ರಾತ್ರಿ ಉಳಿದ ಅನ್ನದಿಂದ ಈ ರೀತಿ ವಡೆ ಮಾಡಿ ನೋಡಿ ! ಎಲ್ಲರೂ ಇಷ್ಟ ಪಟ್ಟು ತಿನ್ನುವುದು ಖಚಿತ.

ರಾತ್ರಿ ಉಳಿದ ಅನ್ನದಿಂದ ಈ ರೀತಿ ವಡೆ ಮಾಡಿ ನೋಡಿ ! ಎಲ್ಲರೂ ಇಷ್ಟ ಪಟ್ಟು ತಿನ್ನುವುದು ಖಚಿತ.

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಎಲ್ಲ ಮನೆಗಳಲ್ಲಿಯೂ ರಾತ್ರಿ ಹೊತ್ತು ಅನ್ನಉಳಿಯುತ್ತದೆ. ಕೆಲವರ ಮನೆಗಳಲ್ಲಿ ರಾತ್ರಿ ಉಳಿದ ಅನ್ನವನ್ನು ಬೆಳಗ್ಗೆ ತಿನ್ನಲು ಇಷ್ಟಪಡುವುದಿಲ್ಲ. ಅಷ್ಟೇ ಅಲ್ಲದೆ ಹಲವಾರು ಬಾರಿ ನಾವು ಸಂಜೆಯ ವೇಳೆಯಲ್ಲಿ ಏನು ಮಾಡುವುದು ಎಂಬ ಆಲೋಚನೆಯಲ್ಲಿ ತೊಡಗಿಕೊಳ್ಳುತ್ತದೆ ಈ ಎರಡು ರೀತಿಯ ಸಂದರ್ಭದಲ್ಲಿ ನೀವು ರಾತ್ರಿ ಉಳಿದ ಅನ್ನವನ್ನು ಅಥವಾ ಮುಂಜಾನೆ ಮಾಡಿ ರಾತ್ರಿಯ ವೇಳೆಗೆ ಉಳಿದಿರುವ ಅನ್ನವನ್ನು ಬಳಸಿಕೊಂಡು ಈ ರೀತಿಯ ವಡೆಯನ್ನು ಟ್ರೈ ಮಾಡಿ ನೋಡಿ ನಿಮ್ಮ ಮನೆಯವರೆಲ್ಲರೂ ಇಷ್ಟಪಡುತ್ತಾರೆ.

ಅನ್ನದ ವಡೆ ಮಾಡಲು ಬೇಕಾಗುವ ಸಾಮಗ್ರಿಗಳು: 1 ಬಟ್ಟಲು ಅನ್ನ ,1 ಮಧ್ಯಗಾತ್ರದ ಈರುಳ್ಳಿ, ಅರ್ಧ ಬಟ್ಟಲು ಮೊಸರು, 1 ಬಟ್ಟಲು ಉಪ್ಪಿಟ್ಟು ರವೆ, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಚಮಚ ಜೀರಿಗೆ ,3 – 4 ಹಸಿ ಮೆಣಸಿನಕಾಯಿ (ಕಾರ ಹೆಚ್ಚು ಬೇಕೆಂದರೆ ಹೆಚ್ಚು ಹಾಕಿಕೊಳ್ಳಿ), ಸ್ವಲ್ಪ ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ನೀರು ಮತ್ತು ಕರೆಯಲು ಎಣ್ಣೆ.

ಅನ್ನದ ವಡೆ ಮಾಡುವ ವಿಧಾನ ಹೇಗೆಂದರೇ ನೀವು ಮೊದಲು ಒಂದು ಮಿಕ್ಸಿ ಜಾರಿಗೆ ಹಸಿ ಮೆಣಸಿನಕಾಯಿ ಮತ್ತು ಶುಂಠಿಯನ್ನು ಹಾಕಿಕೊಳ್ಳಿ, ನೀರು ಹಾಕದೆ ರುಬ್ಬಿಕೊಂಡು ಒಂದು ಬಟ್ಟಲಿಗೆ ತೆಗೆದುಕೊಳ್ಳಿ, ಈ ಮಿಶ್ರಣವನ್ನು ಬೇರೆ ಇರಿಸಿ. ನಂತರ ಅದೇ ಮಿಕ್ಸಿ ಜಾರಿಗೆ ತೆಗೆದುಕೊಂಡ ಅನ್ನ ಮತ್ತು ಸ್ವಲ್ಪ ನೀರನ್ನು ಹಾಕಿ ರುಬ್ಬಿಕೊಂಡು ಅದೇ ಮೊದಲು ಮಾಡಿದ ಮಿಶ್ರಣಕ್ಕೆ ಹಾಕಿ.

ನಂತರ ಈ ಮಿಶ್ರಣಕೆ ತೆಗೆದುಕೊಂಡ ರವೆ, ಮೊಸರು, ಸಣ್ಣಗೆ ಹಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ವಡೆ ಹದಕ್ಕೆ ಕಲಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ವಡೆ ಕರಿಯಲು ಬೇಕಾಗುವಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ ಸಣ್ಣ ಸಣ್ಣ ಗಾತ್ರದಲ್ಲಿ ವಡೆ ರೀತಿ ಮಾಡಿಕೊಂಡು, ಎಣ್ಣೆಯಲ್ಲಿ ಕರಿದರೆ ಅನ್ನದ ವಡೆ ಸವಿಯಲು ಸಿದ್ದ. ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋ ನೋಡಿ.