ಅತೀ ಮೃದುವಾದ ಪದರ ಚಪಾತಿ ಮಾಡುವ 3 ವಿಧಾನಗಳು ಹೇಗೆ ಗೊತ್ತೇ???

ಅತೀ ಮೃದುವಾದ ಪದರ ಚಪಾತಿ ಮಾಡುವ 3 ವಿಧಾನಗಳು ಹೇಗೆ ಗೊತ್ತೇ???

ಮೃದುವಾದ ಪದರ ಚಪಾತಿ ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಗೋಧಿಹಿಟ್ಟು, ಅರ್ಧ ಬಟ್ಟಲು ನೀರು, ಅರ್ಧ ಚಮಚ ಸಕ್ಕರೆ, ಅರ್ಧ ಚಮಚ ಉಪ್ಪು, ಸ್ವಲ್ಪ ಎಣ್ಣೆ.

ಮೃದುವಾದ ಪದರ ಚಪಾತಿ ಮಾಡುವ ವಿಧಾನಗಳು: ಮೊದಲಿಗೆ ಅರ್ಧ ಬಟ್ಟಲು ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಸಕ್ಕರೆ, ಅರ್ಧ ಚಮಚ ಉಪ್ಪನ್ನು ಹಾಕಿ ಕರಗಿಸಿಕೊಳ್ಳಿ. ಈ ನೀರನ್ನು ಬಳಸಿಕೊಂಡು ತೆಗೆದುಕೊಂಡ ಹಿಟ್ಟನ್ನು ಸಾಧ್ಯವಾದಷ್ಟು ಮೃದುವಾಗಿ ಕಲಸಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಚೆನ್ನಾಗಿ ನಾದಿಕೊಳ್ಳಿ. ನಂತರ ಹಿಟ್ಟನ್ನು ಮಧ್ಯಮ ಗಾತ್ರದ ಉಂಡೆಗಳನ್ನಾಗಿ ಮಾಡಿಕೊಳ್ಳಿ.

ಮೃದುವಾದ ಪದರ ಚಪಾತಿ ಮಾಡುವ ಮೊದಲ ವಿಧಾನ: ಒಂದು ಉಂಡೆಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಲಟ್ಟಿಸಿಕೊಳ್ಳಿ. ನಂತರ ಅದರ ಮೇಲೆ ಅರ್ಧ ಚಮಚದಷ್ಟು ಎಣ್ಣೆಯನ್ನು ಸವರಿಕೊಳ್ಳಿ. ನಂತರ ಅರ್ಧ ವೃತ್ತಾಕಾರವಾಗಿ ಬರುವಂತೆ ಮಡಚಿಕೊಳ್ಳಿ. ನಂತರ ಮತ್ತೆ ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಸವರಿ ಮತ್ತೆ ಮಡಚಿಕೊಂಡು ಉಂಡೆಯ ಆಕರವಾಗಿ ಮಾಡಿಕೊಂಡು ಚಪಾತಿಯನ್ನು ಲಟ್ಟಿಸಿಕೊಳ್ಳಿ.

ಮೃದುವಾದ ಪದರ ಚಪಾತಿ ಮಾಡುವ ಎರಡನೆಯ ವಿಧಾನ: ಒಂದು ಉಂಡೆಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಲಟ್ಟಿಸಿಕೊಳ್ಳಿ. ನಂತರ ಅದರ ಮೇಲೆ ಅರ್ಧ ಚಮಚದಷ್ಟು ಎಣ್ಣೆಯನ್ನು ಸವರಿಕೊಳ್ಳಿ. ನಂತರ ಒಂದು ಚಾ’ಕುವನ್ನು ತೆಗೆದುಕೊಂಡು ವೃತ್ತಾಕಾರದ ಹಿಟ್ಟಿನ ಮೇಲೆ ಒಂದು ಭಾಗದಲ್ಲಿ ಕತ್ತರಿಸಿಕೊಳ್ಳಿ. ನಂತರ ಕೋನ್ ನ ಆಕಾರದಲ್ಲಿ ಸುತ್ತಿಕೊಂಡು, ಮತ್ತೆ ಉಂಡೆಯ ಆಕರವಾಗಿ ಮಾಡಿಕೊಂಡು ಚಪಾತಿಯನ್ನು ಲಟ್ಟಿಸಿಕೊಳ್ಳಿ.

ಮೃದುವಾದ ಪದರ ಚಪಾತಿ ಮಾಡುವ ಮೂರನೆಯ ವಿಧಾನ: ಒಂದು ಉಂಡೆಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಲಟ್ಟಿಸಿಕೊಳ್ಳಿ. ನಂತರ ಅದರ ಮೇಲೆ ಅರ್ಧ ಚಮಚದಷ್ಟು ಎಣ್ಣೆಯನ್ನು ಸವರಿಕೊಳ್ಳಿ. ನಂತರ ರೋಮಾಲಿ ರೋಟಿ ಮಾಡುವ ಹಾಗೆ ಮಡಚಿಕೊಳ್ಳಿ. ನಂತರ ಉಂಡೆಯ ಆಕರವಾಗಿ ಮಾಡಿಕೊಂಡು ಚಪಾತಿಯನ್ನು ಲಟ್ಟಿಸಿಕೊಳ್ಳಿ.

ಕೊನೆಯದಾಗಿ ಪ್ಯಾನ್ ಮೇಲೆ ಚಪಾತಿಯನ್ನು ಸು’ಟ್ಟಿಕೊಂಡರೆ ಮೃದುವಾದ ಪದರ ಚಪಾತಿ ಸವಿಯಲು ಸಿದ್ದ.