ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು, ಒಲಿಂಪಿಕ್ಸ್ ಗೆ ಹೋಗುವ ಕನಸು ಹೊತ್ತಿದ್ದ ಖ್ಯಾತ ಸೀರಿಯಲ್ ನಟ !

ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು, ಒಲಿಂಪಿಕ್ಸ್ ಗೆ ಹೋಗುವ ಕನಸು ಹೊತ್ತಿದ್ದ ಖ್ಯಾತ ಸೀರಿಯಲ್ ನಟ !

ನಮಸ್ಕಾರ ಸ್ನೇಹಿತರೇ ಬಹುತೇಕ ಕಲಾವಿದರು ಸಿನಿಮಾ ಅಥವಾ ಧಾರವಾಹಿಗಳಿಗೆ ಬರುವ ಮುನ್ನ ವಿವಿಧ ರೀತಿಯ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುತ್ತಾರೆ. ಯಾರೋ ಹಿರಿಯ ಕಲಾವಿದರ ಮಕ್ಕಳು ಮಾತ್ರ ಚಿಕ್ಕವಯಸ್ಸಿನಿಂದಲೂ ವಿವಿಧ ರೀತಿಯ ಪಾತ್ರಗಳಿಗೆ ಜೀ’ವ ತುಂಬಿ ಕಲಾವಿದನಾಗುವ ಕನಸನ್ನು ಹೊತ್ತು ಕೊಂಡಿರುತ್ತಾರೆ. ಆದರೆ ಬಹುತೇಕ ಜನರು ಸಾಮಾನ್ಯ ಜೀವನವನ್ನು ನಡೆಸುತ್ತಾ ಕಲಾವಿದನಾಗಬೇಕು ಎಂಬ ಮಹದಾಸೆಯಿಂದ ಇತರ ಕ್ಷೇತ್ರಗಳಲ್ಲಿಯೂ ತೊಡಗಿಕೊಂಡಿದ್ದರೂ ಕೂಡ ಕಲಾವಿದನಾಗಲು ಸಾಕಷ್ಟು ಶ್ರಮವಹಿಸಿ ಮೇಲೆ ಬರುತ್ತಾನೆ. ಇನ್ನು ಕೆಲವರು ಅಚಾನಕ್ಕಾಗಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ರಾತ್ರೋರಾತ್ರಿ ಫೇಮಸ್ ಆಗುತ್ತಾರೆ.

ಈ ಮೇಲಿನ ಮೂರು ರೀತಿಯಲ್ಲಿ ಹಲವಾರು ಕಲಾವಿದರು ಪ್ರಸಿದ್ಧಿ ಪಡೆದುಕೊಂಡಿದ್ದಾರೆ, ನಾವು ಇಂದು ರಾಷ್ಟ್ರಮಟ್ಟದಲ್ಲಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಬೇಕು ಎಂಬ ಕನಸು ಕಟ್ಟಿಕೊಂಡಿದ್ದ ಯುವಕ ಇದೀಗ ಕಿರುತೆರೆಯಲ್ಲಿ ಖ್ಯಾತ ನಟನಾಗಿ ಹೊರಹೊಮ್ಮಿರುವುದು ಹೇಗೆ ಹಾಗೂ ಆತನ ಜೀವನದ ಕುರಿತು ಮತ್ತಷ್ಟು ಮಾಹಿತಿಗಳನ್ನು ತಿಳಿಸುತ್ತೇವೆ ಕೇಳಿ.

ಸ್ನೇಹಿತರೇ ನಾವು ಇಂದು ಮಾತನಾಡಲು ಹೊರಟಿರುವುದು ಕಿರುತೆರೆಯಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ಈ ಭಾರೀ ಸದ್ದು ಮಾಡುತ್ತಿರುವ ಮೈಸೂರಿನ ಹುಡುಗ ಅಭಿಷೇಕ್ ದಾಸ್ ರವರ ಬಗ್ಗೆ. ಅಭಿಷೇಕ್ ದಾಸ್ ರವರು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದವರು ಮೊದಲಿನಿಂದಲೂ ಅಭಿಷೇಕ ರವರಿಗೆ ಡ್ಯಾನ್ಸ್ ಮತ್ತು ಮಾಡಲಿಂಗ್ ಅಂದರೆ ಬಹಳ ಇಷ್ಟ. ಎಲ್ಲಿಯಾದರೂ ಆರ್ಕೆಸ್ಟ್ರಾ ನಡೆದರೆ ಅಲ್ಲಿಯೂ ಕೂಡ ಅಭಿಷೇಕ್ ದಾಸ್ ರವರು ಅವರು ತೆರಳಿ ಡ್ಯಾನ್ಸ್ ಮಾಡುತ್ತಿದ್ದರು.

ಅಷ್ಟೇ ಅಲ್ಲಾ ಮೊದಲನೇ ತರಗತಿಯಿಂದಲೇ ಅಭಿಷೇಕ್ ದಾಸ್ ರವರು ಈಜು ತರಬೇತಿಯನ್ನು ಕೂಡ ಪಡೆದುಕೊಂಡಿದ್ದರು, ಬರೋಬ್ಬರಿ ಹನ್ನೆರಡು ವರ್ಷಗಳ ಕಾಲ ಅಂದರೇ ದ್ವಿತೀಯ ಪಿಯುಸಿ ಅವರಿಗೆ ಅಭಿಷೇಕ್ ದಾಸ್ ರವರು ಈಜು ಅಭ್ಯಾಸ ಮಾಡುತ್ತಿದ್ದರು. 2014ರಲ್ಲಿ ರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಕೂಡ ಗೆದ್ದರು. ತದನಂತರ ಒಲಂಪಿಕ್ಸ್ ನಲ್ಲಿ ಭಾರತವನ್ನು ಈಜಿನ ಸ್ಪರ್ಧೆಯಲ್ಲಿ ಪ್ರತಿನಿಧಿಸಬೇಕು ಎಂಬ ಆಸೆ ಇದ್ದರೂ ಕೂಡ ತಮ್ಮ ತಂದೆಯನ್ನು ಕಳೆದುಕೊಂಡ ಬಳಿಕ ಈಜಿನಲ್ಲಿ ಉತ್ಸಾಹವನ್ನು ಕಳೆದುಕೊಂಡರು.

ಆಮೇಲೆ ಕಲಾವಿದನಾಗಬೇಕು ಎಂಬ ಆಸೆಯಿಂದ ಮಾಡಲಿಂಗ್ ಆರಂಭಿಸಿ 32ಕ್ಕೂ ಹೆಚ್ಚು ಆಡಿಶನ್ ಗಳನ್ನು ನೀಡಿದ್ದರು. ಆದರೆ ಎಲ್ಲಿಯೂ ಕೂಡ ಇವರಿಗೆ ಅವಕಾಶ ಸಿಗಲೇ ಇಲ್ಲ. ಅದೃಷ್ಟವೋ ಏನೋ ತಿಳಿದಿಲ್ಲ, ಒಮ್ಮೆಲೇ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಅಭಿಷೇಕ್ ದಾಸ್ ರವರು ಸ್ಪರ್ದಿಸಲು ಅವಕಾಶ ಪಡೆದುಕೊಂಡರು. ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಅಭಿಷೇಕ್ ದಾಸ್ ರವರು ಯಾವುದೇ ಡ್ಯಾನ್ಸ್ ಕ್ಲಾಸ್ ಗೆ ಹೋಗದೆ ಮನೆಯಲ್ಲಿರುವ ಕನ್ನಡಿಯ ಮುಂದೆ ನಿಂತು ಡ್ಯಾನ್ಸ್ ಮಾಡಿ ಕಲಿತ ಡ್ಯಾನ್ಸ್ ನಲ್ಲಿ ಫೈನಲ್ ವರೆಗೆ ತಲುಪುವ ಮೂಲಕ ಕರ್ನಾಟಕದ ಎಲ್ಲೆಡೆ ತಮ್ಮನ್ನು ತಾವು ಪರಿಚಯ ಮಾಡಿಕೊಂಡರು. ಇದಾದ ನಂತರ ಅವರಿಗೆ 20 ವರ್ಷ ಇರುವಾಗಲೇ ಧಾರವಾಹಿಯಲ್ಲಿ ನಾಯಕ ನಟನಾಗಿ ನಟಿಸಲು ಅವಕಾಶ ಪಡೆದುಕೊಂಡ ಅಭಿಷೇಕ್ ದಾಸ್ ರವರು, ಸರಯು ಧಾರಾವಾಹಿಯಲ್ಲಿ ನಟಿಸಲು ಅವಕಾಶ ಪಡೆದುಕೊಂಡರು.

ಇವೆಲ್ಲ ಆದ ನಂತರ ಅಭಿಷೇಕ್ ದಾಸ್ ರವರು ಸಿನಿಮಾಗಳಿಗೆ ಆಡಿಶನ್ ನೀಡಲು ಆರಂಭಿಸಿದರು. ಹಲವಾರು ಆಡಿಷನ್ ಗಳ ನಂತರ ಅಂಬರೀಶ್ ಸರ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡರು. ಇಲ್ಲಿಯವರೆಗೂ ಒಂದು ರೇಂಜಿನಲ್ಲಿ ಹೆಸರು ಮಾಡಿಕೊಂಡಿದ್ದ ಅಭಿಷೇಕ್ ದಾಸ್ ರವರು ಕಳೆದ ಎರಡು ವರ್ಷಗಳ ಹಿಂದೆ ಗಟ್ಟಿಮೇಳ ಧಾರವಾಹಿ ವಿಕ್ರಾಂತ್ ಎಂಬ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಇದಾದ ಬಳಿಕ ಅವರು ಇಡೀ ಕರ್ನಾಟಕದಲ್ಲಿ ಇಂದು ಚಿರಪರಿಚಿತವಾದ ಕಲಾವಿದ ಎಂಬ ಸಾಲಿಗೆ ಸೇರಿಕೊಂಡಿದ್ದಾರೆ.