ ಸಹ ನಿರ್ಮಿಸಿ ಮಕ್ಕಳಿಗೆ ಸಹಾಯ ಹಸ್ತ ಚಾಚಿದ್ದಾರೆ ಮತ್ತು ಬ್ಯಾಂಕಿನಲ್ಲಿ ಎರಡು ಕೋಟಿ ಹಣವನ್ನು ಶಿಕ್ಷಣ ಡೆಪಾಸಿಟ್ ಮಾಡುವ ಮೂಲಕ ಬರುವ ಬಡ್ಡಿ ಹಣದಿಂದ ಹಲವಾರು ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ವಿದ್ಯಾರ್ಥಿ ವೇತನವನ್ನು ನೀಡುತ್ತಾ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆ ಆರತಿ ಎಂಬ ಹೆಸರಿಗೆ ತಕ್ಕಂತೆ ಹಲವಾರು ವಿದ್ಯಾರ್ಥಿಗಳ ಹಾಗೂ ಜನಸಾಮಾನ್ಯರ ಬಾಳಿನಲ್ಲಿ ಬೆಳಕು ತಂದಿರುವ ಆರತಿ ರವರಿಗೆ ನಮ್ಮ ತಂಡದ ಪರವಾಗಿ ಅನಂತ ಅನಂತ ವಂದನೆಗಳು.