ಹೊಸ ರೀತಿಯಲ್ಲಿ ಹೀಗೆ ಪುಳಿಯೋಗರೆ ಪುಡಿ ಮಾಡಿ, ಆರು ತಿಂಗಳಾದರೂ ಏನು ಆಗುವುದಿಲ್ಲ, ಫ್ರೆಶ್ ಆಗಿ ಇರುತ್ತದೆ.

ಹೊಸ ರೀತಿಯಲ್ಲಿ ಹೀಗೆ ಪುಳಿಯೋಗರೆ ಪುಡಿ ಮಾಡಿ, ಆರು ತಿಂಗಳಾದರೂ ಏನು ಆಗುವುದಿಲ್ಲ, ಫ್ರೆಶ್ ಆಗಿ ಇರುತ್ತದೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೊಸರೀತಿಯ ಪುಳಿಯೋಗರೆ ಪುಡಿ ಮಾಡುವ ವಿಧಾನವನ್ನು ನಿಮಗೆ ತಿಳಿಸುತ್ತೇವೆ. ಈ ರೀತಿ ಪುಳಿಯೋಗರೆ ಪುಡಿ ಮಾಡಿದರೆ, ಅದು ಆರು ತಿಂಗಳ ಕಾಲ ಹಾ’ಳಾಗುವುದಿಲ್ಲ.

ಪುಳಿಯೋಗರೆ ಪುಡಿ ಮಾಡಲು ಬೇಕಾಗುವ ಸಾಮಗ್ರಿಗಳು: 25 – 30 ಬ್ಯಾಡಿಗೆ ಮೆಣಸಿನಕಾಯಿ, 2 ಚಮಚ ಧನಿಯಾ,4 ಚಮಚ ಕರಿಎಳ್ಳು, 2 ಚಮಚ ಕಾಳು ಮೆಣಸು, 1 ಚಮಚ ಸಾಸಿವೆ, 1 ಚಮಚ ಜೀರಿಗೆ ,1 ಚಮಚ ಮೆಂತ್ಯ, ಅರ್ಧ ಬಟ್ಟಲು ಒಣ ತೆಂಗಿನ ತುರಿ, ದೊಡ್ಡ ನಿಂಬೆಹಣ್ಣಿನ ಗಾತ್ರದ ಹುಣಸೆಹಣ್ಣು, ಅರ್ಧ ಚಮಚ ಅರಿಶಿನ ಪುಡಿ, 2 ಚಮಚ ಬೆಲ್ಲ, 1 ಚಮಚ ಇಂಗು, ಎಣ್ಣೆ, ಅರ್ಧ ಬಟ್ಟಲು ಕಡಲೆ ಬೀಜ, 2 ಚಮಚ ಕಡಲೆ ಬೇಳೆ, 2 ಚಮಚ ಉದ್ದಿನಬೇಳೆ, ಸ್ವಲ್ಪ ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, 5 – 6 ಒಣಮೆಣಸಿನಕಾಯಿ.

ಪುಳಿಯೋಗರೆ ಪುಡಿ ಮಾಡುವ ವಿಧಾನ: ಮೊದಲಿಗೆ ಪುಳಿಯೋಗರೆ ಪುಡಿ ಮಾಡಲು ನಾವು ಹೇಳುವ ಪ್ರತಿಯೊಂದು ಪದಾರ್ಥಗಳನ್ನು ಬೇರೆಬೇರೆಯಾಗಿ ಹುರಿದುಕೊಳ್ಳಿ. ಮೊದಲು ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ ಬ್ಯಾಡಿಗೆ ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಹುರಿದುಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಅದೇ ಬಾಣಲಿಗೆ ತೆಗೆದುಕೊಂಡ ಧನಿಯಾವನ್ನು ಹಾಕಿ ಹುರಿದುಕೊಂಡು ಮತ್ತೆ ಅದೇ ಬಟ್ಟಲಿಗೆ ಹಾಕಿಕೊಳ್ಳಿ.

ನಂತರ 2 ಚಮಚ ಕರಿಎಳ್ಳನ್ನು ಹಾಕಿ ಹುರಿದುಕೊಂಡು ಅದೇ ಬಟ್ಟಲಿಗೆ ಹಾಕಿಕೊಳ್ಳಿ. ನಂತರ 2 ಚಮಚ ಕಾಳುಮೆಣಸನ್ನು ಹಾಕಿ ಹುರಿದುಕೊಂಡು ಬಟ್ಟಲಿಗೆ ಹಾಕಿಕೊಳ್ಳಿ. ತದನಂತರ 1 ಚಮಚ ಸಾಸಿವೆ, 1 ಚಮಚ ಜೀರಿಗೆಯನ್ನು ಹಾಕಿ ಹುರಿದುಕೊಂಡು ಮತ್ತೆ ಅದೇ ಬಟ್ಟಲಿಗೆ ಹಾಕಿಕೊಳ್ಳಿ. ಮತ್ತೆ ಒಂದು ಚಮಚ ಮೆಂತ್ಯವನ್ನು ಹಾಕಿ ಹುರಿದು ಕೊಂಡು ಅದೇ ಬಟ್ಟಲಿಗೆ ಹಾಕಿಕೊಳ್ಳಿ. ಕೊನೆಯದಾಗಿ ತೆಗೆದುಕೊಂಡ ಒಣ ಕೊಬ್ಬರಿ ತುರಿ ಮತ್ತು ಹುಣಸೆಹಣ್ಣನ್ನು ಹಾಕಿ ಹುರಿದುಕೊಂಡು ಅದೇ ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಿ.

ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹುರಿದ ಪದಾರ್ಥಗಳು, ಅರ್ಧ ಚಮಚ ಅರಿಶಿನ ಪುಡಿ, 2 ಚಮಚ ಬೆಲ್ಲ,1 ಚಮಚದಷ್ಟು ಹಿಂಗು ಹಾಕಿ ರುಬ್ಬಿದರೆ ಪುಡಿ ರೆಡಿಯಾಗುತ್ತದೆ. ಮತ್ತೆ ಗ್ಯಾಸ್ ಮೇಲೆ ಒಂದು ಬಾಣಲೆಯನ್ನು ಇಟ್ಟುಕೊಂಡು ಅದಕ್ಕೆ 3 ಚಮಚದಷ್ಟು ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಕಡಲೆಬೀಜ, ಸ್ವಲ್ಪ ಜೀರಿಗೆ, ಸ್ವಲ್ಪ ಸಾಸಿವೆ, ಕಡಲೆಬೇಳೆ ಮತ್ತು ಉದ್ದಿನ ಬೇಳೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 2 ಚಮಚ ಕರಿಎಳ್ಳು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಕರಿಬೇವನ್ನು ಹಾಕಿ ಮತ್ತೆ ಫ್ರೈ ಮಾಡಿಕೊಳ್ಳಿ. ಕೊನೆಯದಾಗಿ ಇದಕ್ಕೆ ಮಾಡಿಕೊಂಡ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಣ ಮೆಣಸಿನಕಾಯಿಯನ್ನು ಹಾಕಿ ಮಿಕ್ಸ್ ಮಾಡಿದರೆ ಪುಳಿಯೋಗರೆ ಪುಡಿ ರೆಡಿಯಾಗುತ್ತದೆ. ನೀವು ಬಳಸುವಾಗ ಈ ಪುಳಿಯೋಗರೆ ಪುಡಿಗೆ ಒಗ್ಗರಣೆಯನ್ನು ಹಾಕಿದರೆ ಪುಳಿಯೋಗರೆ ಗೊಜ್ಜು ಸವಿಯಲು ಸಿದ್ದ.