ಬಿಗ್ ಬಾಸ್ ಆರಂಭವಾದಾಗಿಲಿಂದ ಇಲ್ಲಿಯ ವರೆಗಿನ ಟಾಪ್ 10 ಸ್ಪರ್ಧಿಗಳು ಯಾರು ಗೊತ್ತಾ??

ಬಿಗ್ ಬಾಸ್ ಆರಂಭವಾದಾಗಿಲಿಂದ ಇಲ್ಲಿಯ ವರೆಗಿನ ಟಾಪ್ 10 ಸ್ಪರ್ಧಿಗಳು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಪ್ರತಿಬಾರಿಯ ಬಿಗ್ ಬಾಸ್ ಶೋನಲ್ಲಿ ಸಾಕಷ್ಟು ಮನರಂಜನೆ ಸಿಗುತ್ತದೆ. ಹಲವಾರು ವಾದ-ವಿವಾದಗಳು ಕೇಳಿಬಂದರೂ ಕೂಡ ಪ್ರತಿಬಾರಿಯೂ ಬಿಗ್ ಬಾಸ್ ಉತ್ತಮ ಟಿಆರ್ಪಿ ಪಡೆದುಕೊಂಡು ಕನ್ನಡದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಪ್ರತಿಬಾರಿಯ ಸೀಸನ್ನಲ್ಲಿ ಕೆಲವು ಸ್ಪರ್ಧಿಗಳು ವಿಶೇಷ ರೀತಿಯಲ್ಲಿ ಜನರಿಗೆ ಮನರಂಜನೆ ನೀಡುವ ಕೆಲಸ ಮಾಡುತ್ತಾರೆ, ಕೆಲವರಂತೂ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದುಕೊಂಡು ವಿಜೇತರಾಗುತ್ತಿದ್ದಾರೆ. ಇನ್ನು ಕೆಲವರು ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದುಕೊಂಡರೂ ಕೂಡ ಅವುಗಳನ್ನು ಮ’ತಗಳನ್ನಾಗಿ ಪರಿವರ್ತಿಸಲು ಅಥವಾ ಇತರ ಸ್ಪರ್ಧಿಗಳ ಆಟದ ಮುಂದೆ ಸೋಲುವ ಮೂಲಕ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಾರೆ. ಆದರೂ ಕೂಡ ಜನರ ಮನದಲ್ಲಿ ಅವರು ಅಚ್ಚಳಿಯದೆ ಉಳಿಯುತ್ತಾರೆ. ಅದೇ ಕಾರಣಕ್ಕಾಗಿ ಇಂದು ನಾವು ಎಲ್ಲಾ ಬಿಗ್ ಬಾಸ್ ಸೀಸನ್ ಗಳಲ್ಲಿ ಜನರ ಮನಗೆದ್ದಿದ್ದ ಟಾಪ್ ಟೆನ್ ಅಭ್ಯರ್ಥಿಗಳ ಕುರಿತು ಮಾತನಾಡಲಿದ್ದೇವೆ. ಇವರಲ್ಲಿ ಕೆಲವರು ವಿಜೇತರಾಗಿ ಇರಬಹುದು ಹಾಗೂ ಇನ್ನು ಕೆಲವರು ಸ್ಪರ್ಧೆಯಿಂದ ಅರ್ಧಕ್ಕೆ ಹೊರಬಂದಿರಬಹುದು. ಆದರೆ ಜನರಿಗೆ ಇವರು ಸಂಪೂರ್ಣ ಮನರಂಜನೆ ನೀಡಿ ಇದ್ದಷ್ಟು ದಿನ ಜನಬೆಂಬಲವನ್ನು ಪಡೆದುಕೊಂಡದ್ದು ಸತ್ಯ.

ಟಾಪ್ 10: ಸೃಜನ್ ಲೋಕೇಶ್: ಸ್ನೇಹಿತರೇ ಸೃಜನ್ ರವರ ಡೈಲಾಗ್ ಟೈಮಿಂಗ್ ಮ್ಯಾಚ್ ಮಾಡುವುದು ಸುಲಭದ ಕೆಲಸವಲ್ಲ. ಇವರು ಸಾಮಾನ್ಯವಾಗಿ ಮಾತುಗಳನ್ನಾಡುವಾಗಲೇ ನಿಂತಲ್ಲೇ ಇನ್ನೊಬ್ಬರ ಕಾಲೆಳೆಯುವುದು ರಲ್ಲಿ ಪ್ರಸಿದ್ಧಿ. ಇನ್ನು ಇವರು ಬಿಗ್ ಬಾಸ್ ಗೆ ಹೋದಾಗಲಂತೂ ಎಲ್ಲರಿಗೂ ಬರ ಪೂರಿತ ಮನರಂಜನೆ ನೀಡಿದ್ದು ಸುಳ್ಳಲ್ಲ, ದುರದೃಷ್ಟವಶಾತ್ ಇವರು ಬಿಗ್ ಬಾಸ್ ಸೀಸನ್ ಗೆಲ್ಲುವುದರಲ್ಲಿ ಯಶಸ್ವಿಯಾಗಲಿಲ್ಲ.

ಟಾಪ್ 9: ಕಿರಿಕ್ ಕೀರ್ತಿ: ಕಿರಿಕ್ ಕೀರ್ತಿ ರವರು ಭಾಗವಹಿಸಿದ್ದ ಸೀಸನ್ ಅತ್ಯುತ್ತಮ ಬಿಗ್ ಬಾಸ್ ಸೀಸನ್ ಗಳಲ್ಲಿ ಒಂದು. ಈ ಸೀಸನ್ ನಲ್ಲಿ ಒಬ್ಬೊಬ್ಬರದ್ದು ಒಂದೊಂದು ವ್ಯಕ್ತಿತ್ವವಾದ ಕಾರಣ ಭರಪೂರ ಮನರಂಜನೆ ಪ್ರೇಕ್ಷಕರಿಗೆ ದೊರಕಿತು. ಕಿರಿಕ್ ಕೀರ್ತಿ ರವರು ಈ ಸೀಸನ್ ನಲ್ಲಿ ಸಾಕಷ್ಟು ಕಿರಿಕ್ ಮಾಡುವ ಮೂಲಕ ಹಾಗೂ ಕೆಲವೊಂದು ವಿಶೇಷ ಪಾತ್ರಗಳಿಗೆ ಜೀವತುಂಬಿ ವಿಶೇಷ ರೀತಿಯಲ್ಲಿ ನಟಿಸಿ ಉತ್ತಮ ಮನರಂಜನೆಯನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದರು.

ಟಾಪ್ 8: ಚಂದನ್ ಶೆಟ್ಟಿ: ಚಂದನ್ ರವರು ಬಿಗ್ ಬಾಸ್ ಮನೆಯಲ್ಲಿ ಅಕ್ಷರಸಹ ಎಲ್ಲರ ಮನಗೆದ್ದಿದ್ದರು, ಕೆಲವೊಮ್ಮೆ ಎಲ್ಲರನ್ನು ನಗಿಸುತ್ತಾ ಹಲವಾರು ಬಾರಿ ಎಲ್ಲರನ್ನು ಕುಣಿಸುತ್ತಾ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದರು. ಅಂದರೆ ತಮ್ಮ ಹಾಡುಗಳ ಮೂಲಕ ಅಕ್ಷರಸಹ ಬಿಗ್ಬಾಸ್ ಮನೆಯನ್ನು ಒಂದು ಡ್ಯಾನ್ಸ್ ಕ್ಲಬ್ ನಂತೆ ಮಾಡಿ, ಇದ್ದ ಜಾಗದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಪರಿಸ್ಥಿತಿಗೆ ಅನುಗುಣವಾಗಿ ಹೊಸ ರೀತಿಯಲ್ಲಿ ಹಾಡು ಬರೆಯುತ್ತಾ ಪ್ರೇಕ್ಷಕರಿಗೆ ಭರಪೂರ ಮನರಂಜನೆಯನ್ನು ನೀಡುವುದರಲ್ಲಿ ಯಶಸ್ವಿಯಾಗಿದ್ದರು. ಅದೇ ಕಾರಣಕ್ಕೆ ಪ್ರೇಕ್ಷಕರು ಕೂಡ ಇವರನ್ನು ‌ಬಿಗ್ ಬಾಸ್ ವಿಜೇತರನ್ನಾಗಿ ಮಾಡಿದ್ದರು.

ಟಾಪ್ 7: ಅರುಣ್ ಸಾಗರ್: ಇವರು ಬಿಗ್ ಬಾಸ್ ಫೈನಲ್ನಲ್ಲಿ ಸೋತಿರಬಹುದು, ಆದರೆ ತಾವು ಬಿಗ್ಬಾಸ್ ಮನೆಯಲ್ಲಿ ಕಳೆದ ಪ್ರತಿಯೊಂದು ಕ್ಷಣವು ಕೂಡ ಪ್ರೇಕ್ಷಕರಿಗೆ ಯಾವ ರೀತಿ ಮನರಂಜನೆ ನೀಡಬಹುದು ಎಂಬುದನ್ನು ಆಲೋಚನೆ ಮಾಡಿ ಪ್ರತಿಕ್ಷಣವನ್ನು ಒಂದು ವಿಶೇಷ ಕ್ಷಣ ವನ್ನಾಗಿ ಪರಿವರ್ತಿಸಿ ಎಲ್ಲರ ಮನಗೆದ್ದಿದ್ದರು.

ಟಾಪ್ 6: ಹುಚ್ಚ ವೆಂಕಟ್: ಬಿಗ್ ಬಾಸ್ ಮನೆಯಲ್ಲಿ ಸದಾ ಕಿರಿಕ್ ಮಾಡಿಕೊಂಡು, ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡು, ಎಲ್ಲರಿಗೂ ತಮ್ಮದೇ ಆದ ರೀತಿಯಲ್ಲಿ ಉತ್ತರಗಳನ್ನು ನೀಡುತ್ತಾ, ಒಬ್ಬರೇ ರಾಜಾರೋಷವಾಗಿ ‌ಬಿಗ್ ಬಾಸ್ ಮನೆಯಲ್ಲಿ ಕ್ಷಣಗಳನ್ನು ಕಳೆದಿದ್ದರು. ಪ್ರತಿ ಬಾರಿ ನಾಮಿನೇಟ್ ಆದರೂ ಕೂಡ ಜನರು ಇವರನ್ನು ಮನೆಯಲ್ಲೇ ಉಳಿಸಿದ್ದರು, ಆದರೆ ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕಾಗಿ ಇವರನ್ನು ಮನೆಯಿಂದ ಹೊರಗಡೆ ಕಳಿಸಲಾಯಿತು.

ಟಾಪ್ 5: ಕುರಿ ಪ್ರತಾಪ್: ಇವರ ಬಗ್ಗೆ ಹೇಳಬೇಕು ಎಂದರೇ ಸಾಕು ನಮಗೆ ನಗು ಬರುತ್ತದೆ, ಅಷ್ಟರಮಟ್ಟಿಗೆ ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ನಗಿಸುವುದರಲ್ಲಿ ಯಶಸ್ವಿಯಾಗಿದ್ದರು. ತಮ್ಮ ಇಂಗ್ಲಿಷ್ ಪಾಂಡಿತ್ಯದ ಮೂಲಕ ಹಾಗೂ ಮುಗ್ದತನದ ಮೂಲಕ ಜನರ ಮನಗೆದ್ದಿದ್ದ ಕುರಿಪ್ರತಾಪ್ ಬಿಗ್ ಬಾಸ್ ವಿಜೇತರಾಗಿ ಮನೆಯಿಂದ ಹೊರಬಂದರು.

ಟಾಪ್ 4 : ಶೈನ್ ಶೆಟ್ಟಿ- ನಗು, ಉತ್ಸಾಹ, ಉಮ್ಮಸು, ತಾಳ್ಮೆ ಎಲ್ಲದಕ್ಕೂ ಶೈನ್ ಶೆಟ್ಟಿ ಒಂದು ಸ್ಪಷ್ಟ ಉದಾಹರಣೆಯಾಗಿ ಬಿಗ್ ಬಾಸ್ ಮನೆಯಲ್ಲಿ ಕಾಲ ಕಳೆದಿದ್ದರು. ಸದಾ ಇತರರೊಂದಿಗೆ ಬೆರೆತುಕೊಂಡು ಎಲ್ಲರನ್ನೂ ಕಿಚಾಯಿಸಿ, ಪ್ರೇಕ್ಷಕರಿಗೆ ಮನರಂಜನೆ ನೀಡಿ ಪರಿಸ್ಥಿತಿಗನುಗುಣವಾಗಿ ತಾಳ್ಮೆ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದ ಶೈನ್ ಶೆಟ್ಟಿ ರವರು ಮನರಂಜನೆ ನೀಡುವ ಟಾಪ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ, ಅದೇ ಕಾರಣಕ್ಕಾಗಿ ಜನರು ಇವರನ್ನು ವಿಜೇತರನ್ನಾಗಿ ಆಯ್ಕೆ ಮಾಡಿದ್ದರು.

ಟಾಪ್ 2 : ಇನ್ನು ಎರಡನೇ ಸ್ಥಾನದಲ್ಲಿ ಚಂದನ್ ಆಚಾರ್ ಸ್ಥಾನ ಪಡೆದುಕೊಂಡಿದ್ದು, ಮೊದಮೊದಲಿಗೆ ಒಂದೆರಡು ಬಾರಿ ನಾಮಿನೇಟ್ ಆಗುವವರೆಗೂ ಯಾರಿಗೂ ಇಷ್ಟವಾಗದ ಚಂದನ್ ಆಚಾರ್ ಕ್ರಮೇಣ ತಮ್ಮ ನಡವಳಿಕೆಯ ಮೂಲಕ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಕಿರಿಕ್ ಮಾಡಿಕೊಂಡರು ಕೂಡ ತಮ್ಮ ನೇರ ಮಾತುಗಳ ಮೂಲಕ ಭಾರೀ ಜನಪ್ರಿಯತೆಯನ್ನು ಗಳಿಸುವುದರಲ್ಲಿ ಹಾಗೂ ಜನರಿಗೆ ಮನರಂಜನೆ ನೀಡುವುದರಲ್ಲಿ ಚಂದನ್ ಆಚಾರ್ ಯಶಸ್ವಿಯಾಗಿದ್ದರು.

ಇನ್ನು ಮೊದಲನೇ ಸ್ಥಾನದಲ್ಲಿ ಇಂದಿಗೂ ಹಾಗೂ ಎಂದೆಂದಿಗೂ ಸರ್ವಾಧಿಕಾರಿ ಎಪಿಸೋಡ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಇಡೀ ಕರ್ನಾಟಕದ ಮನೆಮಾತಾಗಿದ್ದ ಒಳ್ಳೆ ಹುಡುಗ ಪ್ರಥಮ್ ರವರು ಸ್ಥಾನ ಪಡೆದುಕೊಂಡಿದ್ದಾರೆ. ಬಿಗ್ ಬಾಸ್ ಸೀಸನ್ ವಿನ್ನರ್ ಆಗಿರುವ ಪ್ರಥಮ ರವರು ತಮ್ಮ ಕಿರಿಕ್ ಮನೋಭಾವ, ನೇರ ನುಡಿಗಳು ವಾದ-ವಿವಾದಗಳು ಸೇರಿದಂತೆ ಸರ್ವಾಧಿಕಾರಿ ಎಪಿಸೋಡ್ ನಲ್ಲಿ ನೀಡಿದ ಪ್ರದರ್ಶನ ಇಂದಿಗೂ ಕೂಡ ಜನರ ಅಚ್ಚುಮೆಚ್ಚಿನ ಎಪಿಸೋಡ್ ಆಗಿದೆ. ಇವರು ಬಿಗ್ ಬಾಸ್ ನಲ್ಲಿ ಕಳೆಯುತ್ತಿದ್ದ ಪ್ರತಿಯೊಂದು ಕ್ಷಣಗಳು ಜನರಿಗೆ ಮನರಂಜನೆ ಇಡುವುದರಲ್ಲಿ ಯಶಸ್ವಿಯಾಗಿದ್ದವು. ಅದೇ ಕಾರಣಕ್ಕೆ ಅವರನ್ನು ಜನರು ಗೆಲ್ಲಿಸಿದ್ದರು.