ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬೇಳೆ, ಟೊಮೊಟೊ ಇಲ್ಲದೇ 5 ನಿಮಿಷದಲ್ಲಿ ಮಾಡಿ ಹುಳಿ ಸಾರು ಹೇಗೆ ಗೊತ್ತೇ?? ಎಲ್ಲರೂ ಇಷ್ಟ ಪಡುತ್ತಾರೆ.

2

ನಮಸ್ಕಾರ ಸ್ನೇಹಿತರೇ, ಪರಿಸ್ಥಿತಿಗಳಿಗೆ ಅನುಗುಣವಾಗಿ ನಾವು ಅಡುಗೆ ಮಾಡುವುದನ್ನು ಕಲಿಯಲೇ ಬೇಕು. ಯಾಕೆಂದರೆ ಯಾವ ಸಮಯದಲ್ಲಿ ಎಷ್ಟು ಸಮಯದಲ್ಲಿ ಅಡುಗೆ ಮಾಡಬೇಕಾದಂತಹ ಪರಿಸ್ಥಿತಿ ಎದುರಾಗುತ್ತದೆ ತಿಳಿದಿಲ್ಲ. ಅದೇ ಕಾರಣಕ್ಕಾಗಿ ಇಂದು ನಾವು ತೊಗರಿ ಬೇಳೆ, ಟೊಮೇಟೊ ಇಲ್ಲದೇ 5 ನಿಮಿಷಗಳಲ್ಲಿ ಮಾಡಬಹುದಾದ ಹುಳಿ ಸಾರು ಅಥವಾ ಹುಳಿ ಗೊಜ್ಜು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ನಿಮ್ಮ ಅನುಕೊಲತೆಗಾಗಿ ಯೌಟ್ಯೂಬ್ ವಿಡಿಯೋ ಕೂಡ ಹಾಕಿದ್ದು, ಒಮ್ಮೆ ನೋಡಿ ಟ್ರೈ ಮಾಡಿ, ಹೇಗೆ ಬಂತು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಹುಳಿ ಸಾರು ಅಥವಾ ಹುಳಿ ಗೊಜ್ಜು ಮಾಡಲು ಬೇಕಾಗುವ ಸಾಮಗ್ರಿಗಳು: ನಿಂಬೆ ಹಣ್ಣಿನ ಗಾತ್ರದ ನೆನೆಸಿದ ಹುಣಸೆ ಹಣ್ಣಿನ ರಸ, 2 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಬೆಲ್ಲ, 1 ಚಮಚ ಹಸಿ ತೆಂಗಿನತುರಿ, ಕಾಲು ಚಮಚ ಜೀರಿಗೆ, ಕಾಲು ಚಮಚ ಮೆಂತ್ಯ, ಕಾಲು ಚಮಚ ಸಾಸಿವೆ, ಸ್ವಲ್ಪ ಬೆಳ್ಳುಳ್ಳಿ, ಸ್ವಲ್ಪ ಕರಿಬೇವು, ಒಂದೂವರೆ ಚಮಚ ಸಾಂಬಾರಿನ ಪುಡಿ, 1 ಚಮಚ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಹುಳಿ ಗೊಜ್ಜು ಅಥವಾ ಹುಳಿ ಸಾರು ಮಾಡುವ ವಿಧಾನ: ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಅದಕ್ಕೆ ಸಾಸಿವೆ, ಮೆಂತ್ಯ, ಜೀರಿಗೆಯನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸಣ್ಣಗೆ ಹಚ್ಚಿದ ಈರುಳ್ಳಿ, ಕರಿಬೇವು ಹಾಕಿ ಕಂದು ಬಣ್ಣ ಬರುವವರೆಗೂ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹುಣಸೆಹಣ್ಣಿನ ರಸ, ಜಜ್ಜಿದ ಬೆಳ್ಳುಳ್ಳಿ, ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ಬೆಲ್ಲ, ಸಾಂಬಾರಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಕೊನೆಯದಾಗಿ ತೆಂಗಿನ ತುರಿಯನ್ನು ಹಾಕಿ ಮಿಕ್ಸ್ ಮಾಡಿದರೆ ಹುಳಿ ಗೊಜ್ಜು ಅಥವಾ ಹುಳಿಸಾರು ಸವಿಯಲು ಸಿದ್ದ.