ಸೌಂದರ್ಯ ರವರು ಆ ತಪ್ಪು ಮಾಡದೇ ಇದ್ದಿದ್ದರೇ ನಮ್ಮ ಜೊತೆ ಇಂದು ಇರುತ್ತಿದ್ದರು ಎಂದ ತೆಲುಗು ನಟ ! ಹೇಳಿದ್ದೇನು ಗೊತ್ತೇ??

ಸೌಂದರ್ಯ ರವರು ಆ ತಪ್ಪು ಮಾಡದೇ ಇದ್ದಿದ್ದರೇ ನಮ್ಮ ಜೊತೆ ಇಂದು ಇರುತ್ತಿದ್ದರು ಎಂದ ತೆಲುಗು ನಟ ! ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಲವಾರು ವರ್ಷಗಳ ಹಿಂದೆ ಸ್ಟಾರ್ ನಟಿಯಾಗಿ ಗುರುತಿಸಿಕೊಂಡು ಕನ್ನಡದಲ್ಲಿಯೂ ಹಲವಾರು ಪಾತ್ರಗಳಿಗೆ ಜೀವ ತುಂಬಿರುವ ನಟಿ ಸೌಂದರ್ಯ ಎಲ್ಲರಿಗೂ ತಿಳಿದಿದೆ. ನಮ್ಮ ಕನ್ನಡತಿ ಸೌಂದರ್ಯ ರವರು ಹೆಸರಿಗೆ ತಕ್ಕಂತೆ ಸುಂದರವಾಗಿದ್ದರೂ ಕೂಡ ಅವರು ಎಂದಿಗೂ ತಮ್ಮ ಅಂದ ಅಥವಾ ಚಂದದಿಂದ ಮಾತ್ರ ಸದ್ದು ಮಾಡಲಿಲ್ಲ, ಬದಲಾಗಿ ತಮ್ಮ ಅತ್ಯದ್ಭುತ ನಟನೆಯ ಮೂಲಕ ಮನೆಮಾತಾಗಿದ್ದರು. ಇವರು ತೆರೆಯ ಮೇಲೆ ಯಾವ ರೀತಿಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಸೌಂದರ್ಯ ರವರ ಕುರಿತು ಹಾಗೂ ಅವರು ಇಹಲೋಕ ತ್ಯಜಿಸಿದ ಘಟನೆಯ ಕುರಿತು ಇದೀಗ ತೆಲುಗು ಚಿತ್ರರಂಗದ ನಿರ್ದೇಶಕ ಹಾಗೂ ನಟ ಗೋಪಾಲಕೃಷ್ಣರವರು ಮಾತನಾಡಿ, ಸೌಂದರ್ಯ ರವರು ಕೇವಲ ಒಂದು ತಪ್ಪಿನಿಂದ ಇಹಲೋಕ ತ್ಯಜಿಸಿದರು. ಒಂದು ವೇಳೆ ಅವರು ಈ ತಪ್ಪು ಮಾಡದೇ ಇದ್ದರೆ ಖಂಡಿತ ಇಂದು ಅವರು ನಮ್ಮ ಜೊತೆ ಇರುತ್ತಿದ್ದರು ಎಂದಿದ್ದಾರೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಸೌಂದರ್ಯ ರವರು, ವಿಧಿಯಾಟಕ್ಕೆ ತಮ್ಮ ಜೀವನವನ್ನು ಅಂ’ತ್ಯಗೊಳಿಸಿದರು. ಈ ಘಟನೆಯನ್ನು ಇಂದು ಕೂಡ ನೆನೆಸಿಕೊಂಡರೆ ಪ್ರತಿಯೊಬ್ಬರ ಬಾಯಲ್ಲೂ ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಈ ರೀತಿ ಆಗಬಾರದಿತ್ತು ಎಂದು ಮನ ಮಿಡಿಯುತ್ತಾರೆ. ಸೌಂದರ್ಯ ರವರ ಕುರಿತು ಕಳೆದ ಕೆಲವು ದಿನಗಳ ಹಿಂದೆ ಗೋಪಾಲಕೃಷ್ಣರವರು ಮಾತನಾಡಿ ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾಗಿದ್ದ ಸೌಂದರ್ಯ ಅವರನ್ನು ನೋಡಿದರೇ ನನಗೆ ಇಂತಹ ಹೆಂಡತಿ ಇರಬೇಕು ಎನ್ನುವುದಕ್ಕಿಂತಲೂ ಇಂತಹ ಸಹೋದರಿ ಇದ್ದರೇ ಬಹಳ ಚೆನ್ನಾಗಿರುತ್ತದೆ ಎಂಬ ಭಾವನೆ ಎಲ್ಲರಲ್ಲೂ ಮೂಡುತ್ತಿತ್ತು. ಒಬ್ಬ ನಟಿಯನ್ನು ಸಾಮಾನ್ಯ ಜನರು ನೋಡಿದರೇ ಈ ರೀತಿಯ ಭಾವನೆ ಬರುವುದು ನಿಜಕ್ಕೂ ಬಹಳ ವಿಶೇಷ, ಈ ರೀತಿಯ ವಿಶೇಷತೆಯನ್ನು ಹೊಂದಿದ್ದ ಸೌಂದರ್ಯ ರವರನ್ನು ಯಾರೂ ಮರೆಯಲು ಸಾಧ್ಯವಿಲ್ಲ. ನಾನು 1993 ರಲ್ಲಿ ಜಾನ್ಸಿ ಎಂಬ ಚಿತ್ರದಲ್ಲಿ ಸೌಂದರ್ಯ ರವರ ಜೊತೆ ನಟಿಸುವ ಅವಕಾಶ ಪಡೆದುಕೊಂಡಿದ್ದೇ. ಅಂದು ಅವರು ಚಿತ್ರರಂಗಕ್ಕೆ ಹೊಸಬರು ಆಗಿದ್ದರು, ಅವರನ್ನು ನೋಡಿದ ನನಗೆ ಇವರಲ್ಲಿರುವ ವಿನಯ ಹಾಗೂ ದೊಡ್ಡವರಿಗೆ ನೀಡುತ್ತಿರುವ ಗೌರವ ನೋಡಿದಾಗಲೆಲ್ಲ ನನಗೆ ಇವರು ಖಂಡಿತ ದೊಡ್ಡ ನಟಿ ಯಾಗುತ್ತಾರೆ ಎಂದು ಅನಿಸಿತ್ತು.

ಈ ರೀತಿ ಅಂದುಕೊಂಡ ಕೆಲವೇ ದಿನಗಳಲ್ಲಿ ಸೌಂದರ್ಯ ರವರು ಅಮ್ಮವಾರು ಎಂಬ ಚಿತ್ರದ ಮೂಲಕ ಭಾರಿ ಸದ್ದು ಮಾಡಿದ್ದರು. ಇದಾದ ಬಳಿಕ ಮತ್ತೊಂದು ಚಿತ್ರದಲ್ಲಿ ಸೌಂದರ್ಯ ರವರ ಜೊತೆ ನಟಿಸುವ ಅವಕಾಶ ಪಡೆದೆ, ಆಗ ಸೌಂದರ್ಯ ರವರು ಬಹು ಬೇಡಿಕೆಯ ನಟಿಯಾಗಿದ್ದರು. ಆಗಲೂ ಕೂಡ ನಾನು ಸೌಂದರ್ಯ ರವರ ಸ್ವಭಾವದಲ್ಲಿ ಕಿಂಚಿತ್ತು ಬದಲಾವಣೆ ಕೂಡ ಕಾಣಲಿಲ್ಲ, ನಿಜಕ್ಕೂ ಅವರ ಸ್ವಭಾವ ಬಹಳ ಉತ್ತಮವಾಗಿತ್ತು ಎಂದು ಹಾಡಿ ಹೊಗಳಿದ್ದಾರೆ. ಇನ್ನು ಮಾತನ್ನು ಮುಂದುವರಿಸಿರುವ ಗೋಪಾಲಕೃಷ್ಣರವರು ಸೌಂದರ್ಯ ರವರು ನಮ್ಮನ್ನು ಬಿಟ್ಟು ತೆರಳಿದ ದಿನವನ್ನು ನನ್ನ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಯಾಕೆಂದರೆ ಆ ದಿನ ನನ್ನ ತಾಯಿಯ ಕೋರಿಕೆ ಈಡೇರಿಸಿದ ದಿನ ಹೌದು ಏಪ್ರಿಲ್ 17, 2004ರಂದು ನನಗೆ ಡಾಕ್ಟರೇಟ್ ಪದವಿ ಸಿಕ್ಕಿತು.

ನಾನು ಡಾಕ್ಟರೇಟ್ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಮಯದಲ್ಲಿ ಸೌಂದರ್ಯ ರವರ ವಿಚಾರ ತಿಳಿಯಿತು. ನಿಜಕ್ಕೂ ನಾನು ನಂಬಲು ಸಾಧ್ಯವಾಗಲಿಲ್ಲ. ಅಸಲಿಗೆ ಸೌಂದರ್ಯ ರವರು ಒಂದು ವಿಮಾನದಲ್ಲಿ ಹೈದರಾಬಾದ್ ಗೆ ಬರಬೇಕಾಗಿತ್ತು. ಆಪ್ತಮಿತ್ರ ಚಿತ್ರದ ಶೂಟಿಂಗ್ ಮುಗಿಸಿಕೊಂಡು ಬರುವಷ್ಟರಲ್ಲಿ ವಿಮಾನ ಮಿಸ್ ಆಗಿ ಹೋಯಿತು, ನಂತರ ವಿಶೇಷ ಹೆಲಿಕ್ಯಾಪ್ಟರ್ ನಲ್ಲಿ ಹೈದರಾಬಾದಿಗೆ ಬರಲು ಸೌಂದರ್ಯ ರವರು ನಿರ್ಧಾರ ಮಾಡಿದ್ದರು, ಒಂದು ವೇಳೆ ಆ ವಿಮಾನ ಅವರಿಗೆ ಸಿಕ್ಕಿದ್ದರೆ ಅಥವಾ ಪ್ರಚಾರಕ್ಕೆ ಲೇಟ್ ಆಗಿ ಹೋದರೂ ಪರವಾಗಿಲ್ಲ ಎಂದು ಮತ್ತೊಂದು ವಿಮಾನಕ್ಕೆ ಕಾದಿದ್ದರೆ ಅವರು ಇಂದು ನಮ್ಮ ಜೊತೆಗೆ ಇರುತ್ತಿದ್ದರು ಎಂದು ಗೋಪಾಲಕೃಷ್ಣರವರು ಹೇಳಿಕೊಂಡು ಭಾವುಕರಾಗಿದ್ದಾರೆ.