ಬಯಲಾಯಿತು ರಿಯಾಲಿಟಿ ಶೋಗಳ ಅಸಲಿ ಮುಖ. ಮೂರಾಬಟ್ಟೆಯಾಯಿತು ಹನುಮಂತನ ಬದುಕು. ಶಾಕಿಂಗ್ ಮಾಹಿತಿ ಹೊರಹಾಕಿದ ಹನುಮಂತ.

ಬಯಲಾಯಿತು ರಿಯಾಲಿಟಿ ಶೋಗಳ ಅಸಲಿ ಮುಖ. ಮೂರಾಬಟ್ಟೆಯಾಯಿತು ಹನುಮಂತನ ಬದುಕು. ಶಾಕಿಂಗ್ ಮಾಹಿತಿ ಹೊರಹಾಕಿದ ಹನುಮಂತ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿನ ರಿಯಾಲಿಟಿ ಶೋಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಒಂದರ ಮೇಲೆ ಒಂದರಂತೆ ಹಲವಾರು ರಿಯಾಲಿಟಿ ಶೋಗಳು ಯಶಸ್ಸಿನ ಸಾಲಿಗೆ ಸೇರುತ್ತಿವೆ. ಆದರೆ ಇಷ್ಟೆಲ್ಲಾ ರಿಯಾಲಿಟಿ ಶೋಗಳು ಯಶಸ್ವಿಯಾದರೂ ಕೂಡ ಒಂದು ವರ್ಗದ ಜನರು ಮಾತ್ರ ಎಲ್ಲ ರಿಯಾಲಿಟಿ ಶೋಗಳಲ್ಲಿ ಒಂದು ತಪ್ಪನ್ನು ಎತ್ತಿ ತೋರಿಸುತ್ತಿವೆ. ಅದುವೇ ಟಿಆರ್ಪಿ. ರಿಯಾಲಿಟಿ ಶೋಗಳು ಮೊದಲಿನಿಂದಲೂ ಟಿ ಆರ್ ಪಿ ಗಾಗಿ ಹಲವಾರು ಸ್ಪರ್ಧಿಗಳನ್ನು ಬಳಸಿಕೊಳ್ಳುತ್ತಾರೆ ಹಾಗೂ ಹಲವಾರು ಜನರ ಭಾವನಾತ್ಮಕ ವಿಚಾರಗಳನ್ನು ತೆಗೆದು ಜನರ ಮುಂದೆ ಬಿಟ್ಟು ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಾರೆ ಎಂಬ ವಾದವನ್ನು ಮುಂದಿಡುತ್ತಿದ್ದಾರೆ

ಕೆಲವರು ಎಂದಿನಂತೆ ರಿಯಾಲಿಟಿ ಶೋಗಳಿಗೆ ಅಭಿಮಾನಿಗಳಾಗಿ ಇವೆಲ್ಲ ಸುಳ್ಳು ಅವರ ಬದುಕು ಕಟ್ಟಿ ಕೊಡುವ ಕೆಲಸಗಳನ್ನು ವಾಹಿನಿಗಳು ಮಾಡುತ್ತಿವೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಈಗ ಯಾಕೆ ಈ ವಿಷ್ಯ ಎಂದು ಕೊಂಡಿರ?? ಓದಿ ತಿಳಿಯುತ್ತದೆ. ಸ್ನೇಹಿತರೇ ಟಿಆರ್ಪಿಯ ಲೆಕ್ಕಚಾರದಲ್ಲಿ ಮೊದಲಿನಿಂದಲೂ ಕನ್ನಡದ ಅತಿ ದೊಡ್ಡ ಹಾಡುಗಾರರ ವೇದಿಕೆ ಎನಿಸಿಕೊಂಡಿರುವ ಜೀ ಕನ್ನಡ ವಾಹಿನಿಯ ಸರಿಗಮಪ ಶೋ ನಲ್ಲಿ ಹನುಮಂತ ನವರ ಹೆಸರು ಭರ್ಜರಿಯಾಗಿಯೇ ಕೇಳಿಬರುತ್ತಿದೆ. ಹನುಮಂತ ಅವರ ಮುಗ್ಧತೆಯನ್ನು ಮುಂದಿಟ್ಟುಕೊಂಡು ಜೀ ಕನ್ನಡ ಟಿಆರ್ಪಿ ಚೆನ್ನಾಗಿ ಹೆಚ್ಚಿಸಿಕೊಂಡಿತು ಎಂಬ ವಾದಗಳು ಕೇಳಿಬರುತ್ತಿವೆ, ಕೇವಲ ಜೀ ವಾಹಿನಿ ಅಷ್ಟೇ ಅಲ್ಲ ಇನ್ನೂ ಹಲವಾರು ಮಾಧ್ಯಮಗಳು ಹನುಮಂತ ನವರ ಜನಪ್ರಿಯತೆಯನ್ನು ಬಳಸಿಕೊಂಡು ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳಲು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಇಂದಿಗೂ ಮಾಡುತ್ತಲೇ ಇದ್ದಾರೆ ಎಂದು ಜನರು ಹೇಳುತ್ತಿದ್ದಾರೆ.

ಈ ಎಲ್ಲಾ ಪರ ಹಾಗೂ ವಿರೋಧದ ಹೇಳಿಕೆಗಳ ನಡುವೆ ಇದೀಗ ರಿಯಾಲಿಟಿ ಶೋ ಬಗ್ಗೆ ಹನುಮಂತ ನವರು ಶಾಕಿಂಗ್ ಮಾಹಿತಿಯೊಂದನ್ನು ಹೊರಹಾಕಿದ್ದಾರೆ, ಇವರು ಈ ಮಾತುಗಳನ್ನು ಹೇಳಿದ ತಕ್ಷಣ ಈ ಹಿಂದೆ ಹಾಗೂ ಇದೀಗ ಮತ್ತಷ್ಟು ವಿವಿಧ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡ ಮತ್ತಷ್ಟು ಸ್ಪರ್ಧಿಗಳು ತಮ್ಮ ಅನುಭವವನ್ನು ಹೊರಹಾಕಿದ್ದು ರಿಯಾಲಿಟಿ ಶೋಗಳ ಕರಾಳ ಮುಖವನ್ನು ತೆಗೆದು ಇಟ್ಟಂತಾಗಿದೆ. ಅಷ್ಟಕ್ಕೂ ನಡೆಯುತ್ತಿರುವುದಾದರೂ ಏನು ಹಾಗೂ ಇದರ ಕುರಿತು ಸಂಪೂರ್ಣ ಮಾಹಿತಿಗಳನ್ನು ತಿಳಿಯಲು ಕೆಳಗಡೆ ಓದಿ.

ಸ್ನೇಹಿತರೇ ಸರಿಗಮಪ ಶೋನಲ್ಲಿ ಬಾರಿ ಹೆಸರು ಗಳಿಸುವ ಮೂಲಕ ಕರ್ನಾಟಕದಲ್ಲಿ ಮನೆ ಮಾತಾಗಿದ್ದ ಹನುಮಂತ ನವರ ತಾವು ಭಾಗವಹಿಸಿದ ಸೀಸನ್ನಲ್ಲಿ ರನ್ನರ್ ಅಪ್ ಆಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ, ಹೀಗೆ ಪ್ರಶಸ್ತಿ ಕೊಡುವ ಸಂದರ್ಭದಲ್ಲಿ ವೇದಿಕೆಯ ಮೇಲೆ ಹನುಮಂತ ನವರಿಗೆ ಹಲವಾರು ವಿವಿಧ ರೀತಿಯ ಉಡುಗೊರೆಗಳನ್ನು ನೀಡಲಾಗಿತ್ತು. ಅದೇ ಸಂದರ್ಭದಲ್ಲಿ ಜೀ ವಾಹಿನಿಯ ಪರವಾಗಿ ಒಂದು ಮನೆ ಕೂಡ ಕೊಡಿಸಲಾಗುತ್ತದೆ ಎಂಬ ಘೋಷಣೆ ಕೂಡ ನಡೆದಿತ್ತು. ಇದೀಗ ಉತ್ತರ ಕನ್ನಡ ಜಿಲ್ಲೆಗೆ ತಮ್ಮ ವೈಯಕ್ತಿಕ ಕಾರಣದಿಂದ ತೆರಳಿದಾಗ ದಾರಿಯಲ್ಲಿ ಬೇಕರಿಯೊಂದರ ಬಳಿ ನಿಂತು ಸಿಹಿತಿಂಡಿ ಕರೆದಿರುವ ಸಂದರ್ಭದಲ್ಲಿ ಬೇಕರಿಯ ಮಾಲೀಕ ಹನುಮಂತ ನವರನ್ನು ಗುರುತಿಸಿ ಮಾತನಾಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬೇಕರಿ ಮಾಲೀಕರೊಂದಿಗೆ ಮಾತನಾಡಿರುವ ಹನುಮಂತ ನವರು ನನಗೆ ಜೀ ಕನ್ನಡ ವಾಹಿನಿಯ ಅವಕಾಶ ನೀಡಿದ್ದು ನಿಜಕ್ಕೂ ಹೊಸ ಅನುಭವ ಎನಿಸಿತು. ಜನರು ಅದೇ ಕಾರಣಕ್ಕಾಗಿ ಎಂದು ನನ್ನನ್ನು ಗುರುತಿಸುತ್ತಿದ್ದಾರೆ. ಆದರೆ ನನಗೆ ಅವರು ನೀಡಿದ ಭರವಸೆಗಳು ಕೇವಲ ಭರವಸೆ ಗಳಾಗಿ ಉಳಿದಿವೆ, ಬೆಂಗಳೂರಿನಲ್ಲಿ ಮನೆ ಕೊಡಿಸುತ್ತೇವೆ ಎಂದಿದ್ದರು, ಆದರೆ ಇಲ್ಲಿಯವರೆಗೂ ರಿಜಿಸ್ಟ್ರೇಷನ್ ಕೂಡ ಆಗಿಲ್ಲ. ಕೇವಲ ಕ್ಯಾಮರಾ ಮುಂದೆ ಮಾತ್ರ ನನಗೆ ಭರವಸೆ ನೀಡಿದ್ದಾರೆ, ಎಲ್ಲಾ ರಿಯಾಲಿಟಿ ಶೋಗಳಲ್ಲಿಯು ಕೂಡ ಪ್ರಚಾರಕ್ಕಾಗಿ ನಮ್ಮಂತವರ ಬಾಳಿಗೆ ಒಂದು ಆಸೆಯನ್ನು ತೋರಿಸುತ್ತಾರೆ, ಹೀಗೆ ಆಸೆ ತೋರಿಸಿ ಈಡೇರಿಸದೆ ಇರುವ ಬದಲು ನಮ್ಮ ಕಲೆಯನ್ನು ಮೆಚ್ಚಿ ವಾಪಸು ಕಳುಹಿಸಿದರೂ ಸಾಕು. ಆಗ ನಾವು ಯಾವುದೇ ಆಸೆಯನ್ನು ಇಟ್ಟುಕೊಳ್ಳುವುದಿಲ್ಲ.

ಆದರೆ ಕ್ಯಾಮರಾ ಮುಂದೆ ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಎಂದು ಹೇಳಿ ತದನಂತರ ಯಾವುದೇ ಭರವಸೆ ಈಡೇರಿಸುವುದಿಲ್ಲ, ಸುಮ್ಮನೆ ಆಸೆ ಹುಟ್ಟಿಸುತ್ತಾರೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಿಮ್ಮ ಊರಿನಲ್ಲಿ ಯಾವುದಾದರೂ ಹಾಡುವ ಅವಕಾಶ ಇದ್ದರೆ ದಯವಿಟ್ಟು ನನಗೆ ತಿಳಿಸಿ ನಾನು ಬಂದು ಆಡುತ್ತೇನೆ ಹಣಕ್ಕಾಗಿ ಅಲ್ಲ, ಬದಲಿಗೆ ನನ್ನ ಕಲೆ ಜೀವಂತವಾಗಿ ಇರಲಿ ಎನ್ನುವ ಕಾರಣಕ್ಕೆ ಬರುತ್ತೇನೆ ಎಂದಿದ್ದಾರಂತೆ

ಇಷ್ಟೇ ಅಲ್ಲದೆ ಒಂದೆಡೆ ಈ ಸುದ್ದಿ ಹೊರಬೀಳುತ್ತಿದ್ದಂತೆ ಮತ್ತು ರಿಯಾಲಿಟಿ ಶೋಗಳ ಬಗ್ಗೆ ಪತ್ರಿಕೆಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದ್ದು, 2 ವರ್ಷಗಳ ಹಿಂದೆ ಕನ್ನಡದ ಕೋಟ್ಯಾಧಿಪತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹೊನ್ನಾವರದ ಮೀನುಗಾರತಿ ಮಹಿಳೆ ಲಕ್ಷ ಲಕ್ಷ ಹಣವನ್ನು ಗೆದ್ದಿದ್ದರು, ಇದಾದ ಬಳಿಕ ನಿಮಗೆ ಕರೆ ಮಾಡುತ್ತೇವೆ ಎಂದು ಹೇಳಿ ವಾಹಿನಿಯವರು ಕಳುಹಿಸಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಕರೆ ಬಂದಿಲ್ಲ, ಕೇವಲ ಕ್ಯಾಮೆರಾ ಮುಂದೆ ಮಾತ್ರ ಭರವಸೆಗಳನ್ನು ನೀಡುತ್ತಾರೆ. ಇದಷ್ಟೇ ಅಲ್ಲದೆ ಇದರ ಜೊತೆಗೆ ಹೊನ್ನಾವರದ ಮೂಲಕ ಮತ್ತು ಮಹಿಳೆಯೊಬ್ಬರು ಕನ್ನಡದ ಖ್ಯಾತ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವಾಗ ಸ್ಪರ್ಧಿಗೆ ಮೊದಲೇ ನೀವು ಕೇವಲ ಪಾಲ್ಗೊಳ್ಳುವವರು ಗೆಲ್ಲುವವರು ಬೇರೆಯೇ ಇರುತ್ತಾರೆ ಎಂದು ಮೊದಲೇ ಹೇಳಿ ಕರೆಸಿಕೊಂಡಿದ್ದಾರೆ,

ಅಷ್ಟೇ ಅಲ್ಲದೆ ಕ್ಯಾಮೆರಾ ಮುಂದೆ ನೀವು ಬಂದಾಗ ಕಣ್ಣೀರು ಹಾಕಬೇಕು ಎಂದು ಸ್ಕ್ರಿಪ್ಟ್ ರೆಡಿ ಮಾಡಿ ಸ್ಕ್ರೀನ್ ಪ್ಲೇ ರೆಡಿಮಾಡಿ ಕೊಟ್ಟಿದ್ದಾರಂತೆ. ಇನ್ನು ಬೆಂಗಳೂರಿಗೆ ಹೋಗಿ ಬರುವ ಖರ್ಚು ಕೂಡ ನಿಮ್ಮದೇ ಜೊತೆಗೆ ವಿಜೇತರಿಗೆ ನೀಡುವ ಪಾರಿತೋಷಕವನ್ನು ಕೂಡ ನಾವು ಅಲ್ಲಿಯೇ ಬಿಟ್ಟು ಬರಬೇಕು ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ ಈ ಎಲ್ಲಾ ವಿಚಾರಗಳು ಒಂದೊಂದಾಗಿ ಹೊರಬೀಳುತ್ತಿದ್ದು ರಿಯಾಲಿಟಿ ಶೋಗಳು ಕೇವಲಟಿ ಆರ್ ಪಿ ಗಾಗಿ ಜನರ ಭಾವನಾತ್ಮಕ ಸಂಗತಿಗಳೊಂದಿಗೆ ಆಟವಾಡುವುದಷ್ಟೇ ಎಂಬುದು ತಿಳಿದುಬಂದಿದೆ ಎಂದು ಜನರು ಬೇಸರ ವ್ಯಕ್ತ ಪಡಿಸಿದ್ದಾರೆ.