ಕೊನೆಗೂ ಖುಲಾಯಿಸುತ್ತಿದೆ ಶಶಿಕುಮಾರ್ ರವರಿಗೆ ಅದೃಷ್ಟ ! ಪುತ್ರನಿಗೆ ಮತ್ತೊಂದು ಸಿಹಿಸುದ್ದಿ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರಾಗಿರುವ ಶಶಿ ಕುಮಾರ್ ರವರು ಒಂದು ಕಾಲದಲ್ಲಿ ನಾಯಕನಟ ಹಾಗೂ ಖಳನಾಯಕನ ಪಾತ್ರಗಳಲ್ಲಿ ಮಿಂಚಿ ಚಿತ್ರರಂಗದಲ್ಲಿ ಉತ್ತುಂಗದಲ್ಲಿ ಇರುವಾಗ ವಿಧಿಯಾಟದ ಕೈಗೆ ಸಿಲುಕಿ ನಡೆಯಬಾರದ ಅಂತಹ ಘಟನೆ ನಡೆದ ಮೇಲೆ, ಹೆಚ್ಚಿನ ಅವಕಾಶಗಳು ಸಿಗದೇ ಚಿತ್ರರಂಗದಿಂದ ಇದೀಗ ಬಹುತೇಕ ದೂರ ಉಳಿದಿದ್ದಾರೆ. ಇವರ ನಟನೆಯನ್ನು ನೋಡಿದ ಪ್ರತಿಯೊಬ್ಬರೂ ಅಂದಿನ ಕಾಲದಲ್ಲಿ ಖಂಡಿತ ಇವರೊಬ್ಬರು ದಿಗ್ಗಜ ನಟನ ಆಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದರು.

ಆದರೆ ಕೆಲವೇ ಕೆಲವು ನಿಮಿಷಗಳಲ್ಲಿ ನಡೆದ ಒಂದು ಘಟನೆ ಅವರ ಜೀವನವನ್ನೇ ಬದಲಾಯಿಸಿಬಿಟ್ಟಿತು. ತದನಂತರ ಕೇವಲ ಬೆರಳೆಣಿಕೆಯಷ್ಟು ಅವಕಾಶಗಳನ್ನು ಪಡೆದು, ತಮಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಟನೆಯ ಮೂಲಕ ನಿರ್ವಹಣೆ ಮಾಡಿದರೂ ಕೂಡ ಶಶಿ ಕುಮಾರ್ ರವರಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಹೆಚ್ಚಾಗಿ ಸಿಗಲಿಲ್ಲ. ಬಹುಶಃ ಅದೇ ಕಾರಣಕ್ಕಾಗಿಯೋ ಏನೋ ತಿಳಿದಿಲ್ಲ ಇಂದಿಗೂ ಕೂಡ ಚಿತ್ರರಂಗದ ಜೊತೆ ಒಡನಾಟವಿದ್ದರೂ ಕೂಡ ಬಹಳ ಅಂತರವನ್ನು ಕಾಯ್ದುಕೊಂಡಿದ್ದಾರೆ. ಆದರೆ ಶಶಿಕುಮಾರ್ ಅವರ ಪುತ್ರ ಇದೀಗ ಸ್ಯಾಂಡಲ್ವುಡ್ನಲ್ಲಿ ಮಿಂಚಲು ತಯಾರಾಗಿದ್ದಾರೆ.

ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿರುವ ಶಶಿ ಕುಮಾರ್ ರವರಿಗೆ ಇದೀಗ ಪುತ್ರ ಸ್ಯಾಂಡಲ್ವುಡ್ನಲ್ಲಿ ಮಿಂಚಲು ತಯಾರಾಗುತ್ತಿರುವುದು ನಿಜಕ್ಕೂ ಹೆಚ್ಚಿನ ಸಂತಸ ನೀಡಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಸ್ನೇಹಿತರೇ ಇದೀಗ ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಶಶಿಕುಮಾರ್ ಅವರು ಈಗಾಗಲೇ ಸೀತಾಯಣ ಎಂಬ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಲು ಸಿದ್ದರಾಗಿದ್ದಾರೆ. ಆದರೆ ಇನ್ನು ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಅಕ್ಷಿತ್ ಶಶಿಕುಮಾರ್ ರವರಿಗೆ ಹಲವಾರು ಅವಕಾಶಗಳು ಹುಡುಕಿಕೊಂಡು ಬಂದಿದ್ದು ಕನ್ನಡದ ಬಿಗ್ ಬಜೆಟ್ ಸಿನಿಮಾವೊಂದಕ್ಕೆ ಇವರು ಸಹಿ ಮಾಡಿದ್ದಾರೆ ಹಾಗೂ ಫೋಟೋಶೂಟ್ ನಲ್ಲಿ ಕೂಡ ಭಾಗಿಯಾಗಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಚಿತ್ರದ ಹೆಸರು ಓ ಮೈ ಲವ್. ನಟಿಯಾಗಿ ಕೀರ್ತಿ ಕಲಕೇರಿ ರವರು ಶಶಿಕುಮಾರ್ ಅವರ ಜೊತೆ ನಟನೆ ಮಾಡುತ್ತಿದ್ದಾರೆ.

Post Author: Ravi Yadav