ತಾಯಿ ಖರೀದಿಸಿದ ಮೊಬೈಲ್ನಿಂದ ತೆಗೆದ ಮೊದಲ ಫೋಟೋ ಮಗುವಿನ ಪ್ರಾಣ ಉಳಿಸಿದ್ದು ಹೇಗೆ ಗೊತ್ತಾ??

ತಾಯಿ ಖರೀದಿಸಿದ ಮೊಬೈಲ್ನಿಂದ ತೆಗೆದ ಮೊದಲ ಫೋಟೋ ಮಗುವಿನ ಪ್ರಾಣ ಉಳಿಸಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚೆಗೆ ಮೊಬೈಲ್ಗೆ ಎಂಬುದು ಎಲ್ಲರ ಕೈಯಲ್ಲಿ ಇರುವ ಒಂದು ಸಾಧನವಾಗಿದೆ, ಮೊಬೈಲ್ ಇಲ್ಲದೆ ಪ್ರಪಂಚವೇ ನಿಂತು ಹೋದಂತೆ ಜನರಿಗೆ ಭಾಸವಾಗುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಮಕ್ಕಳು ಕೂಡ ಮೊಬೈಲನ್ನು ಹೆಚ್ಚಾಗಿ ಬಳಸುತ್ತಿರುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಅದೇ ಕಾರಣಕ್ಕಾಗಿ ಪಾಲಕರು ಮೊಬೈಲ್ ಎಂಬ ವಸ್ತು ಇಲ್ಲದೇ ಇದ್ದರೆ ಖಂಡಿತ ಚೆನ್ನಾಗಿರುತ್ತಿತ್ತು ಎಂದು ವ್ಯಂಗ್ಯವಾಡುತ್ತಾರೆ.

ಆದರೆ ಅದೇ ಮೊಬೈಲ್ ಇಲ್ಲಿ ಒಂದು ಪುಟ್ಟ ಮಗುವಿನ ಪ್ರಾ’ಣವನ್ನು ಉಳಿಸಿದೆ, ಹೌದು ಸ್ನೇಹಿತರೆ ಈ ಘಟನೆ ಅಮೆರಿಕಾ ದೇಶದಲ್ಲಿ ನಡೆದಿದ್ದು, ಅಲ್ಲಿ ಒಬ್ಬರು ತಾಯಿ ಹೀಗೆ ತಮ್ಮ ಮೊಬೈಲ್ ಹಳೆಯದಾಗಿದ್ದ ಕಾರಣ ಹೊಸ ಮೊಬೈಲ್ ಅನ್ನು ಖರೀದಿ ಮಾಡಿದ್ದಾರೆ, ಖರೀದಿ ಮಾಡಿದ ತಕ್ಷಣ ಖುಷಿಯಲ್ಲಿ ತನ್ನ ಪುಟ್ಟ ಮಗುವಿನ ಚಿತ್ರವನ್ನು ಅಂದರೆ ಫೋಟೋವನ್ನು ತೆಗೆದಿದ್ದಾರೆ. ಈ ಫೋಟೋದಲ್ಲಿ ಮಗನ ಕುರಿತು ಒಂದು ವಿಷಯವನ್ನು ತಾಯಿ ಅರ್ಥ ಮಾಡಿಕೊಂಡಿದ್ದಾರೆ, ಆ ಮಗುವಿನ ಕಣ್ಣು ಬೆಳಕು ಬಿದ್ದ ತಕ್ಷಣ ಹೊಳೆಯಲು ಆರಂಭವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ.

ಆದರೆ ಬಹುಶಹ ನಾನು ರಾತ್ರಿಯ ವೇಳೆ ತೆಗೆದಿದ್ದೇನೆ, ಅಷ್ಟೇ ಅಲ್ಲದೆ ಮೊಬೈಲ್ನಲ್ಲಿ ಫ್ಲಾಶ್ ಲೈಟ್ ಇರುವ ಕಾರಣ ಮಗುವಿನ ಕಣ್ಣುಗಳು ಹೊಳೆಯುವಂತೆ ಕಾಣಿಸುತ್ತಿದೆ ಎಂದು ಸುಮ್ಮನಾಗಿ ರಾತ್ರಿ ಮಲಗಿ ಕೊಂಡಿದ್ದಾರೆ. ಆದರೂ ಕೂಡ ತಲೆಯಲ್ಲಿ ಅದ್ಯಾಕೋ ತಿಳಿದಿಲ್ಲ ತಾಯಿಗೆ ಯಾಕೆ ನನ್ನ ಮಗನ ಕಣ್ಣು ಹೊಳೆಯುವಂತೆ ಕಾಣಿಸುತ್ತಿತ್ತು ಎಂದು ಆಲೋಚನೆ ಮಾಡಲು ತೊಡಗಿಕೊಂಡಿದ್ದಾರೆ. ಇದೇ ಸಮಯದಲ್ಲಿ ತಮ್ಮ ಅನುಮಾನವನ್ನು ತೀರಿಸಿಕೊಳ್ಳಲು ಆಕೆಯ ತಂಗಿಗೆ ಫೋಟೋ ತೋರಿಸಿ ನನ್ನ ಮಗನ ಕಣ್ಣು ಪ್ರಾಣಿಗಳಂತೆ ತುಂಬಾ ಹೊಳೆಯುತ್ತಿದೆ ಸಾಮಾನ್ಯವಾಗಿ ಹೊಳೆಯುವಂತೆ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

ತಂಗಿಯು ಕೂಡ ಅದೇ ಉತ್ತರವನ್ನು ನೀಡಿದ್ದು, ಬಹುಶಹ ಮೊಬೈಲ್ ನಿಂದ ಬಂದ ಬೆಳಕಿನಿಂದಾಗಿ ಅದು ಹೊಳೆದಿರಬಹುದು ಎಂದು ಉತ್ತರ ನೀಡಿದ್ದಾರೆ, ಈ ಎಲ್ಲ ಘಟನೆಗಳು ನಡೆದ ಬಳಿಕ ತಾಯಿಯ ಮನಸ್ಸು ಯಾಕೋ ಸಮಾಧಾನ ಗೊಂಡಂತೆ ಕಾಣಲಿಲ್ಲ. ಅದೇ ಕಾರಣಕ್ಕಾಗಿ ನೇರವಾಗಿ ವೈದ್ಯರ ಬಳಿಗೆ ತೆರಳಲು ನಿರ್ಧಾರ ಮಾಡಿದ್ದಾರೆ. ಮಗನನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಕಣ್ಣುಗಳು ಯಾವ ಕಾರಣಕ್ಕೆ ಇಷ್ಟು ಹೊಳೆಯುತ್ತಿವೆ ಎಂದು ತಪಾಸಣೆ ಮಾಡಿಸಲು ಮುಂದಾಗಿದ್ದಾರೆ.

ಡಾಕ್ಟರ್ ಕೂಡ ಸಾಮಾನ್ಯವಾಗಿ ಮೊಬೈಲ್ ಬೆಳಕಿನಿಂದ ಕಣ್ಣುಗಳು ಹೊಳೆಯುತ್ತವೆ ಆದರೆ ಇಷ್ಟರ ಮಟ್ಟಿಗೆ ಹೊಡೆಯುವುದಿಲ್ಲ ಎಂಬುದನ್ನು ಹೇಳಿ ಕೊನೆಗೆ ಟೆಸ್ಟ್ ಮಾಡಲು ಒಪ್ಪಿಕೊಂಡಿದ್ದಾರೆ. ಇದಾದ ಬಳಿಕ ಮಗುವಿಗೆ ಎಲ್ಲಾ ಟೆಸ್ಟ್ ಗಳು ಮುಗಿದಾಗ ಮಗುವಿಗೆ ಕಣ್ಣಿನ ಕ್ಯಾನ್ಸರ್ ಇರುವುದು ತಿಳಿದುಬಂದಿದೆ. ಈ ರೀತಿಯ ಕ್ಯಾನ್ಸರ್ ಬಹಳ ವಿರಳ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಡಾಕ್ಟರ್ ಹೇಳಿದ್ದಾರೆ, ತಾಯಿ ಆ’ತಂಕಗೊಂಡಿದ್ದಾರೆ. ಪುಣ್ಯ ವೇನೆಂದರೆ ಮಗುವಿಗೆ ಕ್ಯಾನ್ಸರ್ ಇನ್ನೂ ಬಹಳ ಆರಂಭಿಕ ಹಂತದಲ್ಲಿ ಇದ್ದು, ಇದನ್ನು ತಿಳಿದುಕೊಂಡ ಡಾಕ್ಟರ್ ತಾಯಿಗೆ ಹೇಳಿ ಚಿಕಿತ್ಸೆ ಆರಂಭಿಸಿದರು. ಚಿಕಿತ್ಸೆ ಫಲಕಾರಿ ಕೂಡ ಆಯ್ತು ಮಗು ಕೆಲವೇ ಕೆಲವು ತಿಂಗಳುಗಳಲ್ಲಿ ಕ್ಯಾನ್ಸರ್ ಮುಕ್ತವಾಗಿದೆ.