ಸಂಗೀತಗಾರನ ಕೋಟಾದಲ್ಲಿ ಬಿಗ್ ಬಾಸ್ ಮನೆಗೆ ತೆರಳುತ್ತಾರಾ ಈ ಸರಿಗಮಪ ಸ್ಪರ್ಧೆ?? ಹೋದರೆ ಗೆಲುವು ಫಿಕ್ಸಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಬಿಗ್ ಬಾಸ್ ಸೀಸನ್ ಎಂಟರ ಲೆಕ್ಕಾಚಾರಗಳು ಆರಂಭವಾಗಿದೆ. ಯಾವ ನಟ-ನಟಿಯರು ಹಾಗೂ ಫೇಮಸ್ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ತೆರಳಬೇಕು ಎಂಬುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಯಾರು ಬಿಗ್ ಬಾಸ್ ಮನೆಗೆ ತೆರಳಿದರೆ ಚೆನ್ನಾಗಿರುತ್ತದೆ, ಯಾರು ತೆರಳಿದರೆ ಚೆನ್ನಾಗಿ ಇರುವುದಿಲ್ಲ ಎಂಬ ಅಭಿಪ್ರಾಯಗಳನ್ನು ಈಗಾಗಲೇ ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕೆಲವರು ಒಂದು ಹೆಜ್ಜೆ ಮುಂದೆಹೋಗಿ ಹಲವಾರು ನಟ ನಟಿಯರ ಹೆಸರುಗಳನ್ನು ತೆಗೆದುಕೊಂಡು ಅವರ ನೈಜ ವ್ಯಕ್ತಿತ್ವವನ್ನು ನಾವು ನೋಡಬೇಕಾಗಿದೆ. ಆದ್ದರಿಂದ ಇವರು ಬಿಗ್ ಬಾಸ್ ಮನೆಗೆ ತೆರಳಲೇ ಬೇಕು ಎಂಬ ಬೇಡಿಕೆ ಕೂಡಾ ಕೇಳಿಬಂದಿದೆ. ಅಷ್ಟರಲ್ಲಾಗಲೇ ಇದೀಗ ಸರಿಗಮಪ ಶೋ ನಲ್ಲಿ ಭಾರಿ ಹವಾ ಸೃಷ್ಟಿಸಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದ ಸ್ಪರ್ಧಿ ಇದೀಗ ಸಂಗೀತಗಾರನಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೇ ಈತ ಕಳೆದ ಬಾರಿಗೆ ಬಿಗ್ ಬಾಸ್ ಮನೆಗೆ ತೆರಳಬೇಕಾಗಿತ್ತು, ಆದರೆ ಖ್ಯಾತ ನಟ ದರ್ಶನ್ ಅವರು ಇವರು ಬಿಗ್ ಬಾಸ್ ಮನೆಗೆ ತೆರಳುತ್ತಾರೆ ಎಂದ ತಕ್ಷಣ ಖ್ಯಾತ ನಟ ದರ್ಶನ್ ರವರು ಹನುಮಂತನ್ನು ಮನೆಗೆ ಕರೆಸಿ, ನೀನು ಹೊರಗಿನ ಪ್ರಪಂಚದಲ್ಲಿ ಕಲಿಯಬೇಕಾದದ್ದು ಬಾರಿ ಇದೆ. ನೀನು ಹಳ್ಳಿಯಿಂದ ಬಂದಿರುವ ಕಾರಣ ಏಕಾ ಏಕಿ ಅಲ್ಲಿ ಅಡ್ಜಸ್ಟ್ ಆಗುವುದು ಕಷ್ಟ. ಅಷ್ಟೇ ಅಲ್ಲದೆ ನಿನಗೆ ಈಗಾಗಲೇ ಹಲವಾರು ಅವಕಾಶಗಳು ಬರುತ್ತಿವೆ, ಅವನೆಲ್ಲ ಸಧುಪಯೋಗ ಪಡೆಸಿಕೊ. ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಬೇಡ, ನಿನಗೆ ಅಷ್ಟು ಆಸೆ ಇದ್ದರೆ ಮುಂದಿನ ಬಾರಿ ಬಿಗ್ ಬಾಸ್ ಮನೆಗೆ ಹೋಗು ಎಂದು ಬುದ್ದಿವಾದ ಹೇಳಿದ್ದಾರೆ, ಅದೇ ಕಾರಣಕ್ಕಾಗಿ ಈತ ಕೂಡ ತೆರಳಿರಲಿಲ್ಲ. ಹೌದು ಆ ಸ್ಪರ್ಧಿ ಮತ್ತ್ಯಾರು ಅಲ್ಲ ಸರಿಗಮಪ ಸ್ಪರ್ಧಿ ಹನುಮಂತ. ಕಳೆದ ಬಾರಿ ಹೋಗಲು ಸಾಧ್ಯವಾಗದ ಕಾರಣ ಹನುಮಂತ ರವರು ಈ ಬಾರಿ ಬಿಗ್ ಬಾಸ್ ಗೆ ಹೋಗುತ್ತಾರೆ ಹಾಗೂ ಬಿಗ್ ಬಾಸ್ ತಂಡ ಕೂಡ ಅವರನ್ನು ಸಂಪರ್ಕಿಸಿದೆ ಎಂಬ ಮಾಹಿತಿ ಕೇಳಿಬಂದಿದೆ. ಈಗಾಗಲೇ ಬಾರಿ ಅಭಿಮಾನಿಗಳನ್ನು ಹೊಂದಿರುವ ಕಾರಣ ಇವರು ತೆರಳಿದರೇ ಗೆಲುವು ಖಚಿತ ಎಂದೇ ಹೇಳಲಾಗುತ್ತಿದೆ.

Post Author: Ravi Yadav