ಕೋರೋನ ಯೋಧರಿಗೆ ವಿಶೇಷ ಗೌರವ ನೀಡಲು ಹೊಸ ಘೋಷಣೆ ! ನಿಜಕ್ಕೂ ಉತ್ತಮ ನಿರ್ಧಾರ ಎಂದ ನೆಟ್ಟಿಗರು

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶವನ್ನು ಕೋರೋನ ಸಂದರ್ಭದಲ್ಲಿ ರಕ್ಷಿಸಲು ಹಲವಾರು ಜನ ತಮ್ಮನ್ನು ತಾವು ಲೆಕ್ಕಿಸದೆ ಕೋರೋನ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಕೆಲವರಂತೂ ತಾವು ನಿವೃತ್ತಿ ಪಡೆದುಕೊಂಡಿದ್ದರೂ ಕೂಡ ಇಂತಹ ಸಮಯದಲ್ಲಿ ದೇಶಕ್ಕೆ ಹೆಚ್ಚಿನ ವೈದ್ಯರ ಅಗತ್ಯವಿದೆ ಎಂಬುದು ತಿಳಿದ ಬಳಿಕ ಹಲವಾರು ನಿವೃತ್ತ ವೈದ್ಯರು ಕೂಡ ಆಸ್ಪತ್ರೆಗಳಲ್ಲಿ ಸೇವೆ ಮಾಡಲು ಮುಂದಾಗಿದ್ದರು. ಇನ್ನು ಟ್ರೈನಿಂಗ್ ಪಡೆದುಕೊಳ್ಳುತ್ತಿದ್ದ ವೈದ್ಯರು ಕೂಡ ತಮ್ಮ ಕೈಲಾದಷ್ಟು ಸಹಾಯ ಮಾಡುವುದಾಗಿ ಮುಂದೆ ಬಂದು ನಿಜಕ್ಕೂ ಮಾನವೀಯತೆ ಮೆರೆದಿದ್ದರು.

ಕೇವಲ ವೈದ್ಯರಷ್ಟೇ ಅಲ್ಲ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಜನರು ತಮ್ಮದೇ ಆದ ರೀತಿಯಲ್ಲಿ ದೇಶವನ್ನು ಕೋರೋನ ಇಂದ ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರೆಲ್ಲರಿಗೂ ಈಗಾಗಲೇ ಹಲವಾರು ಯೋಜನೆಗಳು ಘೋಷಣೆಯಾಗಿವೆ. ವಿಶೇಷ ವಿಮಾ ಯೋಜನೆಗಳನ್ನು ಘೋಷಿಸಲಾಗಿದ್ದು, ಎಲ್ಲೆಡೆ ಕೋರೋನ ಯೋಧರಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸುವ ಕೆಲಸಗಳು ಈಗಾಗಲೇ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೀವು ಕೂಡ ಹಲವಾರು ವಿಡಿಯೋಗಳನ್ನು ನೋಡಿರುತ್ತೀರಿ,‌ ಕೇವಲ ಸ’ರ್ಕಾರವಷ್ಟೇ ಅಲ್ಲದೇ ಜನರು ಕೂಡ ಕೋರೋನ ಯೋಧರಿಗೆ ವಿವಿಧ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ.

ಇದೀಗ ಕೋರೋನ ಸಂದರ್ಭದಲ್ಲಿ ತಮ್ಮನ್ನು ತಾವು ಲೆಕ್ಕಿಸದೆ ವಿವಿಧ ರೀತಿಯಲ್ಲಿ ಕೊರೋಣ ಯೋಧರಾಗಿ ಗುರುತಿಸಿಕೊಂಡಿರುವ ಜನರಿಗೆ ವಿಶೇಷ ಮೀಸಲಾತಿ ಘೋಷಣೆ ಮಾಡಲಾಗಿದ್ದು ಇನ್ನುಮುಂದೆ ಎಂಬಿಬಿಎಸ್ ಅಥವಾ ಬಿಡಿಎಸ್ ಸೀಟುಗಳ ಅಡಿಯಲ್ಲಿ ವಾರ್ಡ್ ಆಫ್ ಕೋವಿಡ್ ವಾ’ರಿಯರ್ಸ್ ಎಂಬ ವಿಶೇಷ ಮೀಸಲಾತಿಯಡಿಯಲ್ಲಿ ಪ್ರತಿಯೊಂದು ವೈದ್ಯಕೀಯ ಕಾಲೇಜುಗಳಲ್ಲಿಯೂ 5 ವಿಶೇಷ ಸೀಟು ಗಳನ್ನು ಮೀಸಲಾತಿ ನೀಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಡಾಕ್ಟರ್ ಹರ್ಷವರ್ಧನ್ ರವರು ತಿಳಿಸಿದ್ದಾರೆ. ಈ ಮೂಲಕ ಕೊರೋನಾ ಯೋಧರಿಗೆ ವಿಶೇಷ ಮೀಸಲಾತಿ ದೊರಕಿದ್ದು ಇನ್ನು ಮುಂದೆ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ವಿಶೇಷವಾಗಿ ಸೀಟುಗಳು ಇವರಿಗಾಗಿ ಲಭ್ಯವಾಗಲಿವೆ.

Post Author: Ravi Yadav