ಅರ್ಜುನನು ಕೂಡ ಸೋಲಿಸಲಾಗದ ವಿಧುರ ಯಾರೆಂದು ನಿಮಗೆ ಗೊತ್ತೇ?? ಈತನ ಶಕ್ತಿ ಕಂಡು ಕೃಷ್ಣನೇ ಉಪಾಯ ಮಾಡಿ ತಡೆದಿದ್ದು ಯಾಕೆ ಗೊತ್ತಾ??

ಅರ್ಜುನನು ಕೂಡ ಸೋಲಿಸಲಾಗದ ವಿಧುರ ಯಾರೆಂದು ನಿಮಗೆ ಗೊತ್ತೇ?? ಈತನ ಶಕ್ತಿ ಕಂಡು ಕೃಷ್ಣನೇ ಉಪಾಯ ಮಾಡಿ ತಡೆದಿದ್ದು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನೀವು ಮಹಾಮೇಧಾವಿ ಎನಿಸಿಕೊಂಡಿದ್ದ ವಿಧುರ ರವರ ಬಗ್ಗೆ ಮಹಾಭಾರತದಲ್ಲಿ ಹಲವಾರು ಕಥೆಗಳನ್ನು ಕೇಳಿರುತ್ತೀರಿ. ಹಿಂದಿನ ಕಾಲದಿಂದಲೂ ಆಧುನಿಕ ಯುಗದ ವರೆಗೂ ಸರಿಹೊಂದುವಂತಹ ಹಲವಾರು ನೀತಿಗಳನ್ನು ತಿಳಿಸಲು ಬರೆದಿರುವ ವಿಧುರ ನೀತಿ ಇಂದಿಗೂ ಕೂಡ ಬಹಳ ಪ್ರಸಿದ್ಧಿ ಪಡೆದುಕೊಂಡಿದೆ. ಆಧುನಿಕ ಜೀವನದಲ್ಲಿಯೂ ಸರಿಹೊಂದುವಂತಹ ನೀತಿಗಳನ್ನು ಬರೆಯುವಂತಹ ಮಹಾ ಬುದ್ದಿವಂತ ಪ್ರವೀಣ ವಿಧುರ ರವರು ಕೇವಲ ಮಹಾಜ್ಞಾನಿ ಅಷ್ಟೇ ಆಗಿರಲಿಲ್ಲ ಬದಲಾಗಿ ಆತ ಒಬ್ಬ ಮಹಾನ್ ಯೋಧ ಕೂಡ ಆಗಿದ್ದರು ಎಂದರೆ ನೀವು ನಂಬಲೇಬೇಕು. ಈತನ ಶಕ್ತಿ ಕಂಡು ಸಾಕ್ಷಾತ್ ಕೃಷ್ಣನೇ ಒಂದು ಉಪಾಯವನ್ನು ಹೂಡಿ, ಕಾರ್ಯತಂತ್ರ ಬಳಸಿಕೊಂಡು ವಿಧುರನು ಕೌರವರ ಪರ ಯುದ್ಧದಲ್ಲಿ ಪಾಲ್ಗೊಳ್ಳುdante ತಡೆಯುತ್ತಾನೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ ಎಷ್ಟು ಪ್ರವೀಣ ಎಂದು. ಅಂದಹಾಗೆ ಶ್ರೀಕೃಷ್ಣನು ಮಹಾನ್ ಬಲಶಾಲಿಯಾದ ಭೀಷ್ಮ ಪಿತಾಮಹರು, ದ್ರೋಣಾಚಾರ್ಯರನ್ನು ಕೂಡ ತಡೆಯದೇ ವಿಧುರ ರವರನ್ನು ತಡೆಯಲು ಕಾರಣವಾದರೂ ಏನು? ಯಾವ ರೀತಿ ಯುದ್ಧದಲ್ಲಿ ಪಾಲ್ಗೊಳ್ಳದಂತೆ ತಡೆಯಲಾಯಿತು ಎಂಬುದರ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.

ಸ್ನೇಹಿತರೇ ವಿಧುರ ಎಂದರೇ ಮತ್ಯಾರು ಅಲ್ಲ ಹಸ್ತಿನಾಪುರ ರಾಜ್ಯದ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಾಮೇಧಾವಿ. ಸಾಕ್ಷಾತ್ ಶ್ರೀ ವಿಷ್ಣುವಿನ ಪರಮಭಕ್ತ. ವಿಧುರನು ಪಾಂಡವರು ಹಾಗೂ ಕೌರವರ ಚಿಕ್ಕಪ್ಪ ಆದರೆ ದಾಸಿಯ ಮಗ, ಅದೇ ಕಾರಣಕ್ಕಾಗಿ ರಾಜನಾಗುವ ಎಲ್ಲಾ ಅರ್ಹತೆ ಪಡೆದುಕೊಂಡಿದ್ದರೂ ಕೂಡ ವಿಧುರನು ಎಂದು ಹಸ್ತಿನಪುರದ ರಾಜನಾಗಲಿಲ್ಲ. ಆದರೂ ಕೂಡ ವಿಧುರ ಎಲ್ಲ ಯುದ್ದಕಲೆಗಳನ್ನು ಕರಗತ ಮಾಡಿಕೊಂಡಿದ್ದರು. ಸಾಕ್ಷಾತ್ ಶ್ರೀ ವಿಷ್ಣುವಿನಿಂದ ಗೋವರ್ಧನ ಧನಸ್ಸನ್ನು ಉಡುಗೊರೆಯನ್ನಾಗಿ ಪಡೆದಿದ್ದ ವಿಧುರನು, ಒಮ್ಮೆ ಯುದ್ಧ ಮಾಡಲು ನಿಂತರೇ ಇನ್ಯಾವುದೇ ಧನಸ್ಸು ಕೂಡ ಪ್ರಯೋಜನಕ್ಕೆ ಬರುತ್ತಿರಲಿಲ್ಲ. ಮಹಾನ್ ಬಲಶಾಲಿ ಅರ್ಜುನನ ಗಾಂಡಿವ ದಿಂದಲೂ ಕೂಡ ವಿಧುರನನ್ನು ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ. ಇಷ್ಟೆಲ್ಲ ಶಕ್ತಿಶಾಲಿಯಾಗಿದ್ದ್ದ ವಿಧುರನು ಪಾಂಡವರ ಪರವವಾಗಿ ಹಲವಾರು ಧ್ವನಿ ಎತ್ತಿ ಸಹಾಯ ಮಾಡಿದ್ದನು.

ಆದರೆ ಒಂದು ವೇಳೆ ಕೌರವರು ಹಾಗೂ ಪಾಂಡವರ ನಡುವೆ ಯುದ್ಧದಲ್ಲಿ ಪಾಲ್ಗೊಳ್ಳಬೇಕಾದ ಸಂದರ್ಭ ಬಂದರೇ ಬೇರೆ ವಿಧಿ ಇಲ್ಲದೆ ತಾನು ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೌರವರ ಪರ ಪಾಲ್ಗೊಳ್ಳಬೇಕಾಗಿತ್ತು. ಹೀಗೆ ಅರ್ಜುನನ ಕೈಯಲ್ಲೂ ಕೂಡ ಸೋಲಿಸಲು ಸಾಧ್ಯವಾಗದ ವಿಧುರನು ಕೌರವರ ಪರ ಯುದ್ಧದಲ್ಲಿ ಪಾಲ್ಗೊಂಡರೇ ಮುಂದೇನಾಗಬಹುದು ಎಂಬುದು ಕೃಷ್ಣನಿಗೆ ಚೆನ್ನಾಗಿ ಅರಿವಿತ್ತು. ತನ್ನ ಮಾಯೆಗಳಿಂದ ವಿಧುರನನ್ನು ಸೋಲಿಸ ಬಹುದಾಗಿತ್ತು ಆದರೆ ವಿಧುರನಂತಹ ಮಹಾನ್ ಬಲಶಾಲಿಗೆ ಅರ್ಜುನನ ಮುಂದೆ ಸೋಲು ಧರ್ಮವಲ್ಲ ಎಂಬುದು ಕೃಷ್ಣನಿಗೆ ಚೆನ್ನಾಗಿ ತಿಳಿದಿತ್ತು. ಅದೇ ಕಾರಣಕ್ಕಾಗಿ ತನ್ನದೇ ಆದ ಕಾರ್ಯತಂತ್ರದ ಮೂಲಕ ವಿಧುರನನ್ನು ಯುದ್ಧದಲ್ಲಿ ಪಾಲ್ಗೊಳ್ಳದಂತೆ ಕೃಷ್ಣನು ತಡೆದನು.

ಒಮ್ಮೆ ಶ್ರೀಕೃಷ್ಣನು ಕೌರವರು ಹಾಗೂ ಪಾಂಡವರ ಪರ ಶಾಂತಿ ಸಮಾಲೋಚನೆಯ ಸಮಯದಲ್ಲಿ ದುರ್ಯೋಧನನನ್ನು ಭೇಟಿ ಮಾಡಲು ಕೌರವರ ಆಸ್ಥಾನಕ್ಕೆ ತೆರಳಿದ ಸಂದರ್ಭದಲ್ಲಿ ದುರ್ಯೋಧನನ ಆಥಿತ್ಯ ಸ್ವೀಕರಿಸಲು ಶ್ರೀಕೃಷ್ಣನು ನಿರಾಕರಿಸುತ್ತಾನೆ, ಕೌರವರ ಆಸ್ಥಾನದಲ್ಲಿ ಸದಾ ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದ ವಿಧುರನ ಮನೆಯಲ್ಲಿ ಕೃಷ್ಣನು ಉಳಿದುಕೊಳ್ಳಲು ನಿರ್ಧಾರ ಮಾಡಿ ನಾವು ನಿಮ್ಮ ಮನೆಯಲ್ಲಿ ಆಥಿತ್ಯ ಸ್ವೀಕರಿಸುತ್ತೇವೆ ಎಂದು ಹೇಳಿ ಉಳಿದುಕೊಂಡು ಬಿಡುತ್ತಾನೆ. ಆದರೆ ಕೃಷ್ಣನಿಗೆ ಅದ್ವಿತೀಯ ಆತಿಥ್ಯ ನೀಡುವ ಮೂಲಕ ಕೌರವ ಆಸ್ಥಾನದ ತನ್ನ ಆಸ್ಥಾನದ ಪ್ರತಿಷ್ಠೆಯನ್ನು ಕೃಷ್ಣನಿಗೆ ತೋರಿಸಬೇಕು ಎಂದು ದುರ್ಯೋಧನ ಆಲೋಚನೆ ಮಾಡಿರುತ್ತಾನೆ.

ಆದರೆ ದುರ್ಯೋಧನನ ಆಥಿತ್ಯ ಸ್ವೀಕರಿಸದೇ ಶ್ರೀಕೃಷ್ಣನು ವಿಧುರನ ಮನೆಯಲ್ಲಿ ಉಳಿದುಕೊಳ್ಳಲು ನಿರ್ಧಾರ ಮಾಡಿದಾಗ ವಿಧುರನು ಬಹಳ ಸಂತೋಷದಿಂದ ಶ್ರೀಕೃಷ್ಣನಿಗೆ ತನ್ನ ಸ್ಥಳದಲ್ಲಿ ಉಳಿದುಕೊಳ್ಳಲು ಅವಕಾಶ ನೀಡುತ್ತಾನೆ. ಇದನ್ನು ಕಂಡ ದುರ್ಯೋಧನನ್ನು ಯಾವುದೇ ಕಾರಣಕ್ಕೂ ಪಾಂಡವರ ಪರ ಯುದ್ಧದಲ್ಲಿ ಪಾಲ್ಗೊಳ್ಳುತ್ತಿರುವ ಶ್ರೀಕೃಷ್ಣನಿಗೆ ನಿನ್ನ ಮನೆಯಲ್ಲಿ ವಿಧುರ ನೀಡಬಾರದು ಎಂದು ಹೇಳಿ ಮನಬಂದಂತೆ ನಿಂದಿಸಲು ಆರಂಭಿಸುತ್ತಾನೆ.

ವಿಧುರ ತನಗಿಂತ ಹಿರಿಯ ಹಾಗೂ ತನ್ನ ಸಂಬಂಧಿ ಎಂದು ಮರೆತಿದ್ದ ದುರ್ಯೋಧನನು ನೀನು ಯಾರ ಆಶ್ರಯದಲ್ಲಿ ಇದ್ದೀಯ ಎಂಬುದನ್ನು ಮರೆತು ಬಿಟ್ಟಿದ್ದೀಯ ನೀನು ಕೃತಜ್ಞತೆ ಇಲ್ಲದ ವ್ಯಕ್ತಿ ಎಂದು ಹೇಳುತ್ತಾರೆ. ಇದನ್ನು ಕಂಡ ದೃತರಾಷ್ಟ್ರ, ಭೀಷ್ಮ ಪಿತಾಮಹರು ಸೇರಿದಂತೆ ಇನ್ನೂ ಹಲವಾರು ಹಿರಿಯರು ಒಂದು ಕ್ಷಣ ದಿಗ್ಭ್ರಮೆಗೊಂಡು ದುರ್ಯೋಧನನನ್ನು ತಡೆಯಲು ಪ್ರಯತ್ನ ಮಾಡುತ್ತಾರೆ. ಆದರೆ ದುರ್ಯೋಧನನ ಕೋಪದ ಮುಂದೆ ಯಾರ ಮಾತು ಕೇಳಿಸಿಕೊಳ್ಳುವುದಿಲ್ಲ. ಇನ್ನು ಸಮಾಧಾನ ಪಡಿಸಲು ಪ್ರಯತ್ನ ಪಟ್ಟಾಗ ಮತ್ತಷ್ಟು ಹೆಚ್ಚು ಮಾತುಗಳಿಂದ ನಿಂದಿಸಲು ಮುಂದಾದ ದುರ್ಯೋಧನನು ವಿಧುರನ ಹುಟ್ಟಿನ ಕುರಿತು ಉಲ್ಲೇಖಿಸಿ ಅತ್ಯಂತ ಕ’ಠಿಣವಾದ ಪದಗಳನ್ನು ಬಳಸುತ್ತಾರೆ.

ನೀನು ನನ್ನ ಅನ್ನವನ್ನು ತಿನ್ನುತ್ತಾ ನನ್ನ ರಾಜ್ಯದಲ್ಲಿ ಇದ್ದೀಯ ಆದರೂ ಕೂಡ ನಿನಗೆ ಪಾಂಡವರ ಮೇಲೆ ಪ್ರೀತಿ ಹೆಚ್ಚಾಗಿದೆ ಎಂದು ಹೇಳುತ್ತಾ ಮನಬಂದಂತೆ ವಿಧುರನ ಜನ್ಮದ ಕುರಿತು ಮಾತನಾಡುತ್ತಾರೆ. ಇದನ್ನು ಕಂಡ ವಿಧುರನು ತನ್ನ ತಾಳ್ಮೆ ಕಳೆದುಕೊಂಡು ದುರ್ಯೋಧನನನ್ನು ಅಂತ್ಯಗೊಳಿಸಲು ತನ್ನ ಬಿಲ್ಲು ಮತ್ತು ಬಾಣವನ್ನು ಹೊರತೆಗೆಯುತ್ತಾರೆ, ಇದನ್ನು ಕಂಡ ಶ್ರೀಕೃಷ್ಣನು ದುರ್ಯೋಧನನ ಅಂತ್ಯ ಎಲ್ಲಿ ಆಗಬೇಕೋ ಅಲ್ಲಿ ಮಾತ್ರ ಆಗಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಮಧ್ಯ ಪ್ರವೇಶಿಸಿ ತನ್ನದೇ ಆದ ಕಾರ್ಯತಂತ್ರವನ್ನು ಸೂಕ್ಷ್ಮವಾಗಿ ಬಳಸಲು ಆರಂಭಿಸುತ್ತಾನೆ, ಮಧ್ಯಪ್ರವೇಶಿಸಿದ ಶ್ರೀ ಕೃಷ್ಣನೂ ಓ ಕೌರವ ರಾಜ ನೀನು ವಿಧುರರ ಈ ರೀತಿ ಮಾತನಾಡುವುದು ಸರಿಯಲ್ಲ, ಅವರು ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿ ತಾನು ತಟಸ್ಥರಾಗಿ ಉಳಿಯುತ್ತೇನೆ ಎಂದು ಬಿಲ್ಲನ್ನು ಮು’ರಿದು ಹಾಕಿದರೇ ನಿಮ್ಮ ಕಥೆ ಏನಾಗಬಹುದು ಎಂದು ಆಲೋಚನೆ ಮಾಡಿಕೊಳ್ಳಿ ಎಂದು ಪರೋಕ್ಷವಾಗಿ ವಿಧುರನಿಗೆ ಮುಂದೇನು ಮಾಡಬೇಕು ಎಂಬುದನ್ನು ತಲೆಯಲ್ಲಿ ಮೂಡುವಂತೆ ಕೃಷ್ಣ ಮಾಡುತ್ತಾನೆ.

ಇದನ್ನು ಕೇಳಿಸಿಕೊಂಡ ದುರ್ಯೋಧನನು ವಿಧುರನು ನಮ್ಮ ಪರ ಯುದ್ಧದಲ್ಲಿ ಪಾಲ್ಗೊಳ್ಳದೆ ಇದ್ದರೆ ಯಾವುದೇ ತೊಂದರೆ ಇಲ್ಲ ನಾವು ಗೆಲುವು ಕಾಣುತ್ತೇವೆ ಎಂದು ಹೇಳುತ್ತಾ ತನ್ನ ನಿಂದನೆಯನ್ನು ಮುಂದುವರಿಸುತ್ತಾನೆ. ಇದನ್ನು ಕೇಳಿದ ವಿಧುರನು ಶ್ರೀಕೃಷ್ಣನ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿ ಕೃಷ್ಣ ನೀವು ನನಗೆ ಸರಿಯಾದ ಹಾದಿಯಲ್ಲಿ ಮಾರ್ಗದರ್ಶನ ಮಾಡಿದ್ದೀರಿ ಮತ್ತು ನನ್ನ ಬಿಲ್ಲುಗಾರಿಕೆಯ ಶಕ್ತಿಯನ್ನು ನನಗೆ ನೆನಪು ಮಾಡಿದ್ದೀರಿ ನಾನು ಇನ್ನು ಮುಂದೆ ಯಾವುದೇ ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿ ತನ್ನ ಬಿಲ್ಲನ್ನು ಮು’ರಿದು ಹಾಕುತ್ತಾರೆ, ಒಂದುಕ್ಷಣ ಸಿಡಿಲು ಬ’ಡಿದಂತೆ ದೊಡ್ಡ ಶಬ್ದ ಕೇಳಿಬರುತ್ತದೆ. ಇದರಿಂದ ಶ್ರೀಕೃಷ್ಣನ ಕಾರ್ಯಯೋಜನೆ ಯಶಸ್ವಿಯಾಗುತ್ತದೆ ವಿಧುರನು ಯುದ್ಧದಲ್ಲಿ ಪಾಲ್ಗೊಳ್ಳುವುದಿಲ್ಲ.