ಸಾಮಾನ್ಯ ದೋಸೆ ಯಾಕೆ, ಈ ಹೆಸರು ಬೇಳೆ ದೋಸೆ ಟ್ರೈ ಮಾಡಿ, ಮನೆಯವರೆಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ.

ಸಾಮಾನ್ಯ ದೋಸೆ ಯಾಕೆ, ಈ ಹೆಸರು ಬೇಳೆ ದೋಸೆ ಟ್ರೈ ಮಾಡಿ, ಮನೆಯವರೆಲ್ಲರೂ ಇಷ್ಟ ಪಟ್ಟು ತಿನ್ನುತ್ತಾರೆ.

ನಮಸ್ಕಾರ ಸ್ನೇಹಿತರೇ ನಮ್ಮ ನಿಮ್ಮೆಲ್ಲರ ಮನೆಯಲ್ಲಿ ಇಡ್ಲಿ ಹಾಗೂ ದೋಸೆ ಮಾಡುವುದು ಸರ್ವೇಸಾಮಾನ್ಯ. ಮನೆಯಲ್ಲಿ ಎಷ್ಟು ಬಾರಿ ಇಡ್ಲಿ ಹಾಗೂ ದೋಸೆ ಮಾಡಿದರೂ ಕೂಡ ಹೋಟೆಲ್ ಗೆ ಹೋದಾಗ ನಾವು ವಿವಿಧ ರೀತಿಯ ದೋಸೆಗಳನ್ನು ಸೇವಿಸುತ್ತೇವೆ. ವಿವಿಧ ರೀತಿಯ ಹಲವಾರು ಫ್ಲೇವರ್ ನ ದೋಸೆಗಳು ಇಂದು ಹೋಟೆಲ್ಗಳಲ್ಲಿ ಲಭ್ಯವಿರುತ್ತವೆ. ಆದರೆ ನಾವು ಮನೆಯಲ್ಲಿ ಮಾತ್ರ ಕೆಲವೇ ಕೆಲವು ಬೆರಳೆಣಿಕೆಯ ಫ್ಲೇವರ್ ಗಳ ದೋಸೆಗಳನ್ನು ಮಾತ್ರ ಮಾಡುತ್ತೇವೆ.‌

ಆದರೆ ಇನ್ನು ಮುಂದೆ ನೀವು ನಿಮ್ಮ ಮನೆಯಲ್ಲಿಯೂ ಕೂಡ ಹೆಸರುಬೇಳೆ ದೋಸೆ ಬಹಳ ಸುಲಭವಾಗಿ ತಯಾರು ಮಾಡಬಹುದಾಗಿದೆ. ಖಂಡಿತ ಹೆಸರುಬೇಳೆ ದೋಸೆ ಯನ್ನು ನಿಮ್ಮ ಮನೆಗೆ ಪ್ರತಿಯೊಬ್ಬರೂ ಮೆಚ್ಚಿಕೊಂಡು ಒಂದೆರಡು ಎಕ್ಸ್ಟ್ರಾ ದೋಸೆಗಳನ್ನು ಕೂಡ ತಿಂದು ಬಿಡುತ್ತಾರೆ. ಬನ್ನಿ ಹಾಗಿದ್ದರೆ ಇನ್ಯಾಕೆ ತಡ ದೋಸೆ ಮಾಡಲು ಬೇಕಾಗಿರುವ ಸಾಮಾಗ್ರಿಗಳು ಹಾಗೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ, ನಿಮ್ಮ ಅನುಕೂಲಕ್ಕಾಗಿ ಯೂಟ್ಯೂಬ್ ವಿಡಿಯೋ ಕೂಡ ಹಾಕಲಾಗಿದ್ದು ಒಮ್ಮೆ ನೋಡಿ ಮಾಡಿ ಟ್ರೈ ಮಾಡಿ ಹೇಗಿದೆ ಎಂದು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ ಇಂದು ನಾವು ಹೆಸರುಬೇಳೆಯಿಂದ ದೋಸೆ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ದೋಸೆ ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಹೆಸರುಬೇಳೆ, 1 ಬಟ್ಟಲು ಅಕ್ಕಿ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಸಕ್ಕರೆ.

ದೋಸೆ ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಸರಿಯಾಗಿ 1 ಬಟ್ಟಲು ಹೆಸರುಬೇಳೆ ಮತ್ತು ೧ ಬಟ್ಟಲು ಅಕ್ಕಿಯನ್ನು ಹಾಕಿ 2 – 3 ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ನಂತರ ಅದಕ್ಕೆ ನೀರನ್ನು ಹಾಕಿ 5 – 6 ಗಂಟೆಗಳ ಕಾಲ ನೆನೆಯಲು ಬಿಡಿ. ನಂತರ ಒಂದು ಮಿಕ್ಸಿ ಜಾರಿಗೆ ನೆನೆಸಿದ ಅಕ್ಕಿ ಮತ್ತು ಬೇಳೆ, ಸ್ವಲ್ಪ ನೀರನ್ನು ಹಾಕಿ ನುಣ್ಣಗೆ ರುಬ್ಬಿಕೊಂಡು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ನಂತರ ಇದಕ್ಕೆ ೧ ಚಮಚ ಸಕ್ಕರೆ, ರುಚಿಗೆ ತಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿದರೆ ದೋಸೆ ಹಿಟ್ಟು ರೆಡಿಯಾಗುತ್ತದೆ. ಈ ದೋಸೆ ಹಿಟ್ಟನ್ನು ನೆನೆಯಲು ಬಿಡಬೇಕಿಲ್ಲ, ತಕ್ಷಣ ದಿಡೀರ್ ಆಗಿ ದೋಸೆ ಮಾಡಿಕೊಳ್ಳಬಹುದು.ನಂತರ ಗ್ಯಾಸ್ ಮೇಲೆ ಒಂದು ತವಾವನ್ನು ಇಟ್ಟುಕೊಂಡು ಕಾಯಲು ಬಿಡಿ. ಕಾದ ನಂತರ ಹಿಟ್ಟನ್ನು ಹಾಕಿ ದೋಸೆ ಮಾಡಿಕೊಂಡರೆ ಹೆಸರುಬೇಳೆ ದೋಸೆ ಸವಿಯಲು ಸಿದ್ಧ.