ಜೊತೆ ಜೊತೆಯಲ್ಲಿ ಧಾರವಾಹಿ ಗೆ ಅತಿದೊಡ್ಡ ಬಿಗ್ ಶಾಕ್ ! ಗಟ್ಟಿಮೇಳ ಧಾರವಾಹಿಗೆ ಕೂಡ ಸೋಲು !

ನಮಸ್ಕಾರ ಸ್ನೇಹಿತರೇ ಕನ್ನಡದಲ್ಲಿ ಇದೀಗ ಧಾರವಾಹಿಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಹಲವಾರು ತಿಂಗಳುಗಳಿಂದ ಬಾರಿ ಪ್ರಭಾವ ಬೀರಿ ಅಭಿಮಾನಿಗಳನ್ನು ತನ್ನತ ಸೆಳೆಯುವುದರಲ್ಲಿ ಯಶಸ್ವಿಯಾಗಿದ್ದ ಟಾಪ್ ಧಾರವಾಹಿಗಳು ಕೂಡ ಇದೀಗ ಹೊಸ ಧಾರಾವಾಹಿಗಳಿಂದ ಪೈಪೋಟಿ ಪಡೆಯುವಂತಾಗಿದೆ. ಹೌದು, ಟಿಆರ್ಪಿ ಯಲ್ಲಿ ಹೊಸ ರೀತಿಯ ದಾಖಲೆಗಳನ್ನು ಸೃಷ್ಟಿಸಿ ಹಲವಾರು ತಿಂಗಳಿಂದ ಮೊದಲನೇ ಅಥವಾ ದ್ವಿತೀಯ ಸ್ಥಾನದಲ್ಲಿ ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಧಾರವಾಹಿಗಳು ಭದ್ರವಾಗಿ ನೆಲೆಯೂರಿದ್ದವು. ಆದರೆ ಎರಡು ಧಾರಾವಾಹಿಗಳಿಗೆ ಒಮ್ಮೆಲೇ ಶಾಕ್ ಎದುರಾಗಿದೆ.

ಕೆಲವೇ ಕೆಲವು ದಿನಗಳ ಹಿಂದೆ ಟಾಪ್ 5 ಧಾರವಾಹಿಗಳ ಲಿಸ್ಟ್ ನೋಡಬೇಕು ಎಂದರೇ ಮೊದಲೆರಡು ಸ್ಥಾನ ಗಟ್ಟಿಮೇಳ ಹಾಗೂ ಜೊತೆ ಜೊತೆಯಲ್ಲಿ ಧಾರವಾಹಿ ಗಳಿಗೆ ಖಚಿತ ಇನ್ನುಳಿದ ಮೂರು ಸ್ಥಾನಗಳಿಗಾಗಿ ಜೀ ಕನ್ನಡ, ಉದಯ ಟಿವಿ, ಕಲರ್ಸ್ ಕನ್ನಡ ಧಾರವಾಹಿಗಳು ಸ್ಥಾನ ಪಡೆಯುವ ಸಾಧ್ಯತೆಗಳು ಇದ್ದವು ಎನ್ನುವಂತಾಗಿತ್ತು. ಮೊದಲ ಎರಡು ಸ್ಥಾನಗಳಿಗೆ ಯಾವುದೇ ಧಾರವಾಹಿಗಳು ತಲುಪಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಮೂಡುತ್ತಿತ್ತು. ಯಾಕೆಂದರೆ ಹಲವಾರು ತಿಂಗಳುಗಳ ಕಾಲ ಈ ಎರಡು ಧಾರವಾಹಿಗಳು ಪಾರುಪತ್ಯ ಮೆರೆದಿದ್ದವು.

ಆದರೆ ಇದೀಗ ಈ ಎರಡು ಧಾರವಾಹಿಗಳಿಗೆ ಹೊಸ ಧಾರವಾಹಿಗಳು ಪೈಪೋಟಿ ನೀಡಲು ಆರಂಭಿಸಿವೆ. ಹೌದು ಸ್ನೇಹಿತರೇ ಗಟ್ಟಿಮೇಳ ಹಾಗೂ ಜೊತೆ ಜೊತೆಯಲಿ ಧಾರವಾಹಿಗಳು ಬಿಡುಗಡೆಯಾಗಿ ಕೆಲವೇ ಕೆಲವು ವಾರಗಳಲ್ಲಿ ಅಗ್ರ ಸ್ಥಾನಕ್ಕೆ ಏರಿದ ಬಳಿಕ ಮೊದಲೆರಡು ಸ್ಥಾನಗಳಲ್ಲಿ ಇದ್ದವು ಕೆಳಗಡೆ ಇಳಿಯಲೇ ಇಲ್ಲ. ಆದರೆ ಇದೀಗ ಹೊಸ ಧಾರವಾಹಿ ಒಂದು ಗಟ್ಟಿಮೇಳ ಹಾಗೂ ಜೊತೆ ಜೊತೆಯಲ್ಲಿ ಧಾರವಾಹಿ ಗಳಿಗಿಂತ ಅತಿ ಹೆಚ್ಚು ಟಿಆರ್ಪಿ ಪಡೆದುಕೊಂಡು ಮೊದಲನೇ ಸ್ಥಾನಕ್ಕೆ ಏರಿದೆ.

ಬಹುಶಹ ಇಷ್ಟೇ ಆಗಿದ್ದರೆ ಅಷ್ಟೇನೂ ಸದ್ದು ಮಾಡುವ ಅಗತ್ಯತೆ ಇರಲಿಲ್ಲ ಆದರೆ ಇದೇ ಮೊಟ್ಟಮೊದಲ ಬಾರಿಗೆ ಜೊತೆ ಜೊತೆಯಲಿ ಧಾರಾವಾಹಿ ಆರಂಭವಾದ ಮೇಲೆ ಧಾರವಾಹಿ ಕಂಡುಕೇಳರಿಯದ ಅಂತೆಯೇ ಟಾಪರ ಧಾರವಾಹಿಗಳ ಸಾಲಿನಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಜೊತೆಯಲ್ಲಿ ಧಾರವಾಹಿ ವಿಫಲವಾಗಿದೆ. ಹೌದು ಸ್ನೇಹಿತರೇ ಇದೀಗ ಟಿಆರ್ಪಿ ಘೋಷಣೆ ಮಾಡುವ ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಆಫ್ ಇಂಡಿಯಾ ಕಳೆದ ವಾರದ ಟಿಆರ್ಪಿ ಲಿಸ್ಟನ್ನು ಬಿಡುಗಡೆ ಮಾಡಿದ್ದು ಇತ್ತೀಚೆಗೆ ಕೆಲವೇ ಕೆಲವು ದಿನಗಳ ಹಿಂದೆ ಆರಂಭಗೊಂಡಿರುವ ಸತ್ಯ ಧಾರವಾಹಿಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ.

ಇಷ್ಟು ದಿವಸ ಅಗ್ರಸ್ಥಾನ ಕಾಯ್ದುಕೊಂಡಿದ್ದ ಗಟ್ಟಿಮೇಳ ಧಾರವಾಹಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನು ಮೂರನೇ ಸ್ಥಾನದಲ್ಲಿ ಮತ್ತೊಂದು ಜೀ ವಾಹಿನಿಯ ಧಾರವಾಹಿ ಯಾದ ಪಾರು ಧಾರವಾಹಿ ಸ್ಥಾನ ಪಡೆದುಕೊಂಡಿದ್ದು, ನಾಲ್ಕನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ಧಾರಾವಾಹಿ ಮಂಗಳ ಗೌರಿ ಮದುವೆ ಧಾರವಾಹಿ ಸ್ಥಾನ ಪಡೆದುಕೊಂಡಿದೆ. ಇನ್ನು 5ನೇ ಸ್ಥಾನದಲ್ಲಿ ಕಾಮಿಡಿ ಕಿಲಾಡಿಗಳು ಚಾಂಪಿಯನ್ಶಿಪ್ ಪ್ರೋಗ್ರಾಮ್ ಸ್ಥಾನ ಪಡೆದು ಕೊಂಡಿದ್ದು ಮೊಟ್ಟಮೊದಲ ಬಾರಿಗೆ ಜೊತೆ ಜೊತೆ ಜೊತೆಯಲ್ಲಿ ಧಾರವಾಹಿ ಟಾಪ್ ಐದರ ಇಂಗ್ಲಿಷ್ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.

ಅಂದಹಾಗೆ ಇದು ಅಚಾನಕ್ಕಾಗಿ ನಡೆದ ಘಟನೆಯಲ್ಲ ಯಾಕೆಂದರೆ ಸತತ ಎರಡನೇ ವಾರವೂ ಕೂಡ ಸತ್ಯ ಧಾರವಾಹಿ ಮೊದಲನೇ ಸ್ಥಾನವನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಆದರೆ ಕಳೆದ ವಾರ ಜೊತೆ ಜೊತೆಯಲಿ ಧಾರವಾಹಿ ಕನಿಷ್ಠ ಪಕ್ಷ ಮೂರನೇ ಸ್ಥಾನವನ್ನಾದರೂ ಪಡೆದುಕೊಂಡಿತ್ತು. ಆದರೆ ಈ ಬಾರಿ ಟಾಪ್ 5 ರ ಲಿಸ್ಟ್ ನಲ್ಲಿಯೇ ಸ್ಥಾನ ಪಡೆಯಲು ವಿಫಲವಾಗಿದೆ. ಇದಕ್ಕೆ ಕಾರಣಗಳಾದರೂ ಏನು ಇರಬಹುದು?? ನಿಮ್ಮ ಅಭಿಪ್ರಾಯ ಗಳನ್ನೂ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Post Author: Ravi Yadav