ಮನೆಯಲ್ಲಿಯೇ ಬಹಳ ಸುಲಭವಾಗಿ ತಯಾರು ಮಾಡಿ ಮಸಾಲೆ ಕಡ್ಲೆ. ಎಲ್ಲರೂ ಇಷ್ಟ ಪಟ್ಟು ತಿಂತಾರೆ.

ನಮಸ್ಕಾರ ಸ್ನೇಹಿತರೇ, ಬೇಕರಿಯಲ್ಲಿ ಕರೆಯುವ ತಿಂಡಿಗಳು ಒಳ್ಳೆಯದಲ್ಲ ಎಂದು ಆಲೋಚನೆ ಮಾಡುತ್ತಿದ್ದೀರಾ?? ಅದೇ ಸಮಯದಲ್ಲಿ ಮನೆಯ ಪ್ರತಿಯೊಬ್ಬರು ಇಷ್ಟಪಡುವಂತಹ ತಿಂಡಿಯನ್ನು ಮನೆಯಲ್ಲಿ ತಯಾರಿ ಮಾಡಲು ಆಲೋಚನೆ ನಡೆಸುತ್ತಿದ್ದರೇ ಬನ್ನಿ ನಾವು ಇಂದು ಬೇಕರಿ ಶೈಲಿಯ ಮಸಾಲ ಕಡ್ಲೆ ಮಾಡುವ ವಿಧಾನವನ್ನು ತಿಳಿಸಲಾಗಿದೆ.

ಮಸಾಲ ಕಟ್ಲೆ ಮಾಡಲು ಬೇಕಾಗುವ ಸಾಮಗ್ರಿಗಳು: 3 ಬಟ್ಟಲು ಕಡಲೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಜೀರಿಗೆ, ಸ್ವಲ್ಪ ಫುಡ್ ಕಲರ್, 2 ಚಮಚ ಅಚ್ಚಖಾರದ ಪುಡಿ, ಪೆಪ್ಪರ್ ಪೌಡರ್, 1ಕೆಜಿ ಕಡಲೆಬೀಜ, ಸ್ವಲ್ಪ ಕರಿಬೇವು, ಎಣ್ಣೆ.

ಮಸಾಲ ಕಡ್ಲೆಯ ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಜರಡಿ ಮಾಡಿದ ಕಡಲೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಜೀರಿಗೆ, ಸ್ವಲ್ಪ ಫುಡ್ ಕಲರ್, 2 ಚಮಚ ಅಚ್ಚಖಾರದ ಪುಡಿ, ಸ್ವಲ್ಪ ಪೆಪ್ಪರ್ ಪೌಡರ್ ಹಾಗೂ ಸ್ವಲ್ಪ ನೀರನ್ನು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ, ನಂತರ ಇದಕ್ಕೆ ಕಡಲೇ ಬೀಜವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸುಮಾರು 30 ನಿಮಿಷಗಳ ಕಾಲ ನೆನೆಯಲು ಬಿಡಿ. ಮತ್ತೊಂದು ಕಡೆ ಒಂದು ದೊಡ್ಡ ಬಾಣಲೆಯನ್ನು ಇಟ್ಟು ಅದಕ್ಕೆ ಕಡಲೆಬೀಜ ಕರೆಯುವಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ.

ಎಣ್ಣೆ ಕಾದ ನಂತರ ಒಂದು ಜಾಲರವನ್ನು ತೆಗೆದುಕೊಂಡು ಅದರ ಮೇಲೆ ಕಲಸಿಕೊಂಡ ಮಿಶ್ರಣವನ್ನು ಇಟ್ಟು ಒಂದು ಬಾರಿ ಎಣ್ಣೆಯಲ್ಲಿ ಅದ್ದು ತೆಗೆದು ಒಂದು ಚಿಕ್ಕ ಚಮಚವನ್ನು ಉಪಯೋಗಿಸಿಕೊಂಡು ಸಾಧ್ಯವಾದಷ್ಟು ಕಡಲೆ ಬೀಜಗಳನ್ನು ಸ್ವಲ್ಪ ಬೇರೆ ಬೇರೆಯಾಗಿ ಮಾಡಿಕೊಂಡು , ಮತ್ತೆ ಅದೇ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿಕೊಳ್ಳಿ.ಕಡಲೆ ಬೀಜವನ್ನು ಫ್ರೈ ಮಾಡಿಕೊಳ್ಳುವಾಗ ಶಬ್ದ ಬರುತ್ತದೆ. ಈ ಶಬ್ದ ನಿಲ್ಲುವವರೆಗೂ ಫ್ರೈ ಮಾಡಿಕೊಳ್ಳಿ. ಕೊನೆಯದಾಗಿ ಹಸಿ ಕರಿಬೇವನ್ನು ಎಣ್ಣೆಗೆ ಹಾಕಿ ಫ್ರೈ ಮಾಡಿ, ಕಡಲೆಬೀಜಕ್ಕೆ ಮಿಕ್ಸ್ ಮಾಡಿದರೆ ಮಸಾಲ ಕಡ್ಲೆ ಸವಿಯಲು ಸಿದ್ಧ.

Post Author: Ravi Yadav