ಮೀನಿನ ಮುಳ್ಳು ಸಿಕ್ಕಿ ಹಾಕಿಕೊಂಡರೇ ಸುಲಭವಾಗಿ ಹೊರತೆಗೆಯುವುದು ಹೇಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮೀನು ಎಂದರೇ ಎಲ್ಲರೂ ಬಹಳ ಇಷ್ಟಪಟ್ಟು ತಿನ್ನುತ್ತಾರೆ, ಇತ್ತೀಚಿನ ದಿನಗಳಲ್ಲಿ ಕೆಲವರು ಮೀನನ್ನು ಸಸ್ಯಹಾರಿ ಎಂದು ಪರಿಗಣಿಸುವ ಕಾರಣ ದಿನೇದಿನೇ ಮೀನು ತಿನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ. ದೇಹಕ್ಕೆ ಕೂಡ ಉತ್ತಮವಾದ ಆರೋಗ್ಯವನ್ನು ನೀಡುವುದರಲ್ಲಿ ಮೀನಿನಲ್ಲಿರುವ ಪೋಷಕಾಂಶಗಳು ಮಹತ್ವದ ಪಾತ್ರ ವಹಿಸಲಿದ್ದು ರುಚಿಯ ಜೊತೆಗೆ ಆರೋಗ್ಯ ಕೂಡ ದೊರೆಯುತ್ತದೆ ಎಂಬ ಕಾರಣಕ್ಕೆ ದಿನೇದಿನೇ ಮೀನು ತಿನ್ನುವವರ ಸಂಖ್ಯೆ ಹೆಚ್ಚಾಗುತ್ತಿದೆ

ಮೀನಿನಲ್ಲಿ ಕೊಬ್ಬು ಮತ್ತು ಹೆಚ್ಚಿನ ಪ್ರೋಟೀನ್ ಗಳು ಇವೆ, ವಿಟಮಿನ್-ಡಿ, ಒಮೆಗಾ ತ್ರಿ ಸೇರಿದಂತೆ ಪೊಟ್ಯಾಶಿಯಮ್, ಮೆಗ್ನೀಶಿಯಮ್ ಅಂಶಗಳು ಹೇರಳವಾಗಿರುವ ಕಾರಣ ಮೆದುಳಿಗೆ ಮತ್ತು ಹೃದಯಕ್ಕೆ ಉತ್ತಮ ಆರೋಗ್ಯವನ್ನು ನೀಡುವುದರಲ್ಲಿ ಮೀನು ಸಹಕಾರಿಯಾಗಿದೆ. ಇಷ್ಟೆಲ್ಲಾ ಆರೋಗ್ಯದ ಲಾಭಗಳು ಹಾಗೂ ರುಚಿಯನ್ನು ಹೊಂದಿದ್ದರೂ ಕೂಡ ಮೀನನ್ನು ತಿನ್ನಲು ಕೆಲವರು ಹಿಂ’ದೇಟು ಹಾಕುತ್ತಾರೆ. ಹಾಗೆಂದು ಅವರಿಗೆ ಮೀನು ತಿನ್ನಲು ಇಷ್ಟವಿಲ್ಲವೆಂದು ಅಲ್ಲ ಬದಲಾಗಿ ಮೀನಿನಲ್ಲಿರುವ ಮುಳ್ಳುಗಳನ್ನು ನೋಡಿದರೇ ತಿಂದರೆ ಮುಳ್ಳುಗಳು ಎಲ್ಲಾದರೂ ಸಿಕ್ಕಿ ಕೊಳ್ಳಬಹುದು ಎಂಬ ಯೋಚನೆಯಿಂದ ಬಹುತೇಕರು ಮೀನನ್ನು ತಿನ್ನಲು ಒಂದು ಕ್ಷಣ ಆಲೋಚನೆ ನಡೆಸುತ್ತಾರೆ.

ಮೀನಿನಲ್ಲಿರುವ ಮುಳ್ಳುಗಳು ಗಂಟಲಿನಿಂದ ಹಿಡಿದು ಹೊಟ್ಟೆಯ ವರೆಗೆ ಯಾವುದೇ ಪ್ರದೇಶದಲ್ಲಿ ಸಿಕ್ಕಿಹಾಕಿಕೊಳ್ಳಬಹುದಾಗಿದೆ. ನೇರವಾಗಿ ಮೀನಿನ ಮುಳ್ಳುಗಳು ಹೊಟ್ಟೆಗೆ ಹೋದರೇ ಯಾವುದೇ ತೊಂದರೆ ಇಲ್ಲ. ಯಾಕೆಂದರೆ ನಮ್ಮಲ್ಲಿರುವ ಜೀರ್ಣಾಂಗ ವ್ಯವಸ್ಥೆ ಮೀನನ್ನು ಕೂಡ ಜೀರ್ಣ ಮಾಡಿ ಹೊರಗೆ ಹಾಕುತ್ತದೆ. ಆದರೆ ಅನ್ನನಾಳದಲ್ಲಿ ಮೀನು ಸಿಕ್ಕಿಕೊಂಡರೇ ನಾವು ಅದನ್ನು ಹೊರತೆಗೆಯಬೇಕಾಗುತ್ತದೆ. ಹಾಗಿದ್ದರೆ ಯಾವ ಜಾಗದಲ್ಲಿ ಮೀನಿನ ಮುಳ್ಳು ಸಿಕ್ಕಿಹಾಕಿಕೊಂಡರೇ ಏನು ಮಾಡಿಕೊಡಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ ಕೇಳಿ.

ಮೊದಲನೇದಾಗಿ ಸ್ನೇಹಿತರೇ ಈ ಮೀನಿನ ಮುಳ್ಳು ಕಿರುನಾಲಿಗೆಯ ಕೆಳಗೆ ಸಿಕ್ಕಿಕೊಂಡರೆ ನೀವು ಸಾಧ್ಯವಾದಷ್ಟು ಒಮ್ಮೆ ಪೂರ್ತಿಯಾಗಿ ಉಸಿರು ತೆಗೆದುಕೊಂಡು ನಿಮ್ಮ ಎರಡು ಕೈಗಳನ್ನು ಕಟ್ಟಿ, ಹೀಗೆ ಕೈ ಕಟ್ಟಿರುವ ಸಂದರ್ಭದಲ್ಲಿ ನಿಮ್ಮ ಹಿಂದೆ ಇಂದ ಯಾರಾದರೂ ನಿಮ್ಮನ್ನು ಗಟ್ಟಿಯಾಗಿ ಅಪ್ಪಿಕೊಳ್ಳಬೇಕು, ಹೀಗೆ ಅಪ್ಪಿಕೊಂಡಿರುವ ಸಂದರ್ಭದಲ್ಲಿ ನೀವು ಎಳೆದು ಕೊಂಡ ಉಸಿರನ್ನು ಒಮ್ಮೆಲೇ ಜೋರಾಗಿ ಬಿಟ್ಟರೆ ಕಿರುನಾಲಿಗೆ ಬಳಿ ಸಿಕ್ಕಿಕೊಂಡಿರುವ ಮುಳ್ಳು ಬಹಳ ಸುಲಭವಾಗಿ ಹೊರಬರುತ್ತದೆ, ಈ ಸಂದರ್ಭದಲ್ಲಿ ನೀವು ಕೊಂಚ ಕೆಳಗೆ ಬಾಗಿ, ಬಾಯನ್ನು ತೆಗೆದು ಬೆನ್ನಿನಮೇಲೆ ಹಿಂದೆಯಿಂದ ಯಾರಾದರೂ ಬೊಗಸೆಯಿಂದ ತಟ್ಟಿದರೆ ಶ್ವಾಸನಾಳದ ಮೇಲ್ಭಾಗದಲ್ಲಿ ಇರುವ ಮುಳ್ಳು ಬಾಯಿಯಿಂದ ಹೊರ ಬರುತ್ತದೆ.

ಇನ್ನೂ ಒಂದು ವೇಳೆ ನಿಮ್ಮ ಕರುಳಿನಲ್ಲಿ ಮುಳ್ಳು ಸಿಕ್ಕಿಹಾಕಿಕೊಂಡಿದೆ ಎಂಬ ನೋವಾಗಲಿ ಅಥವಾ ಅನುಭವವಾಗಲಿ ನಿಮಗೆ ಆದರೆ ನೀವು ಆ ದಿನ ಯಾವುದೇ ಆಹಾರವನ್ನು ಸೇವಿಸದೆ ಹೆಚ್ಚು ಹೆಚ್ಚು ನೀರನ್ನು ಕುಡಿಯುತ್ತಿರಿ. ಆಗ ಮುಳ್ಳು ಬಹಳ ಸುಲಭವಾಗಿ ಹೊರಗೆ ಬರುತ್ತದೆ, ಇನ್ನೂ ಒಂದು ವೇಳೆ ನಿಮ್ಮ ಗಂಟಲಿನಲ್ಲಿ ಮುಳ್ಳು ಸಿಕ್ಕಿಹಾಕಿಕೊಂಡರೇ ಒಂದು ಬಾಳೆಹಣ್ಣು ತೆಗೆದುಕೊಂಡು ಕೇವಲ ಎರಡು ಅಥವಾ ಮೂರು ತುಂಡುಗಳನ್ನಾಗಿ ಮಾಡಿ ಅಗೆಯದೇ 2ರಿಂದ 3 ನಿಮಿಷಗಳ ಕಾಲ ಬಾಯಲ್ಲಿ ಇಟ್ಟುಕೊಳ್ಳಿ. ಆಗ ನಿಮ್ಮ ಬಾಯಲ್ಲಿ ಲಾಲಾರಸವು ಉತ್ಪಾದನೆಯಾಗಿ ಮುಳ್ಳನ್ನು ಹೊರತೆಗೆಯಲು ಸಹಾಯ ಮಾಡುತ್ತದೆ.

ಇಷ್ಟೇ ಅಲ್ಲದೆ ನೀವು ಒಂದಷ್ಟು ಶೇಂಗಾ ಬೀಜವನ್ನು ತೆಗೆದುಕೊಂಡು ಚೆನ್ನಾಗಿ ಅಗೆದು ಒಮ್ಮೆಲೇ ಜೋರಾಗಿ ನುಂಗಿ ಅಥವಾ ಅನ್ನವನ್ನು ಅಗೆಯದೇ ಹಾಗೆ ನೇರವಾಗಿ ನುಂಗಿ ತಕ್ಷಣ ಒಂದು ಲೋಟ ನೀರನ್ನು ಕುಡಿಯಿರಿ. ಇನ್ನೊಂದು ವಿಧಾನದ ಕುರಿತು ಮಾತನಾಡುವುದಾದರೆ ಒಂದು ಬ್ರೆಡ್ ಗೆ ಪೀನಟ್ ಬಟರ್ ಹಾಕಿಕೊಂಡು ಚೆನ್ನಾಗಿ ಜಗಿದು ಒಂದು ಲೋಟ ನೀರನ್ನು ಕುಡಿದರೆ ಮುಳ್ಳು ಆರಾಮಾಗಿ ನೇರವಾಗಿ ಹೊಟ್ಟೆಗೆ ಹೋಗುತ್ತದೆ. ಇನ್ನು ಈ ಮೇಲಿನ ಎಲ್ಲಾ ವಿಧಾನಗಳಲ್ಲಿ ಯಾವುದು ಕೂಡ ಯಶಸ್ವಿಯಾಗಿಲ್ಲ ಎಂದರೆ ಕೂಡಲೇ ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ.

Post Author: Ravi Yadav