ಜ್ಯೋತಿಷ್ಯ ಶಾಸ್ತ್ರ: ಆರ್ಥಿಕವಾಗಿ ವಿಶೇಷವೆನಿಸುವ ದೀಪಾವಳಿ ಸಂದರ್ಭದಲ್ಲಿ ಈ ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ! ರಾಶಿ ಫಲಾಫಲಗಳನ್ನು ತಿಳಿಯಿರಿ

ಜ್ಯೋತಿಷ್ಯ ಶಾಸ್ತ್ರ: ಆರ್ಥಿಕವಾಗಿ ವಿಶೇಷವೆನಿಸುವ ದೀಪಾವಳಿ ಸಂದರ್ಭದಲ್ಲಿ ಈ ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ ! ರಾಶಿ ಫಲಾಫಲಗಳನ್ನು ತಿಳಿಯಿರಿ

0

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಹಿಂದೂ ಧರ್ಮಗ್ರಂಥಗಳ ಪ್ರಕಾರ ದೀಪಾವಳಿ ತಿಂಗಳನ್ನು ಬಹಳ ಅದೃಷ್ಟದ ತಿಂಗಳು ಎಂದು ನಂಬಲಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಆರ್ಥಿಕತೆಯ ವಿಚಾರದಲ್ಲಿ ದೀಪಾವಳಿಯ ತಿಂಗಳು ಬಹಳ ಶ್ರೇಷ್ಠ ಎನಿಸಿದೆ. ಅದೇ ಕಾರಣಕ್ಕಾಗಿ ದೀಪಾವಳಿ ಸಂದರ್ಭದಲ್ಲಿ ಹಲವಾರು ವ್ಯಾಪಾರಿಗಳು ತಮ್ಮ ತಮ್ಮ ಅಂಗಡಿಗಳಿಗೆ ಪೂಜೆ ಸಲ್ಲಿಸಿ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಲು ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಅದರಲ್ಲಿಯೂ ಪ್ರಮುಖವಾಗಿ ದೀಪಾವಳಿ ತಿಂಗಳಿನಲ್ಲಿ ತುಳಸಿ ಮತ್ತು ಲಕ್ಷ್ಮೀ ದೇವಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ತಾಯಿ ಲಕ್ಷ್ಮೀದೇವಿಗೆ ಈ ತಿಂಗಳಿನಲ್ಲಿ ಬಹಳ ವಿಶೇಷವಾದ ಪೂಜೆಗಳನ್ನು ಸಲ್ಲಿಸುವ ಕಾರಣ ದೀಪಾವಳಿ ತಿಂಗಳನ್ನು ಆರ್ಥಿಕವಾಗಿ ಬಹಳ ವಿಶೇಷ ತಿಂಗಳು ಎಂದು ಪರಿಗಣಿಸಲಾಗಿದೆ. ಇನ್ನು ಈ ದೀಪಾವಳಿಯು ಕೂಡ ಪ್ರತಿವರ್ಷದ ದೀಪಾವಳಿಯಂತೆ ವಿಶೇಷವಾಗಿ ಕೆಲವೊಂದು ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇಷ್ಟು ದಿವಸ ಈ ರಾಶಿಗಳಲ್ಲಿ ಕಂಡ ಎಲ್ಲ ಏರಿಳಿತಗಳು ನಿವಾರಣೆಯಾಗಿ ಇನ್ನುಮುಂದೆ ಸುಖ ಹಾಗೂ ಸಮೃದ್ಧಿ ಪಡುವ ಸಮಯ ಬರುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ ಕೇಳಿ.

ಮೇಷ: ಈ ದೀಪಾವಳಿಯಲ್ಲಿ ಅಕ್ಷರಸಹ ನಿಮಗೆ ಅದೃಷ್ಟದ ಬಾಗಿಲು ತೆರೆಯಲಿದೆ. ನಿಮಗೆ ನೀವು ಅಂದುಕೊಂಡಿರುವ ಅಂತಹ ಉದ್ಯೋಗ ಕ್ಷೇತ್ರದಲ್ಲಿ ಹೊಸ ಹೊಸ ರೀತಿಯ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಇನ್ನು ನೀವು ಉದ್ಯೋಗ ಮಾಡುವ ಸ್ಥಳದಲ್ಲಿ ನಿಮ್ಮ ಮೇಲಾಧಿಕಾರಿಗಳು ಅಥವಾ ನಿಮ್ಮ ಮಾಲೀಕರು ನಿಮಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡುವ ಮೂಲಕ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತಾರೆ. ನೀವು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಕೂಡ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುವ ಮೂಲಕ ಭೇಶ್ ಎನಿಸಿಕೊಳ್ಳುತ್ತಿರಿ. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ನೀವು ಮಾರ್ಗದರ್ಶಕರಾಗಿ ಬಡ್ತಿ ಪಡೆಯುವ ಸಾಧ್ಯತೆ ಇದೆ. ನೀವು ಮಾಡುತ್ತಿರುವ ಕೆಲಸಕ್ಕೆ ತಕ್ಕಂತೆ ನಿಮಗೆ ನಿಮ್ಮ ವೇತನ ಹೆಚ್ಚಾಗುತ್ತದೆ. ಆದರೆ ಮುಂದಿನ ಧನಲಕ್ಷ್ಮಿ ವರ್ಷದಲ್ಲಿ ಒಂದು ಕಡೆ ನಿಮಗೆ ಲಾಭಗಳು ಹೆಚ್ಚಾದರೆ ಮತ್ತೊಂದು ಕಡೆ ನಿಮಗೆ ನಷ್ಟದ ಪ್ರಮಾಣವೂ ಹೆಚ್ಚಾಗುವ ಸಾಧ್ಯತೆ ಇದೆ. ಆದ ಕಾರಣದಿಂದ ನೀವು ನಿಮ್ಮ ಆದಾಯ ಹೆಚ್ಚಿಸಿಕೊಳ್ಳಲು ಪ್ರಯತ್ನಪಟ್ಟು, ನಿಮ್ಮ ಖರ್ಚುಗಳ ಬಗ್ಗೆ ನಿಮ್ಮ ಆದಾಯದ ಆಧಾರದ ಮೇರೆಗೆ ಆಲೋಚನೆ ಮಾಡಬೇಕಾಗಿದೆ. ಸಾಧ್ಯವಾದಷ್ಟು ಹೊಸ ಹೊಸ ಯೋಜನೆಗಳಿಗೆ ಹೂಡಿಕೆಗಳನ್ನು ತಪ್ಪಿಸಿ ಹಾಗೂ ನೀವು ದುಡಿಯುವ ಹಣವನ್ನು ಮುಂದಿನ ಜೀವನಕ್ಕಾಗಿ ಸೇವಿಂಗ್ಸ್ ಮಾಡುವುದನ್ನು ಮರೆಯಬೇಡಿ.

ವೃಷಭ: ಇನ್ನು ವೃಷಭ ರಾಶಿ ರವರ ಕುರಿತು ಗಮನಿಸುವುದಾದರೆ ದೀಪಾವಳಿ ನಿಮಗೆ ಲಾಭ ಮತ್ತು ನಷ್ಟ ಎರಡು ರೀತಿಯಲ್ಲಿ ಮಿಶ್ರ ಫಲ ಗಳನ್ನು ಹೊತ್ತು ತರುತ್ತದೆ. ಈ ಸಂದರ್ಭದಲ್ಲಿ ನೀವು ಇಷ್ಟು ದಿವಸ ದುಡಿಯುವುದಕ್ಕಿಂತ ಹೆಚ್ಚಿನ ಹಣವನ್ನು ಗಳಿಸುತ್ತೀರಾ, ಆದರೆ ಈ ಈ ಸಂದರ್ಭದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಸಾಧ್ಯವಾದಷ್ಟು ಹಣವನ್ನು ಉಳಿಸುವ ಗಮನ ಕೊಡಿ. ಅವಶ್ಯಕತೆ ಇದ್ದಲ್ಲಿ ಮಾತ್ರ ಖರ್ಚು ಮಾಡಿ, ಈ ವರ್ಷ ನಿಮಗೆ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಖರ್ಚುಗಳು ಹೆಚ್ಚಾದಷ್ಟು ನಿಮ್ಮ ಆದಾಯ ಕೂಡ ಹೆಚ್ಚಾಗುತ್ತದೆ. ನಿಮ್ಮ ಆದಾಯಕ್ಕೆ ಅನುಗುಣವಾಗಿ ನೀವು ಖರ್ಚು ಮಾಡಬೇಕಾಗುತ್ತದೆ.

ಮಿಥುನ: ಇನ್ನು ಮಿಥುನ ರಾಶಿಯ ಜನರ ಬಗ್ಗೆ ಮಾತನಾಡುವುದಾದರೇ ಈ ವರ್ಷದ ದೀಪಾವಳಿ ಅಕ್ಷರಸಹ ನಿಮ್ಮ ಬಾಳಿನಲ್ಲಿ ಹೊಸ ಬೆಳಕನ್ನು ಹೊತ್ತುಕೊಂಡು ಬರಲಿದ್ದು, ಪ್ರಮುಖವಾಗಿ ಕೌಟುಂಬಿಕವಾಗಿ ನಿಮಗೆ ಸಮಯ ಬಹಳ ಉತ್ತಮವಾಗಿದೆ. ನಿಮ್ಮ ಮನೆಯಲ್ಲಿ ಇಡೀ ವರ್ಷ ಪೂರ್ತಿ ಸಂತೋಷ ಹಾಗೂ ನೆಮ್ಮದಿ ಇರಲಿದೆ. ಗ್ರಹಗಳ ಸ್ಥಾನಮಾನಗಳ ಕುರಿತು ನಿಮಗೆ ಮಾಹಿತಿ ನೀಡುವುದಾದರೇ ಸೂರ್ಯ, ಚಂದ್ರ ಮತ್ತು ಶನಿ ಗ್ರಹಗಳ ನಿಮಗೆ ಬಹಳ ಅನುಕೂಲಕರವಾದ ಸ್ಥಾನದಲ್ಲಿ ಇರುವ ಕಾರಣ ನಿಮ್ಮ ಜೀವನದಲ್ಲಿ ಸಂತೋಷ ನೆಲೆಯಾಗುತ್ತದೆ. ಮಕ್ಕಳು ಸಂಬಂಧಿಕರು ನಿಮಗೆ ಸಿಹಿ ಸುದ್ದಿಗಳನ್ನು ಹೊತ್ತು ಬರುತ್ತಾರೆ, ಇನ್ನು ಆರ್ಥಿಕ ವಿಚಾರಗಳ ಕುರಿತು ಮಾತನಾಡುವುದಾದರೇ ನೀವು ವಿವಿಧ ಮೂಲಗಳಿಂದ ಹಣ ಪಡೆಯುತ್ತೀರಿ. ಆದರೆ ಈ ವರ್ಷ ನಿಮಗೆ ಹೆಚ್ಚಿನ ಖರ್ಚುಗಳು ಹುಡುಕಿಕೊಂಡು ಬರಲಿವೆ. ಅನಿವಾರ್ಯ ವಿರುವ ಸಂದರ್ಭಗಳಲ್ಲಿ ಮಾತ್ರ ಖರ್ಚು ಮಾಡಿ, ಆರೋಗ್ಯದ ಕುರಿತು ಕಾಳಜಿ ಇರಲಿ.

ಕರ್ಕಾಟಕ: ಇನ್ನು ಕಟಕ ರಾಶಿ ರವರ ಗ್ರಹಗಳ ಸ್ಥಾನಮಾನಗಳ ಆಧಾರದ ಮೇರೆಗೆ ಜ್ಯೋತಿಷ್ಯ ಶಾಸ್ತ್ರ ಹೇಳುವುದೇನೆಂದರೆ ಈ ವರ್ಷ ನಿಮಗೆ ಲಕ್ಷ್ಮೀದೇವಿಯು ಕೃಪೆ ತೋರುತ್ತಾರೆ. ನೀವು ಈ ಸಂದರ್ಭದಲ್ಲಿ ಕೇವಲ ಅವಕಾಶಗಳ ಮೇಲೆ ಮಾತ್ರ ಗಮನಹರಿಸಬೇಕು. ಹಣದ ಕುರಿತು ಯಾವುದೇ ಆಲೋಚನೆ ಬೇಡ ಯಾಕೆಂದರೆ ನೀವು ಊಹಿಸಿಕೊಳ್ಳದ ರೀತಿಯಲ್ಲಿ ನಿಮಗೆ ಧನಾಗಮನ ಆಗುತ್ತದೆ. ಶೇರು ಮಾರುಕಟ್ಟೆ, ಉಡುಗೊರೆ, ರಿಯಲ್ ಎಸ್ಟೇಟ್ ಮಾರ್ಗಗಳಿಂದ ನಿಮಗೆ ಹಣ ಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಈ ವರ್ಷ ನಿಮಗೆ ಕುಬೇರನ ಕೃಪೆ ಇರಲಿದೆ, ಆದ್ದರಿಂದ ಈ ವರ್ಷ ನೀವು ದೀಪಾವಳಿಯ ಸಂದರ್ಭದಲ್ಲಿ ಕುಬೇರನನ್ನು ಮನಃಸ್ಪೂರ್ತಿಯಾಗಿ ಪೂಜಿಸುವುದನ್ನು ಮರೆಯಬೇಡಿ.

ಸಿಂಹ: ಇನ್ನು ಸಿಂಹ ರಾಶಿಯ ಭವಿಷ್ಯದ ಕುರಿತು ಮಾತನಾಡುವುದಾದರೆ ಈ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡೆದು ಕೊಳ್ಳಲಿದ್ದಾರೆ. ನಿಮ್ಮ ಸುತ್ತಮುತ್ತಲಿನ ಜನರು ಪ್ರೀತಿಪಾತ್ರರು ನಿಮಗೆ ಸಿಹಿ ಸುದ್ದಿಗಳನ್ನು ನೀಡಲಿದ್ದಾರೆ. ಇನ್ನು ನೀವು ಹಲವಾರು ವರ್ಷಗಳ ಕಾಲದಿಂದಲೂ ಉಳಿತಾಯ ಮಾಡಲು ಸಾಧ್ಯವಾಗದೇ ಇದ್ದರೂ ಕೂಡ ಈ ಸಮಯದಲ್ಲಿ ಉಳಿತಾಯ ಸಾಧ್ಯ ವಾಗುತ್ತದೆ. ಆದರೆ ಅನಿರೀಕ್ಷಿತವಾಗಿ ಹಣ ನಿಮ್ಮ ಕೈಸೇರುವ ಕಾರಣ ನೀವು ಉಳಿತಾಯ ದತ್ತ ಗಮನ ಕೊಟ್ಟರೇ ಬಹಳ ಒಳ್ಳೆಯದು. ಈ ಸಂದರ್ಭದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರಲಿದ್ದು, ನೀವು ಒಬ್ಬರು ಮಾರ್ಗದರ್ಶಿಯಂತೆ ಇತರ ಜನರಿಗೆ ಕಾಣುತ್ತೀರಿ. ಈ ಸಂದರ್ಭದಲ್ಲಿ ಗುರುಗ್ರಹ ನಿಮಗೆ ಬಹಳ ಅನುಕೂಲಕರವಾದ ಸ್ಥಾನದಲ್ಲಿದೆ. ಈ ಸಂದರ್ಭದಲ್ಲಿ ನೀವು ಹೆಚ್ಚಿನ ಫಲ ಪಡೆದುಕೊಳ್ಳಬೇಕು ಎಂದರೆ ಗೋಮಾತೆಯನ್ನು ಪೂಜಿಸಿ. ನಿಮ್ಮ ಕೈಲಾದಷ್ಟು ದಾನ-ಧರ್ಮಗಳನ್ನು ಬಡವರಿಗೆ ಮಾಡಿ. ಇನ್ನು ಈ ವರ್ಷ ಏಳನೇ ಸಂಖ್ಯೆಯು ನಿಮ್ಮ ಬದುಕಿನಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.

ಕನ್ಯಾ: ಇನ್ನು ಕನ್ಯಾರಾಶಿಯ ಕುರಿತು ಗಮನಹರಿಸುವುದಾದರೆ, ನಿಮಗೆ ಗುರು ಹಾಗೂ ಶನಿ ಗ್ರಹಗಳ ಸ್ಥಾನಮಾನ ಬಹಳ ಅನುಕೂಲಕರವಾದ ಸ್ಥಾನದಲ್ಲಿದೆ. ಆದ್ದರಿಂದ ಜ್ಞಾನಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳಲ್ಲೂ ನೀವು ಯಶಸ್ಸನ್ನು ಕಾಣುತ್ತಿದೆ. ಕಚೇರಿ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯಗಳಲ್ಲಿಯೂ ಯಶಸ್ಸು ನಿಮ್ಮದಾಗಲಿದೆ. ಮುಂದಿನ ವರ್ಷ ನಿಮಗೆ ಹಲವಾರು ಅವಕಾಶಗಳು ಹಾಗೂ ಶುಭ ಸುದ್ದಿಗಳು ಹುಡುಕಿಕೊಂಡು ಬರಲಿವೆ. ನಿಮಗೆ ಒಂದು ವೇಳೆ ವಿವಾಹ ಆಗಿದ್ದರೆ ಸಂತಾನಭಾಗ್ಯ, ವಿವಾಹವಾಗಿರದೇ ಇದ್ದರೇ ಕಂಕಣಭಾಗ್ಯ ಕೂಡಿ ಬರಲಿದೆ. ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ ಖಂಡಿತ ಮುಂದಿನ ವರ್ಷ ನಿಮಗೆ ಉದ್ಯೋಗ ಸಿಗಲಿದೆ. ದೀಪಾವಳಿ ಸಂದರ್ಭದಲ್ಲಿ ನೀವು ತಾಯಿ ಲಕ್ಷ್ಮೀದೇವಿಗೆ ಪೂಜೆ ಮಾಡಿ, ಪಂಚಾಕ್ಷರಿ ಮಂತ್ರವನ್ನು ಜಪಿಸುವುದರಿಂದ ನಿಮಗೆ ಹೆಚ್ಚಿನ ಫಲ ಸಿಗುತ್ತದೆ. ಇನ್ನು ಆರ್ಥಿಕ ವಿಚಾರದ ಕುರಿತು ಮಾತನಾಡುವುದಾದರೆ ನಿಮಗೆ ಆದಾಯ ಹೆಚ್ಚಾಗುತ್ತದೆ, ಆದರೆ ಖರ್ಚುಗಳು ಕಡಿಮೆಯಾಗುತ್ತವೆ ಇದರಿಂದ ನಿಮ್ಮ ಆಸ್ತಿ ಹೆಚ್ಚಾಗುತ್ತದೆ.

ತುಲಾ:ಇನ್ನು ತುಲಾ ರಾಶಿಯ ಜನರ ಕುರಿತು ಮಾತನಾಡುವುದಾದರೆ ಈ ಮುಂಬರುವ ವರ್ಷ ನಿಮಗೆ ಆರ್ಥಿಕ ವಿಚಾರವಾಗಿ ಸಾಮಾನ್ಯವಾಗಿರುತ್ತದೆ. ನೀವು ಇಷ್ಟು ದಿವಸ ಕೂಡಿಟ್ಟುಕೊಂಡು ಬಂದಿದ್ದ ಹಣ ಸ್ವಲ್ಪ ಕಡಿಮೆಯಾಗುತ್ತದೆ. ನಿಮ್ಮ ಆದಾಯ ಹಾಗೂ ನಿಮ್ಮ ಖರ್ಚುವೆಚ್ಚಗಳು ಬಹಳ ಸಮತೋಲನದಲ್ಲಿರುವ ಕಾರಣ ಈ ವರ್ಷ ನಿಮಗೆ ಆರ್ಥಿಕ ವಿಚಾರ ಸಾಮಾನ್ಯವಾಗಿರುತ್ತದೆ. ಒಂದು ವಾಕ್ಯದಲ್ಲಿ ಹೇಳುವುದಾದರೆ ನಿಮ್ಮ ಆರ್ಥಿಕ ಪರಿಸ್ಥಿತಿ ವೃಷಭ ರಾಶಿಯ ಜನರಂತೆ ಇರಲಿದೆ.

ವೃಶ್ಚಿಕ: ಇನ್ನು ವೃಶ್ಚಿಕ ರಾಶಿಯ ಜನರ ಕುರಿತು ಮಾತನಾಡುವುದಾದರೆ ನಿಮ್ಮ ಮುಂದಿನ ವರ್ಷದ ಭವಿಷ್ಯ ಆರನೇ ಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ನೀವು ಸಾಕಷ್ಟು ಶ್ರಮ ಪಡಬೇಕು. ಅಷ್ಟೇ ಅಲ್ಲದೆ ನೀವು ಖರ್ಚು ಮಾಡುವ ಸಂದರ್ಭದಲ್ಲಿ ನಿಮ್ಮ ಆದಾಯದ ಕುರಿತು ಗಮನ ಹರಿಸಬೇಕು. ಇಲ್ಲವಾದಲ್ಲಿ ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇನ್ನು ಈ ವರ್ಷದಲ್ಲಿ ಹೆಚ್ಚಿನ ಹೂಡಿಕೆಗಳು ಬೇಡ, ನೀವು ಈಗಾಗಲೇ ಠೇವಣಿ ಮಾಡಿರುವ ಹಣವನ್ನು ಯಾವುದೇ ಕಾರಣಕ್ಕೂ ವಾಪಸ್ಸು ಪಡೆಯುವ ಕುರಿತು ಆಲೋಚನೆ ನಡೆಸಬೇಡಿ.

ಧನ: ಇನ್ನು ಧನುರಾಶಿಯ ಜನರ ಕುರಿತು ಮಾತನಾಡುವುದಾದರೆ ಈ ವರ್ಷ ನಿಮಗೆ ಸಾಮಾನ್ಯವಾಗಿರುತ್ತದೆ. ಈ ವರ್ಷ ನಿಮಗೆ ಆದಾಯ ಹೆಚ್ಚು ಬರುವುದಿಲ್ಲ, ಅದರಂತೆಯೇ ಖರ್ಚು ಕೂಡ ಕಡಿಮೆ. ಆದಾಯ ಹಾಗೂ ಖರ್ಚುಗಳು ಎರಡು ಸಮತೋಲನದಲ್ಲಿ ಈ ವರ್ಷ ಇರಲಿವೆ. ಒಂದು ವೇಳೆ ನೀವು ಮನಸ್ಸು ಮಾಡಿದ್ದಲ್ಲಿ ಕೊಂಚ ಹಣವನ್ನು ಕೂಡ ಈ ವರ್ಷ ಉಳಿತಾಯ ಮಾಡಬಹುದು. ಆದರೆ ಅದಕ್ಕಾಗಿ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಅಗತ್ಯವಿರುವ ಸಂದರ್ಭದಲ್ಲಿ ಮಾತ್ರ ಖರ್ಚು ಮಾಡಬೇಕಾಗುತ್ತದೆ.

ಮಕರ: ಇನ್ನು ಮಕರ ರಾಶಿಯ ಜನರ ಕುರಿತು ಮಾತನಾಡುವುದಾದರೆ ಶನಿಗ್ರಹವು ನಿಮ್ಮ ಗ್ರಹದಲ್ಲಿ ಸಾಗುತ್ತಿರುವ ಕಾರಣ ಈ ವರ್ಷ ನಿಮಗೆ ಆರ್ಥಿಕ ವಿಚಾರ ಸಮಾಧಾನಕರವಾಗಿ ಇರಲಿದೆ. ಈ ವರ್ಷ ಸಮಯಕ್ಕೆ ಸರಿಯಾಗಿ ನೀವು ಚಿಕ್ಕ ಚಿಕ್ಕ ವಿಷಯಗಳಲ್ಲಿ ಲಾಭವನ್ನು ಕಾಣಬಹುದು, ಆದರೆ ಲಾಭ ಬಂದ ಹಣ ಖರ್ಚಾಗುವುದು ಖಚಿತ. ಈ ವರ್ಷಪೂರ್ತಿ ನಿಮ್ಮ ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಇಟ್ಟುಕೊಳ್ಳುವುದು ಉತ್ತಮ. ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಕಾರ ಗ್ರಹಗಳ ಆಧಾರದ ಮೇರೆಗೆ ನೋಡುವುದಾದರೆ ಖರ್ಚು ಹಾಗೂ ಆದಾಯಗಳೆರಡು ಸಮತೋಲನ ವಾಗಿದೆ.

ಕುಂಭ: ಇನ್ನು ಕುಂಭ ರಾಶಿಯ ಜನರ ಕುರಿತು ಮಾತನಾಡುವುದಾದರೆ ಈ ವರ್ಷದ ದೀಪಾವಳಿ ನಿಮಗೆ ಅದೃಷ್ಟದ ಬಾಗಿಲು ತೆರೆಯಲಿದೆ. ದೇವರ ಕೃಪೆಯಿಂದ ನೀವು ಮಾಡಬೇಕು ಎಂದು ಕೊಂಡಿರುವ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತವೆ. ಆರ್ಥಿಕ ವಿಚಾರವನ್ನು ಬರೆದು ಪಡಿಸಿ ನೋಡುವುದಾದರೆ ಶನಿ ಹಾಗೂ ಸೂರ್ಯಗ್ರಹ ನಿಮಗೆ ಅನುಕೂಲಕರವಾದ ಸ್ಥಾನದಲ್ಲಿರುವುದರಿಂದ ಇತರ ಗ್ರಹಗಳು ನಿಮ್ಮ ಸ್ಥಾನಮಾನವನ್ನು ತಡೆಯಲು ಸಾಧ್ಯವಿಲ್ಲ. ಆದಕಾರಣ ನೀವು ನಿಮ್ಮ ಕ್ಷೇತ್ರಗಳಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತೀರಿ. ದೀಪಾವಳಿ ಸಂದರ್ಭದಲ್ಲಿ ತಾಯಿ ಲಕ್ಷ್ಮೀ ದೇವಿಗೆ ಪೂಜೆ ಮಾಡಿ ಗೋಮಾತೆಯನ್ನು ಪೂಜಿಸುವ ಮೂಲಕ ನೀವು ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಆರ್ಥಿಕ ವಿಚಾರದ ಕುರಿತು ಗಮನಹರಿಸುವುದಾದರೆ ಕಾಲಕಾಲಕ್ಕೆ ನಿಮಗೆ ಸಣ್ಣ ಸಣ್ಣ ರೀತಿಯಲ್ಲಿ ಲಾಭ ಬರಲಿದೆ. ಖರ್ಚುಗಳು ಕೂಡ ಕುಂತ ಹೆಚ್ಚಾಗಲಿದ್ದು, ನೀವು ಮನಸ್ಸು ಮಾಡಿದರೆ ಅನಗತ್ಯ ವಿಚಾರಗಳಿಗೆ ಖರ್ಚು ಮಾಡುವುದನ್ನು ನಿಲ್ಲಿಸಬಹುದು. ಒಂದು ವೇಳೆ ನೀವು ಹಾಗೆ ಮಾಡದೇ ಇದ್ದರೂ ಕೂಡ ಖರ್ಚು ಮತ್ತು ಆದಾಯ ಎರಡು ಸಮತೋಲನದಲ್ಲಿ ಇರಲಿದೆ.

ಮೀನ: ಇನ್ನು ಮೀನ ರಾಶಿಯ ಜನರ ಕುರಿತು ಮಾತನಾಡುವುದಾದರೇ ಎಂಬ ಈ ಮುಂಬರುವ ವರ್ಷ ನಿಮಗೆ ಲಾಭ ಹೆಚ್ಚಾಗುತ್ತದೆ, ಕ್ರಮೇಣ ಒಮ್ಮೆ ಅಲ್ಲದೇ ಇದ್ದರೂ ಕೂಡ ಕ್ರಮೇಣ ಚಿಕ್ಕ ಚಿಕ್ಕ ಲಾಭಗಳನ್ನು ಪಡೆಯುತ್ತೀರೀ. ಹಾಗೆಂದು ಖರ್ಚುಗಳು ಏನು ಕಡಿಮೆ ಇರುವುದಿಲ್ಲ, ಲಾಭಕ್ಕೆ ಅನುಗುಣವಾಗಿ ನೀವು ಖರ್ಚು ಮಾಡಬೇಕಾದ ಪರಿಸ್ಥಿತಿಗಳು ಎದುರಾಗುತ್ತವೆ. ಒಂದು ಮಾತಿನಲ್ಲಿ ಹೇಳುವುದಾದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಕುಂಭ ಮತ್ತು ಮಕರ ರಾಶಿಯ ಜನರಂತೆ ಇರುತ್ತದೆ.