ಭಾರತಕ್ಕೆ ಸಿಕ್ಕಿತು ಅತಿ ದೊಡ್ಡ ಚಾನ್ಸ್, ಬಾಚಿಕೊಂಡು ಭಾರತವನ್ನು ರಾರಾಜಿಸುವಂತೆ ಮಾಡುತ್ತಾರಾ ಮೋದಿ?

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ದಿನೇದಿನೇ ಏರಿಕೆಯಾಗುತ್ತಿದೆ. ವಿಶ್ವದ ಹಲವಾರು ರಾಷ್ಟ್ರಗಳು ಭಾರತದ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಲು ಹಾಗೂ ವಿವಿಧ ರೀತಿಯ ಒಪ್ಪಂದಗಳಿಗೆ ಸಹಿ ಹಾಕಲು ತುದಿಗಾಲಲ್ಲಿ ಕಾದು ನಿಂತಿದ್ದಾರೆ. ಇವರು ಕೇವಲ ವ್ಯಾಪಾರ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಮಾತ್ರ ಮಾಡಿಕೊಳ್ಳುತ್ತಿಲ್ಲ ಬದಲಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ತಾನು ಭಾರತದ ಸ್ನೇಹಿತ ಎಂದು ಬಿಂಬಿಸಿಕೊಳ್ಳಲು ಭಾರತದ ಎಲ್ಲಾ ನಡೆಗಳನ್ನು ಬೆಂಬಲಿಸುವ ಮೂಲಕ ಭಾರತಕ್ಕೆ ಅಂತರರಾಷ್ಟ್ರೀಯಮಟ್ಟದಲ್ಲಿ ವರ್ಚಸ್ಸು ಹೆಚ್ಚಾಗುವಂತೆ ಮಾಡುತ್ತಿದ್ದಾರೆ.

ಟರ್ಕಿ, ಪಾಕಿಸ್ತಾನ, ಮಲೇಶಿಯಾ, ಚೀನಾ ಸೇರಿದಂತೆ ಇನ್ನು ವಿವಿಧ ಹಲವಾರು ರಾಷ್ಟ್ರಗಳು ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಿ’ತೂರಿ ನಡೆಸುತ್ತಿದ್ದರೂ ಕೂಡ ಕೇವಲ ಬೆರಳೆಣಿಕೆಯ ದೇಶಗಳು ಮಾತ್ರ ಆ ದೇಶಗಳ ಪರವಾಗಿ ನಿಂತು ಭಾರತದ ವಿರುದ್ಧ ಮಾತನಾಡುವ ಕೆಲಸ ಮಾಡುತ್ತಿವೆ. ಇನ್ನುಳಿದಂತೆ ಬಹುತೇಕ ರಾಷ್ಟ್ರಗಳು ಭಾರತ ಎಂದರೆ ಸಾಕು ಆಪ್ತ ಸ್ನೇಹಿತ ಎನ್ನಲು ಮರು ಆಲೋಚನೆ ಕೂಡ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಉತ್ತಮ ಅವಕಾಶ ಲಭ್ಯವಾಗಿದ್ದು ಒಂದು ವೇಳೆ ನರೇಂದ್ರ ಮೋದಿ ಅವರು ಅವಕಾಶವನ್ನು ಕೂಡ ಬಾಚಿಕೊಂಡರೇ ಭಾರತ ದೇಶವು ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲಿದ್ದು, ಚೀನಾ ದೇಶದ ಆಟಗಳಿಗೆ ಬ್ರೇಕ್ ಹಾಕಲು ಮತ್ತಷ್ಟು ಸಹಕಾರ ವಾಗಲಿದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತ ದೇಶವು ಚೀನಾ ದೇಶಕ್ಕೆ ಇನ್ಯಾವುದೇ ವಿಶ್ವದ ಇತರ ರಾಷ್ಟ್ರಗಳ ಉತ್ತರ ನೀಡದ ಪರಿಯಲ್ಲಿ ಉತ್ತರ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಚೀನಾ ಕ್ಯಾತೆಗೆಯುತ್ತಿರುವ ಎಲ್ಲ ರಾಷ್ಟ್ರಗಳು ಭಾರತದ ಪರವಾಗಿ ಧ್ವನಿಯೆತ್ತಿದ್ದರು. ಇನ್ನು ಚೀನಾ ದೇಶ ಜಪಾನ್, ಆಸ್ಟ್ರೇಲಿಯಾ ಭಾರತ ಹಾಗೂ ಅಮೆರಿಕ ದೇಶಗಳ ಜೊತೆಗೆ ಸುಖಾಸುಮ್ಮನೆ ಕ್ಯಾತೆ ತೆಗೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾ ವಿರುದ್ಧ ಒಂದು ಒಕ್ಕೂಟ ರಚನೆಯ ಮಟ್ಟಕ್ಕೆ ವಿವಾದವನ್ನು ತಂದು ನಿಲ್ಲಿಸಿತು. ಫ್ರಾನ್ಸ್, ರಷ್ಯಾ, ಆಸ್ಟ್ರೇಲಿಯ, ಜಪಾನ್, ಸೇರಿದಂತೆ ಎಲ್ಲಾ ದೇಶಗಳು ಭಾರತದ ಪರವಾಗಿ ಧ್ವನಿಯೆತ್ತಿದ್ದವು. ಇಂತಹ ಸಂದರ್ಭದಲ್ಲಿ ಅಮೆರಿಕ ದೇಶ ಮಾಜಿ ಅಧ್ಯಕ್ಷರಾದ ಟ್ರಂಪ್ ರವರು ಜಪಾನ್, ಆಸ್ಟ್ರೇಲಿಯಾ ಹಾಗೂ ಭಾರತ ದೇಶ ಸೇರಿಕೊಂಡು QUAD ಎಂಬ ಆಧಾರದ ಮೇರೆಗೆ ಹಲವಾರು ಮಿಲಿಟರಿ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು.

ಇಷ್ಟೇ ಅಲ್ಲದೆ ಅಮೇರಿಕಾ ದೇಶದ ಅಧ್ಯಕ್ಷರಾಗಿದ್ದ ‌ಟ್ರಂಪ್ ರವರು ಚೀನಾ ವಿರುದ್ಧ ವಿವಿಧ ರೀತಿಯಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದರು. ಮತ್ತೊಂದೆಡೆ ಭಾರತ ದೇಶ ಕೂಡ ಹಲವಾರು ರೀತಿಯ ಕಠಿಣ ಕ್ರಮಗಳನ್ನು ಕೈಗೊಂಡು ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸುವ ಕೆಲಸ ಮಾಡಲಾಗಿದೆ ಹಾಗೂ ಮಾಡಿಯೇ ತೀರುತ್ತೇವೆ ಎಂಬುದನ್ನು ನಿರೂಪಿಸಿತು. ಇಂತಹ ಸಂದರ್ಭದಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಚೀನಾ ವಿರುದ್ಧ ಗುಟುರು ಹಾಕುತ್ತಿರುವ ಸಂದರ್ಭದಲ್ಲಿ ಸಾಮಾನ್ಯವಾಗಿ ಚೀನಾ ದೇಶದ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ತೊಡೆ ತಟ್ಟಲು ಎಲ್ಲ ದೇಶಗಳಿಗೆ ಒಬ್ಬ ನಾಯಕನ ಅಗತ್ಯವಿತ್ತು. ಸಾಮಾನ್ಯವಾಗಿ ವಿಶ್ವದ ದೊಡ್ಡಣ್ಣ ಎಂದು ಖ್ಯಾತಿ ಪಡೆದು ಕೊಂಡಿರುವ ಕಾರಣ ಅಮೇರಿಕ ದೇಶ ಯಾವುದಾದರೂ ಒಂದು ಸಂಸ್ಥೆಯಲ್ಲಿ ಇದೆ ಎಂದರೇ ಅಲ್ಲಿ ಅಮೆರಿಕ ದೇಶದ ಅ’ಧಿಪತ್ಯ ಕಾಣಿಸುತ್ತಿತ್ತು. ಆದರೆ ಇದೀಗ ಭಾರತಕ್ಕೆ ಅಂತರರಾಷ್ಟ್ರೀಯಮಟ್ಟದಲ್ಲಿ ಚೀನಾ ವಿರುದ್ಧ ತೊಡೆ ತಟ್ಟಲು ವಿಶ್ವದ ಸರ್ವಾನುಮತದ ಭಾರತಕ್ಕೆ ಅವಕಾಶ ಸಿಕ್ಕಿದೆ.

ಹೌದು ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಟ್ರಂಪ್ ರವರು ತಾನು ಕುರ್ಚಿ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದ್ದರೂ ಕೂಡ ಅವರು ಚುನಾವಣೆಯಲ್ಲಿ ಈಗಾಗಲೇ ಸೋತಿದ್ದಾರೆ. ಆದಕಾರಣ ಅಮೇರಿಕಾ ದೇಶದ ಮುಂದಿನ ಅಧ್ಯಕ್ಷ ಬಿದನ್ ರವರು ಚೀನಾದತ್ತ ಹೆಚ್ಚಿನ ಆಸಕ್ತಿ ತೋರುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಇದರಿಂದ ಚೀನಾ ವಿರುದ್ಧದ ದೇಶಗಳ ಸಾಲಿನಲ್ಲಿ ಅಮೇರಿಕಾ ದೇಶ ಕಂಡು ಬರುವುದು ಬಹುತೇಕ ಅನುಮಾನ. ಇಂತಹ ಸಂದರ್ಭದಲ್ಲಿ ಚೀನಾ ವಿರುದ್ಧ ಗುಟುರು ಹಾಕುತ್ತಿರುವ ಇತರ ರಾಷ್ಟ್ರಗಳು ಪರ್ಯಾಯ ನಾಯಕನಾಗಲು ಭಾರತವನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ.

ಯಾಕೆಂದರೆ ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಫ್ರಾನ್ಸ್ ದೇಶಗಳು ಮೊದಲಿನಿಂದಲೂ ನರೇಂದ್ರ ಮೋದಿ ಅವರನ್ನು ವಿವಿಧ ರೀತಿಯ ಸಂದರ್ಭಗಳಲ್ಲಿ ಬೆಂಬಲಿಸಿ ಎಲ್ಲ ರೀತಿಯಲ್ಲೂ ಭಾರತದ ಜೊತೆ ನಿಂತು ಕೊಳ್ಳುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಚೀನಾ ದೇಶಕ್ಕೆ ಉತ್ತರ ನೀಡಲು ಭಾರತ ದೇಶ ಸಮರ್ಥವಾಗಿದೆ ಎಂಬುದನ್ನು ಹಲವಾರು ಬಾರಿ ಈ ದೇಶಗಳು ಒಪ್ಪಿಕೊಂಡಿವೆ. ಇಂತಹ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚೀನಾ ವಿರುದ್ಧ ಗುಟುರು ಹಾಕುತ್ತಿರುವ ದೇಶಗಳ ಗುಂಪಿಗೆ ಭಾರತ ನರೇಂದ್ರ ಮೋದಿ ನಾಯಕನಾಗುವುದು ಬಹುತೇಕ ಖಚಿತವಾಗಿದ್ದು ಈ ಅವಕಾಶವನ್ನು ನರೇಂದ್ರ ಮೋದಿರವರು ಸದುಪಯೋಗಪಡಿಸಿಕೊಂಡರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಮತ್ತಷ್ಟು ಹೆಚ್ಚಾಗಲಿದೆ. ವಿಶ್ವದ ಇತರ ದೇಶಗಳಿಗೆ ಪರ್ಯಾಯ ಶಕ್ತಿಯಾಗಿ ಭಾರತ ಮತ್ತಷ್ಟು ಬೆಳೆಯುವುದು ಖಚಿತವಾಗಲಿದೆ.