ಚಳಿಗಾಲದಲ್ಲಿ ಕಾಫೀ, ಸಾಮಾನ್ಯ ಟೀ ಬದಲು ಹೀಗೆ ಮಾಡಿ ಟೀ ಸೇವಿಸಿ ! ಲಾಭ ತಿಳಿದರೇ ಇಂದಿನಿಂದಲೇ ಆರಂಭಿಸುತ್ತೀರಿ.

ಚಳಿಗಾಲದಲ್ಲಿ ಕಾಫೀ, ಸಾಮಾನ್ಯ ಟೀ ಬದಲು ಹೀಗೆ ಮಾಡಿ ಟೀ ಸೇವಿಸಿ ! ಲಾಭ ತಿಳಿದರೇ ಇಂದಿನಿಂದಲೇ ಆರಂಭಿಸುತ್ತೀರಿ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಚಳಿಗಾಲ ಬಂತೆಂದರೆ ಹಲವಾರು ಜನರಲ್ಲಿ ವಿವಿಧ ರೀತಿಯ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ದೇಹ ತಂಪಾಗಿರುವ ಕಾರಣ ಕಿರಿಯರಿಂದ ಹಿಡಿದು ಹಿರಿಯರವರೆಗೂ ವಿವಿಧ ರೀತಿಯ ಸಮಸ್ಯೆಗಳು ಕಾಣಿಸುವುದು ಸರ್ವೇಸಾಮಾನ್ಯವಾಗಿದೆ. ಅದರಲ್ಲಿಯೂ ಇತ್ತೀಚಿನ ಆಧುನಿಕ ಜಗದಲ್ಲಿ ಪೋಷಕಾಂಶಗಳು ಇಲ್ಲದ ಆಹಾರ ಅಭ್ಯಾಸವಾಗಿರುವ ಜನರಲ್ಲಿ ಹೆಚ್ಚಿನ ಸಮಸ್ಯೆಗಳು ಕಾಣಿಸುತ್ತವೆ. ಆದಕಾರಣ ಚಳಿಗಾಲದಲ್ಲಿ ನೀವು ನಿಮ್ಮ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಹಾಗಿದ್ದರೆ ಬನ್ನಿ ಒಂದು ಸುಲಭ ಟೀ ಮೂಲಕ ನೀವು ಹಲವಾರು ಸಮಸ್ಯೆಗಳಿಂದ ಹೇಗೆ ಮುಕ್ತಿ ಹೊಂದಬಹುದು ಹಾಗೂ ಆ ಟೀ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಿ ಕೊಡುತ್ತೇವೆ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮುಂಜಾನೆ ಎದ್ದ ತಕ್ಷಣ ಬಹುತೇಕ ಜನರು ಟೀ ಅಥವಾ ಕಾಫಿ ಸೇವಿಸುತ್ತಾರೆ. ಕಾಫಿ ಅಥವಾ ಟೀ ಕುಡಿದು ತಮ್ಮ ದಿನನಿತ್ಯದ ಜೀವನವನ್ನು ಆರಂಭಿಸುತ್ತಾರೆ, ಇಂತಹ ಸಂದರ್ಭದಲ್ಲಿ ಚಳಿಗಾಲಕ್ಕೆ ಹೇಳಿ ಮಾಡಿಸಿದಂತಹ ಟೀ ಎಂದರೇ ಅದು ಬೆಲ್ಲದ ಟೀ. ಹೌದು ನೀವು ಸರಿಯಾಗಿ ಹೇಳಿದ್ದೀರಾ ಬೆಲ್ಲವನ್ನು ಬಳಸಿಕೊಂಡು ಮಾಡುವುದರಿಂದ ನಿಮಗೆ ಹಲವಾರು ಆರೋಗ್ಯದ ಲಾಭಗಳು ಸಿಗುತ್ತವೆ ಹಾಗೂ ನಿಮ್ಮ ಮಧುಮೇಹ ನಿಯಂತ್ರಣದಲ್ಲಿರುತ್ತದೆ.

ಬೆಲ್ಲದ ಟೀ ಲಾಭಗಳು ಕುರಿತು ಗಮನಹರಿಸುವುದಾದರೆ ಹೀಗೆ ಮೊದಲನೆಯದಾಗಿ ನಿಮ್ಮ ದೇಹದಲ್ಲಿನ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ, ಎದೆಯುರಿ ಕಡಿಮೆಯಾಗುತ್ತದೆ ಅನಿಲದ ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ. ಮೈಗ್ರೇನ್ ಗೆ ಪರಿಹಾರ ಸಿಗುತ್ತದೆ. ಯಾಕೆಂದರೆ ಸಕ್ಕರೆಗೆ ಹೋಲಿಸಿದರೆ ಅನೇಕ ಜೀವಸತ್ವಗಳು ಮತ್ತು ಖನಿಜಾಂಶಗಳು ಬೆಲ್ಲದಲ್ಲಿ ಹೆಚ್ಚಾಗಿರುತ್ತದೆ. ಈ ಲಾಭಗಳನ್ನು ಪಡೆಯಲು ನೀವು ಬೆಲ್ಲದ ಟೀ ಅನ್ನು ಹಸುವಿನ ಹಾಲಿನಲ್ಲಿ ಸೇವಿಸಬೇಕು ಎಂಬುದನ್ನು ಮರೆಯಬೇಡಿ.

ಇನ್ನು ಎರಡನೆಯದಾಗಿ ರ’ಕ್ತಹೀ’ನತೆ ಸಮಸ್ಯೆ ಹೊಂದಿರುವ ಜನರು ಬೆಲ್ಲ ತಿನ್ನುವುದನ್ನು ಆಗಲಿ ಅಥವಾ ಬೆಲ್ಲದ ಟೀ ಕುಡಿಯುವುದನ್ನು ಆಗಲಿ ಮಾಡಿದರೆ ಸಾಕಷ್ಟು ಪರಿಣಾಮಕಾರಿಯಾಗಲಿದೆ ಯಾಕೆಂದರೆ ಸಾಮಾನ್ಯವಾಗಿ ಬೆಲ್ಲದಲ್ಲಿ ಸಾಕಷ್ಟು ಕಬ್ಬಿಣಾಂಶ ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಸರಬರಾಜು ಮಾಡುವ ಕೆಲಸ ಮಾಡುತ್ತದೆ. ಇನ್ನು ಚಳಿಗಾಲದಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ನೀವು ಬೆಲ್ಲದ ಟೀ ಕುಡಿದರೆ ಬಹಳ ಉತ್ತಮ ಎಂದು ವೈದ್ಯಶಾಸ್ತ್ರ ಹೇಳುತ್ತದೆ.

ಇನ್ನು ಬೆಲ್ಲದ ಟೀ ಯನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡುವುದಾದರೆ, ಮೊದಲನೇದಾಗಿ ಒಂದು ಕಪ್ ನೀರನ್ನು ನೀವು ಬಿಸಿ ಮಾಡಬೇಕು ತದನಂತರ ಅದಕ್ಕೆ ಏಲಕ್ಕಿ ಮೆಣಸು ಮತ್ತು ಶುಂಠಿ ವಸ್ತುಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಹೀಗೆ ಚೆನ್ನಾಗಿ ಕುದಿಯುತ್ತಿರುವ ನೀರಿಗೆ ಹಾಲು ಸೇರಿಸಿ ಕೆಲವು ನಿಮಿಷಗಳ ಕಾಲ ಕುದಿಸಿ, ಇದಕ್ಕೆ ಇದೀಗ ಬೆಲ್ಲ ಸೇರಿಸಿ ಚೆನ್ನಾಗಿ ಬೆರೆಸಿ. ಬೆಲ್ಲ ಕರಗಿದ ಕೂಡಲೇ ಚಹಾ ಸಿದ್ಧವಾಗಿರುತ್ತದೆ. ನೆನಪಿನಲ್ಲಿಡಿ ಬೆಲ್ಲ ಕರಗಿದ ತಕ್ಷಣವೇ ಚಹಾ ಕುದಿಸುವುದನ್ನು ನಿಲ್ಲಿಸಿ ಇಲ್ಲವಾದಲ್ಲಿ ಚಹಾ ಹಾ’ಳಾ’ಗಬಹುದು.