ಟಾಪ್ ಧಾರವಾಹಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿರುವ 2 ಹೊಸ ಧಾರಾವಾಹಿಗಳು ! ಯಾವ್ಯಾವು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ತಿಂಗಳುಗಳಿಂದ TRP ಲೆಕ್ಕಾಚಾರದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರವಾಹಿಗಳದ್ದೇ ಮೇಲುಗೈ. ಅದರಲ್ಲಿಯೂ ಗಟ್ಟಿಮೇಳ, ಜೊತೆ ಜೊತೆಯಲಿ ಹಾಗೂ ಪಾರು ಧಾರವಾಹಿ ಗಳು ಕಳೆದ ಹಲವಾರು ತಿಂಗಳುಗಳಿಂದ ಮೊದಲ ಮೂರು ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಇದೀಗ ಇತ್ತೀಚಿನ ಟಿಆರ್ಪಿಯ ರೇಸ್ ನಲ್ಲಿಯೂ ಕೂಡ ಟಾಪ್ ನಾಲ್ಕನೇ ಸ್ಥಾನದಲ್ಲಿ ಇದ್ದ ಮಂಗಳ ಗೌರಿ ಮದುವೆ ಧಾರಾವಾಹಿ ಕೂಡ ಕೆಳಗೆ ಜಾರಿದ್ದು ನಾಗಿಣಿ 2 ಧಾರಾವಾಹಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಇನ್ನು ಐದನೇ ಸ್ಥಾನದಲ್ಲಿ ಕಮಲಿ ದಾರಾವಾಹಿ ಭದ್ರ ಸ್ಥಾನ ನೆಲೆಯೂರಿದೆ. ಹೀಗೆ ದಿನೇ ದಿನೇ ಜೀ ಕನ್ನಡ ವಾಹಿನಿಯು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಆದರೆ ಇತ್ತೀಚೆಗೆ ಆರಂಭಗೊಂಡಿರುವ 2 ಹೊಸ ಧಾರವಾಹಿಗಳು ದಿನೇದಿನೇ ತಮ್ಮ ಟಿಆರ್ಪಿ ಗಳನ್ನು ಹೆಚ್ಚಿಸಿಕೊಳ್ಳುತ್ತಿವೆ, ಖಂಡಿತ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಟಾಪ್ ಸ್ಥಾನ ಪಡೆದುಕೊಂಡಿರುವ ಧಾರವಾಹಿಗಳಿಗೆ ಪೈಪೋಟಿ ನೀಡುವ ಎಲ್ಲಾ ಸಾಧ್ಯತೆಗಳಿವೆ ಎಂಬುದು ತಿಳಿದುಬರುತ್ತದೆ. ಹೌದು ಸ್ನೇಹಿತರೇ ಇತ್ತೀಚಿಗೆ ಆರಂಭಗೊಂಡಿರುವ ಎರಡು ಧಾರವಾಹಿಗಳು ದಿನೇದಿನೇ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಾ ಟಾಪ್ ಧಾರವಾಹಿಗಳಿಗೆ ಠಕ್ಕರ್ ಕೊಡುವ ಎಲ್ಲಾ ಸೂಚನೆ ನೀಡುತ್ತಿವೆ.

ಈ ಎರಡು ಧಾರವಾಹಿಗಳು ಯಾವುದು ಎಂಬುದನ್ನು ನೋಡುವುದಾದರೇ ಮೊದಲನೆಯದಾಗಿ ರಂಜನಿ ರಾಘವನ್ ಹಾಗೂ ಕಿರಣ್ ರಾಜ್ ಅವರು ನಟಿಸಿರುವ ಕನ್ನಡತಿ ಧಾರಾವಾಹಿ ದಿನೇದಿನೇ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಾ ಮುಂದೆ ಸಾಗುತ್ತಿದೆ. ಭರ್ಜರಿ ವೇಗದಲ್ಲಿ ತನ್ನ ಟಿಆರ್ಪಿ ಹೆಚ್ಚಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿಯು ಕೂಡ ಬಾರಿ ಅಭಿಮಾನಿ ಬಳಗವನ್ನು ಧಾರವಾಹಿ ಹೊಂದಿದೆ. ಇನ್ನು ಎರಡನೆಯದಾಗಿ ಕಲರ್ಸ್ ಕನ್ನಡದ ಮತ್ತೊಂದು ಧಾರವಾಹಿ ಆಗಿರುವ ಗಿಣಿರಾಮ ಧಾರವಾಹಿ ಕೂಡ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ. ಅದರಲ್ಲಿಯೂ ಗಿಣಿರಾಮ ಧಾರವಾಹಿಯಲ್ಲಿ ನಾಯಕಿಯ ಹಾಗೂ ನಾಯಕನ ನಡುವೆ ನಡೆಯುವ ಕೋಳಿ ಜ’ಗಳದಲ್ಲಿ ಇಬ್ಬರು ಮಾತನಾಡುವ ಭಾಷೆ ಹಾಗೂ ನಟನೆ ಮಾಡುವ ರೀತಿ ಅದ್ಭುತವಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಬಹುಶಹ ಇವರಿಬ್ಬರ ಜೋಡಿ ಧಾರವಾಹಿಯಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ, ಈ ಎರಡು ಧಾರವಾಹಿಗಳು ದಿನೇದಿನೇ ಟಿಆರ್ಪಿ ಹೆಚ್ಚಿಸಿಕೊಳ್ಳುತ್ತ ಮುಂದೆ ಸಾಗುತ್ತಿರುವ ಕಾರಣ ಖಂಡಿತ ಟಾಪ್ ಧಾರಾವಾಹಿಗಳನ್ನು ಹಿಂದಿಕ್ಕಿದರು ಅಚ್ಚರಿ ಪಡಬೇಕಾಗಿಲ್ಲ.

Post Author: Ravi Yadav