ಸಮಯವಿಲ್ಲವೇ?? ಹತ್ತೇ ಹತ್ತು ನಿಮಿಷದಲ್ಲಿ ಮಸಾಲಾ ಅಕ್ಕಿ ರೊಟ್ಟಿಯನ್ನು ಹೀಗೆ ಮಾಡಿ.

ಸಮಯವಿಲ್ಲವೇ?? ಹತ್ತೇ ಹತ್ತು ನಿಮಿಷದಲ್ಲಿ ಮಸಾಲಾ ಅಕ್ಕಿ ರೊಟ್ಟಿಯನ್ನು ಹೀಗೆ ಮಾಡಿ.

ನಮಸ್ಕಾರ ಸ್ನೇಹಿತರೇ ಪ್ರತಿ ಗೃಹಿಣಿಯೂ ತಮ್ಮ ಮನೆಯವರಿಗೆ ರುಚಿರುಚಿಯಾದ ಅಡುಗೆಗಳನ್ನು ಮಾಡಬೇಕು ಎಂಬ ಆಲೋಚನೆಯಲ್ಲಿ ತನ್ನ ದಿನಪೂರ್ತಿ ಅದರ ಕುರಿತು ಆಲೋಚನೆ ನಡೆಸುತ್ತಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಬೆಳಿಗ್ಗೆ ಎದ್ದ ತಕ್ಷಣ ತಿಂಡಿ ಏನು ಮಾಡೋಣ ಅಂತ ಯೋಚನೆ ಮಾಡುತ್ತಾರೆ, ತಿಂಡಿ ತಿಂದು 5 ನಿಮಿಷಗಳಾಗುವಷ್ಟರಲ್ಲಿ ಊಟದ ಕುರಿತು, ಊಟ ತಿಂದ ಬಳಿಕ ಸಂಜೆಯ ತಿನಿಸು ಗಳ ಕುರಿತು, ಮತ್ತೆ ರಾತ್ರಿಗೆ ಮಧ್ಯಾಹ್ನದ ಅಡುಗೆ ಸರಿ ಹೊಂದುತ್ತದೆಯೇ ಅಥವಾ ರಾತ್ರಿಗೆ ಮತ್ತೊಂದು ಸಾಂಬಾರು ಮಾಡಬೇಕೊ ಎಂಬುದರ ಕುರಿತು ಆಲೋಚನೆ ನಡೆಸುತ್ತಾರೆ.

ಬಹುತೇಕ ಮಧ್ಯಮ ವರ್ಗದ ಕುಟುಂಬದ ಗೃಹಿಣಿಯರ ಆಲೋಚನೆ ಮೇಲಿನಂತೆಯೇ ಇರುತ್ತದೆ. ಇದು ಹಲವಾರು ಸಿನಿಮಾಗಳಲ್ಲಿ ಕೂಡ ಡೈಲಾಗ್ ಗಳಾಗಿ ಕೇಳಿ ಬಂದಿವೆ, ಹೀಗಿರುವಾಗ ಗೃಹಿಣಿಯು ತನ್ನ ಎಲ್ಲಾ ಕೆಲಸದ ನಡುವೆ ಬೆಳಗಿನ ಉಪಹಾರ ತಯಾರಿಸುವುದು ಕಷ್ಟವೇ ಸರಿ. ಅದೇ ಕಾರಣಕ್ಕಾಗಿ ಇಂದು ನಾವು ಕೇವಲ ಹತ್ತೇ ಹತ್ತು ನಿಮಿಷಗಳಲ್ಲಿ ಮಾಡಬಹುದಾದ ಮಸಾಲಾ ಅಕ್ಕಿ ರೊಟ್ಟಿ ಬಗ್ಗೆ ತಿಳಿಸಿ ಕೊಡಲಿದ್ದೇವೆ. ಒಮ್ಮೆ ನೀವು ನೋಡಿ ನಿಮ್ಮ ಮನೆಯಲ್ಲಿ ಟ್ರೈ ಮಾಡಿ ರುಚಿ ಹೇಗೆ ಬಂದಿದೆ ಎಂದು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಮಸಾಲಾ ಅಕ್ಕಿ ರೊಟ್ಟಿ ಮಾಡಲು ಬೇಕಾಗುವ ಸಾಮಗ್ರಿಗಳು: 2 ಬಟ್ಟಲು ಅಕ್ಕಿಹಿಟ್ಟು,1 ಬಟ್ಟಲು ಸಬ್ಬಕ್ಕಿ ಸೊಪ್ಪು, 1 ಬಟ್ಟಲು ಸಣ್ಣಗೆ ಹಚ್ಚಿದ ಈರುಳ್ಳಿ, ಸಣ್ಣಗೆ ಹಚ್ಚಿದ ಅರ್ಧ ಬಟ್ಟಲು ಎಲೆಕೋಸು, ಅರ್ಧ ಕಟ್ಟು ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, 4 ಹಸಿಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ.

ಮಸಾಲಾ ಅಕ್ಕಿ ರೊಟ್ಟಿ ಮಾಡುವ ವಿಧಾನ: ಮೊದಲಿಗೆ ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಸಣ್ಣಗೆ ಹಚ್ಚಿದ ಸಬ್ಬಕ್ಕಿ ಸೊಪ್ಪು, ಸಣ್ಣಗೆ ಹಚ್ಚಿದ ಈರುಳ್ಳಿ, ಸಣ್ಣಗೆ ಹಚ್ಚಿದ ಎಲೆಕೋಸು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸಣ್ಣಗೆ ಹಚ್ಚಿದ ಕರಿಬೇವು, ಸಣ್ಣಗೆ ಹಚ್ಚಿದ ಹಸಿಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಒಂದು ಕಾಲು ಬಟ್ಟಲು ಬಿಸಿ ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 5 – 8 ನಿಮಿಷಗಳ ಕಾಲ ನೆನೆಯಲು ಬಿಡಿ.ನಂತರ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ನಂತರ ಒಂದು ಪ್ಲಾಸ್ಟಿಕ್ ಪೇಪರ್ ಮೇಲೆ ಎಣ್ಣೆಯನ್ನು ಸವರಿಕೊಂಡು, ಉಂಡೆಯನ್ನು ಇಟ್ಟು ರೊಟ್ಟಿ ತಟ್ಟುವ ಹಾಗೆ ತಟ್ಟಿ ತವಾದ ಮೇಲೆ ಬಿಸಿ ಮಾಡಿಕೊಂಡರೆ ಮಸಾಲಾ ಅಕ್ಕಿ ರೊಟ್ಟಿ ಸವಿಯಲು ಸಿದ್ದ.