ಜೊತೆ ಜೊತೆಯಲಿ ಧಾರವಾಹಿಯಲ್ಲಿ ರೋಚಕ ತಿರುವು?? ಅಗ್ನಿಸಾಕ್ಷಿ ವಿಜಯ್ ಅಭಿಮಾನಿಗಳಿಗೊಂದು ಭರ್ಜರಿ ಸಿಹಿಸುದ್ದಿ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳಿಂದ ಕಿರುತೆರೆಗೆ ಇತಿಹಾಸದಲ್ಲಿ ಜೊತೆ ಜೊತೆಯಲಿ ಧಾರವಾಹಿ ಹಲವಾರು ದಾಖಲೆಗಳನ್ನು ಮಾಡಿದೆ. ಅನಿರುದ್ ರವರು ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ನಾಯಕನಾಗಿ ಎಂಟ್ರಿಕೊಟ್ಟ ಈ ಧಾರವಾಹಿ ಕನ್ನಡ ಧಾರಾವಾಹಿಗಳು ಹಿಂದೆಂದೂ ಕಾಣದಂತಹ ಟಿಆರ್ಪಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಲವಾರು ತಿಂಗಳುಗಳಿಂದ ಟಾಪ್ ಮೊದಲನೇ ಸ್ಥಾನ ಅಥವಾ ಎರಡನೇ ಸ್ಥಾನದಲ್ಲಿ ಸ್ಥಾನ ಪಡೆದುಕೊಂಡು ಉತ್ತಮ ರೀತಿಯಲ್ಲಿ ಮುನ್ನುಗ್ಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಯಲ್ಲಿ ಇದೀಗ ಮತ್ತೊಂದು ಮಹತ್ವದ ತಿರುಗು ಸಿಗುವ ಸಾಧ್ಯತೆ ಇದೆ.

ವಿಶೇಷವೆಂದರೆ ಕನ್ನಡದ ಮತ್ತೊಂದು ಖ್ಯಾತ ಧಾರವಾಹಿ ಹಾಗೂ ಹಲವಾರು ವರ್ಷಗಳ ಕಾಲ ಟಾಪ್ ಧಾರವಾಹಿಗಳಲ್ಲಿ ಒಂದಾಗಿ ಮೆರೆದ ಅಗ್ನಿಸಾಕ್ಷಿ ಧಾರವಾಹಿಯ ನಾಯಕನಟ ವಿಜಯ್ ಸೂರ್ಯ ರವರು ಈ ಮಹತ್ವದ ತಿರುವನ್ನು ನೀಡಲಿದ್ದಾರೆ ಎಂಬುದು ನಿಜಕ್ಕೂ ಅಭಿಮಾನಿಗಳನ್ನು ಮತ್ತಷ್ಟು ಕಾತರಕ್ಕೆ ತೆಗೆದುಕೊಂಡು ಹೋಗಿದೆ. ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಅಗ್ನಿಸಾಕ್ಷಿ ಧಾರವಾಹಿ ಮುಗಿದರೂ ಕೂಡ ವಿಜಯಸೂರ್ಯ ರವರು ಇಂದಿಗೂ ಕೂಡ ಅಭಿಮಾನಿಗಳ ನೆಚ್ಚಿನ ನಟನಾಗಿದ್ದಾರೆ.

ಇಂತಹ ನಟ ಇದೀಗ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಮಹತ್ವದ ತಿರುವನ್ನು ನೀಡಲು ಕೆಲವು ದಿನಗಳ ಕಾಲ ಧಾರವಾಹಿಯಲ್ಲಿ ಅತಿಥಿ ಪಾತ್ರವನ್ನು ಮಾಡಲಿದ್ದಾರೆ ಎಂಬ ಮಹತ್ವದ ಮಾಹಿತಿ ಮೂಲಗಳಿಂದ ಕೇಳಿಬಂದಿದೆ. ಜೊತೆ ಜೊತೆಯಲಿ ಧಾರವಾಹಿ ನಾಯಕಿ ಅನುಸಿರಿಮನೆ ರವರನ್ನು ಮದುವೆಯಾಗಲಿರುವ ವರನಾಗಿ ವಿಜಯ್ ಸೂರ್ಯ ರವರು ಕಾಣಿಸಿಕೊಳ್ಳಲಿದ್ದು ಕೆಲವು ಎಪಿಸೋಡುಗಳಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ, ಕೊನೆಯಲ್ಲಿ ಆರ್ಯವರ್ಧನ್ ಹಾಗೂ ಅನುಸಿರಿಮನೆ ರವರ ಮದುವೆಗೆ ಮಹತ್ವದ ತಿರುವು ನೀಡಿ ಅತಿಥಿ ಪಾತ್ರವನ್ನು ಮುಕ್ತಾಯ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಇದರ ಕುರಿತು ಧಾರಾವಾಹಿ ತಂಡವಾಗಲಿ ಅಥವಾ ಜೀ ವಾಹಿನಿಯಾಗಲಿ ಇಂದಿಗೂ ಕೂಡ ಸಸ್ಪೆನ್ಸ್ ಉಳಿಸಿಕೊಂಡಿದೆ. ಒಟ್ಟಿನಲ್ಲಿ ಇದೀಗ ಜೊತೆ ಜೊತೆಯಲಿ ಧಾರವಾಹಿ ಮತ್ತಷ್ಟು ಕುತೂಹಲ ಮೂಡಿಸಿದ್ದು ಮತ್ತಷ್ಟು ಟಿಆರ್ಪಿ ಹೆಚ್ಚಿಸಿಕೊಳ್ಳುವುದು ಖಚಿತ.

Post Author: Ravi Yadav