ಬಾಳ ಸಂಗತಿಯನ್ನು ಆಯ್ಕೆ ಮಾಡುವಾಗ ಇಂತಹ ಮಹಿಳೆ ಸಿಕ್ಕರೆ ಕಣ್ಮುಚ್ಚಿ ಒಪ್ಪಿಕೊಳ್ಳಿ ಎಂದಿದ್ದಾರೆ ಚಾಣಕ್ಯ.

ನಮಸ್ಕಾರ ಸ್ನೇಹಿತರೇ ಜನರು ಹೆಚ್ಚಾಗಿ ತಮ್ಮ ಮದುವೆಯ ಬಗ್ಗೆ ಚಿಂತೆ ಮಾಡುತ್ತಾರೆ. ವಿಶೇಷವಾಗಿ ಪುರುಷರು ತಮ್ಮ ಭಾವಿ ಪತ್ನಿಯ ಬಗ್ಗೆ ಹಲವಾರು ಕನಸುಗಳನ್ನು ಹೊಂದಿರುತ್ತಾರೆ. ಮನೆಯಲ್ಲಿ ನಿರ್ಧಾರ ಮಾಡುವ ವಿವಾಹದ ವಿಷಯಕ್ಕೆ ಬಂದಾಗ, ಅವರು ತಮ್ಮ ಜೀವನ ಸಂಗಾತಿಯಾಗಿ ಯಾರನ್ನು ಆರಿಸಬೇಕೆಂದು ಅವರಿಗೆ ಅರ್ಥವಾಗುವುದಿಲ್ಲ. ಅದೇ ಸಮಯದಲ್ಲಿ, ಕೆಲವು ಪುರುಷರು ಮೊದಲೇ ಪ್ರೀತಿಸುತ್ತಿರುತ್ತಾರೆ, ಆದರೆ ಮದುವೆಯ ವಿಷಯಕ್ಕೆ ಬಂದಾಗ, ಅವರು ತಮ್ಮ ಸಂಗಾತಿಯ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ.

ಅದೇ ಕಾರಣಕ್ಕಾಗಿ ಇರಬೇಕು ಬಹುಶಃ ಜನಪ್ರಿಯ ಶಿಕ್ಷಕ ಮತ್ತು ತತ್ವಜ್ಞಾನಿ ಆಚಾರ್ಯ ಚಾಣಕ್ಯ ಅವರು ತಮ್ಮ ಜೀವನದಿಂದ ಕೆಲವು ಅನುಭವಗಳನ್ನು ‘ಚಾಣಕ್ಯ ನೀತಿ’ ಪುಸ್ತಕದಲ್ಲಿ ನೀಡಿದ್ದಾರೆ. ಆಚಾರ್ಯ ಚಾಣಕ್ಯರ ನೀತಿ ಪುಸ್ತಕದಲ್ಲಿ ಮನುಷ್ಯರಿಗಾಗಿ ಅನೇಕ ನೀತಿಗಳನ್ನು ಉಲ್ಲೇಖಿಸಲಾಗಿದೆ. ಒಬ್ಬ ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಈ ನೀತಿಗಳನ್ನು ಅನುಸರಿಸಿದರೆ, ಅವನ ಜೀವನವು ಸಂತೋಷವಾಗುತ್ತದೆ. ಅದೇ ರೀತಿ ಮದುವೆಯ ಬಗ್ಗೆ ಮಾತನಾಡಿರುವ ಚಾಣಕ್ಯರವರು, ಮದುವೆ ಒಂದು ದೊಡ್ಡ ನಿರ್ಧಾರ, ಆದ್ದರಿಂದ ಅದರಲ್ಲಿ ಸ್ವಲ್ಪ ಗೊಂದಲ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಯ ಬಗ್ಗೆ ನೀವು ಸಹ ಗೊಂದಲಕ್ಕೊಳಗಾಗಿದ್ದರೆ, ಯಾವ ರೀತಿಯ ಮಹಿಳೆ ಅನ್ನು ಮದುವೆಯಾಗಬೇಕು ಎಂದು ವಿವರಿಸಿದ್ದಾರೆ ಕೇಳಿ. ಇಂತಹ ಮಹಿಳೆ ಸಿಕ್ಕರೆ ಕೂಡಲೇ ಮದುವೆಗೆ ಒಪ್ಪಿಕೊಳ್ಳಿ.

ಚಾಣಕ್ಯ ರವರು ಸೌಂದರ್ಯವೇ ಅಂತಿಮ ಎಂದು ಪರಿಗಣಿಸಿಲ್ಲ. ಹೌದು, ಚಾಣಕ್ಯ ರವರು, ಹೆಚ್ಚಿನ ಸೌಂದರ್ಯ ವತಿಯನ್ನು ಮದುವೆಯಾಗಿ ಎಂದು ಹೇಳಿಲ್ಲ. ಬಡ ಮನೆಯಿಂದ ಬಂದ ನಂತರವೂ, ಯಾವುದೇ ದೂರುಗಳಿಲ್ಲದೆ ತನ್ನ ಜೀವನವನ್ನು ಚೆನ್ನಾಗಿ ನಡೆಸುವ ಹುಡುಗಿ ಅತ್ಯುನ್ನತ ಎಂದು ಹೇಳಿದ್ದಾರೆ. ಬಡ ಮನೆಯಿಂದ ಬರುವ ಮಹಿಳೆ ಸದ್ಗುಣಶೀಲ ಮತ್ತು ಮನಸ್ಸು ಸುಂದರವಾಗಿರುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

ಅಷ್ಟೇ ಅಲ್ಲಾ ಒಂದು ವೇಳೆ ನಿಮ್ಮ ಶ’ತ್ರುಗಳ ಮನೆಯಲ್ಲಿ ಉತ್ತಮ ನಡುವಳಿಕೆ ಹೊಂದಿರುವ ಮಹಿಳೆಯನ್ನು ನೀವು ಕಂಡುಕೊಂಡರೆ, ಅವರನ್ನು ಮದುವೆಯಾಗಲು ಯಾವುದೇ ಹಿಂಜರಿಕೆ ಪಡಬಾರದು ಎಂದು ಚಾಣಕ್ಯ ಹೇಳಿದ್ದಾರೆ. ಏಕೆಂದರೆ ಈ ಮಹಿಳೆಯರನ್ನು ಮದುವೆಯಾಗುವುದರಿಂದ ಮನೆಗೆ ಗೌರವ ಸಿಗುವುದು ಮಾತ್ರವಲ್ಲದೆ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಮತ್ತು ಇದು ಕುಟುಂಬದ ಹೆಸರನ್ನು ಸಹ ಬೆಳಗಿಸುತ್ತದೆ. ಅಷ್ಟೇ ಅಲ್ಲದೇ ಹೀಗೆ ಮಾಡುವುದರಿಂದ ಎರಡು ಕುಟುಂಬಗಳ ನಡುವೆ ಶಾಂತಿ ಉಳಿಯುತ್ತದೆ. ನಿಮ್ಮನ್ನು ಸದ್ಗುಣಶೀಲ ವ್ಯಕ್ತಿ ಎಂದು ಕರೆಯಲಾಗುತ್ತದೆ.

Post Author: Ravi Yadav