ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಗೆ ಖುಲಾಯಿಸಿದ ಮತ್ತೊಂದು ಅದೃಷ್ಟ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಿರುತೆರೆಯಲ್ಲಿ ಹಾಗೂ ಕೆಲವೊಂದು ಸಿನಿಮಾಗಳಲ್ಲಿ ನಟನೆ ಮಾಡಿರುವ ಶೈನ್ ಶೆಟ್ಟಿ ರವರು ಇಂದಿಗೂ ಕೂಡ ಅಭಿಮಾನಿಗಳ ಫೇವರೆಟ್ ಎಂದರೆ ತಪ್ಪಾಗಲಾರದು. ಜೀವನದಲ್ಲಿ ಕಷ್ಟದ ದಿನಗಳು ಹಾಗೂ ಒಳ್ಳೆಯ ದಿನಗಳು ಎರಡನ್ನು ನೋಡಿರುವ ಶೈನ್ ಶೆಟ್ಟಿ ರವರು ಬಿಗ್ ಬಾಸ್ ನಲ್ಲಿ ಕೇವಲ ಸಿಂಪತಿ ಆಧಾರದ ಮೇರೆಗೆ ಗೆಲುವು ಸಾಧಿಸಿರಲಿಲ್ಲ. ಬದಲಾಗಿ ತಾವು ಬಿಗ್ ಬಾಸ್ ಗೆಲ್ಲುವುದಕ್ಕೆ ಅರ್ಹರು ಎಂಬುದನ್ನು ಕೇವಲ ತಮ್ಮ ನಡವಳಿಕೆ ಹಾಗೂ ತಮ್ಮ ಗುಣಗಳಿಂದ ಸಾಬೀತು ಮಾಡಿದ್ದರು. ಸಿಂಪತಿ ಆಧಾರದ ಮೇಲೆ ಗೆಲುವು ಸಾಧಿಸುವುದು ಸುಲಭ ಇರಬಹುದು, ಆದರೆ ಉತ್ತಮ ನಡವಳಿಕೆ ಹಾಗೂ ಗುಣಗಳಿಂದ ಜನರ ಮನ ಗೆದ್ದು ಪ್ರೇಕ್ಷಕರಿಂದ ಸೈ ಎನಿಸಿಕೊಂಡು ಬಿಗ್ ಬಾಸ್ ಸೀಸನ್ ವಿನ್ನರ್ ಆಗಿದ್ದರು.

ಅಸಲಿಗೆ ಬಿಗ್ ಬಾಸ್ ಗೆ ಬರುವ ಮುನ್ನ ಶೈನ್ ಶೆಟ್ಟಿ ರವರು ಒಂದು ಫುಡ್ ಟ್ರಕ್ ನಡೆಸುತ್ತಿದ್ದರು, ಹೀಗೆ ಜೀವನಕ್ಕಾಗಿ ಫುಡ್ ಟ್ರಕ್ ನಡೆಸುವ ಮುನ್ನ ಹಲವಾರು ಧಾರಾವಾಹಿಗಳಲ್ಲಿ ಹಾಗೂ ಕೆಲವೊಂದು ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದ ಶೆಟ್ಟಿ ರವರು ಮೀರಾ ಮಾಧವ ಹಾಗೂ ಲಕ್ಷ್ಮೀ ಬಾರಮ್ಮ ಧಾರವಾಹಿ ಅಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೆ ಮಂಗಳೂರು 2013ರ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಸೈ ಎನಿಸಿಕೊಂಡಿದ್ದರು. ಆದರೆ ಕ್ರಮೇಣ ಇವರಿಗೆ ಅವಕಾಶಗಳು ಕಡಿಮೆಯಾದ ಮೇಲೆ ಇವರು ಫುಡ್ ಟ್ರಕ್ ಆರಂಭ ಮಾಡಿದರು. ತದನಂತರ, ಬಿಗ್ ಬಾಸ್ ತೆರಳಿದ ಬಳಿಕ ಶೈನ್ ಶೆಟ್ಟಿ ರವರ ಅದೃಷ್ಟವೇ ಬದಲಾಗಿಹೋಯಿತು.

ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡು ಅಭಿಮಾನಿಗಳ ಮನಗೆದ್ದಿದ್ದರು. ಇದಾದ ಬಳಿಕ ವಿನ್ನರ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಬಂದ ಶೈನ್ ಶೆಟ್ಟಿ ರವರನ್ನು ಹಲವಾರು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಹಲವಾರು ಚಿತ್ರಗಳಲ್ಲಿಯೂ ಕೂಡ ಶೈನ್ ಶೆಟ್ಟಿ ರವರು ನಟನೆ ಮಾಡುತ್ತಿದ್ದಾರೆ, ಬಹುಶಹ ಕೋರೋನ ಭಾರತದಲ್ಲಿ ಕಾಣಿಸಿಕೊಳ್ಳದೆ ಇದ್ದಿದ್ದರೆ ಇಷ್ಟೊತ್ತಿಗೆ ಕೆಲವೊಂದು ಸಿನಿಮಾಗಳು ಕೂಡ ರಿಲೀಸಾಗುತ್ತಿದ್ದವು. ಇನ್ನು ಇದೆಲ್ಲಾ ಆದ ಬಳಿಕ ಇದೀಗ ಮತ್ತೊಮ್ಮೆ ಮತ್ತೊಂದು ಸಿಹಿ ಸುದ್ದಿ ಶೈನ್ ಶೆಟ್ಟಿರವರಿಗೆ ಸಿಕ್ಕಿದೆ.

ಹೌದು ಸ್ನೇಹಿತರೇ ಇದೀಗ ಬಂದಿರುವ ಲೇಟೆಸ್ಟ್ ಮಾಹಿತಿಯ ಪ್ರಕಾರ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸದೇ ಗ್ರಾಹಕರ ಆರೋಗ್ಯವನ್ನು ಕಾಪಾಡಬಹುದಾದಂತಹ ಮಹತ್ವದ ಆಕಾಂಕ್ಷೆಯೊಂದಿಗೆ ನೈಸರ್ಗಿಕ ಆಹಾರ ಪದಾರ್ಥಗಳು ಹಾಗೂ ಮಸಾಲೆಗಳನ್ನು ಉತ್ಪಾದನೆ ಮಾಡುವ ವನಸ್ಥ ಕಂಪನಿಯ ಉತ್ಪನ್ನಗಳಿಗೆ ರಾಯಬಾರಿ ಆಗುವ ಅವಕಾಶವನ್ನು ಶೈನ್ ಶೆಟ್ಟಿ ರವರು ಪಡೆದುಕೊಂಡಿದ್ದಾರೆ.

ನಿನ್ನೆಯಷ್ಟೇ ನಡೆದ ಬಿಡುಗಡೆ ಸಮಾರಂಭದಲ್ಲಿ ವನಸ್ಥ ಕಂಪನಿಯ ಉತ್ಪನ್ನಗಳನ್ನು ಶೈನ್ ಶೆಟ್ಟಿ ರವರು ಬಿಡುಗಡೆ ಮಾಡಿದ್ದಾರೆ, ಈ ಸಂದರ್ಭದಲ್ಲಿ ಬಿಗ್ ಬಾಸ್ ಹಾಗೂ ಕಿರುತೆರೆಯ ನಟಿಯರಾದ ಭೂಮಿ ಶೆಟ್ಟಿ ಮತ್ತು ಚಂದನ ರವರು ಕೂಡ ಶೈನ್ ಶೆಟ್ಟಿ ರವರೆ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿನಯ್ ಗುರೂಜಿ ರವರು ಕೂಡ ಭಾಗಿಯಾಗಿದ್ದು ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ

Post Author: Ravi Yadav