ಸ್ವಪ್ನ ಶಾಸ್ತ್ರ: ಕನಸ್ಸಿನಲ್ಲಿ ಇವು ಕಂಡರೇ ಅದೃಷ್ಟವೋ ಅದೃಷ್ಟ, ಆದರೆ ಕನಸ್ಸಿನ ಕುರಿತು ಯಾರಿಗೂ ಹೇಳಬೇಡಿ !

ಸ್ವಪ್ನ ಶಾಸ್ತ್ರ: ಕನಸ್ಸಿನಲ್ಲಿ ಇವು ಕಂಡರೇ ಅದೃಷ್ಟವೋ ಅದೃಷ್ಟ, ಆದರೆ ಕನಸ್ಸಿನ ಕುರಿತು ಯಾರಿಗೂ ಹೇಳಬೇಡಿ !

ನಮಸ್ಕಾರ ಸ್ನೇಹಿತರೇ, ನಾವೆಲ್ಲರೂ ರಾತ್ರಿಯಲ್ಲಿ ಕನಸು ಕಾಣುತ್ತೇವೆ. ಕೆಲವೊಮ್ಮೆ ಈ ಕನಸು ಒಳ್ಳೆಯದು, ಕೆಲವೊಮ್ಮೆ ಕೆ’ಟ್ಟದು ಮತ್ತು ಕೆಲವೊಮ್ಮೆ ಬಹಳ ವಿಚಿತ್ರವಾಗಿರುತ್ತದೆ. ಆದರೆ ಕನಸಿನಲ್ಲಿ ಕಾಣುವ ವಿಷಯಗಳಿಗೆ ನಮ್ಮ ಅದೃಷ್ಟಕ್ಕೂ ನೇರ ಸಂಪರ್ಕವಿದೆ ಎಂದು ನಿಮಗೆ ತಿಳಿದಿದೆಯೇ. ಇದನ್ನ ಸ್ವಪ್ನ ಶಾಸ್ತ್ರದಲ್ಲಿ ತಿಳಿಸಿಲಾಗಿದೆ. ಇದರ ಪ್ರಕಾರ, ಕನಸಿನಲ್ಲಿ ಕಾಣುವ ಪ್ರತಿಯೊಂದಕ್ಕೂ ವಿಶೇಷ ಅರ್ಥವಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕನಸಿನಲ್ಲಿ ಕಂಡುಬರುವ ಚಿಹ್ನೆಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ ಒಂದು ವೇಳೆ ನಿಮ್ಮ ಕನಸ್ಸಿನಲ್ಲಿ ಇವು ಕಾಣಿಸಿಕೊಂಡರೇ ನಿಮಗೆ ಅದೃಷ್ಟ ಬರುತ್ತಿದೆ ಎಂದರ್ಥ. ಆದರೆ ನೀವು ಈ ಕನಸುಗಳ ಪೂರ್ಣ ಲಾಭಕ್ಕಾಗಿ ಯಾರಿಗೂ ಈ ರೀತಿಯ ಕನಸ್ಸು ಬಂದಿದೆ ಎಂದು ತಿಳಿಸಬೇಡಿ.

ಮೊದಲನೆಯದಾಗಿ ಹಿಂದೂ ಧರ್ಮದಲ್ಲಿ ದೇವರಂತೆ ಪೂಜೆಸಲ್ಪಡುವ ಹಸುವಿನ ಕನಸು ಹೌದು ಸ್ನೇಹಿತರೇ, ಕನಸಿನಲ್ಲಿ ನೀವು ಹಸುವಿಗೆ ಸೇವೆ ಸಲ್ಲಿಸುತ್ತಿರುವುದನ್ನು ನೋಡುವುದು ಶುಭ. ಇದರರ್ಥ ನಿಮ್ಮ ಜೀವನದಲ್ಲಿ ನಿಂತು ಹೋಗಿರುವ ಎಲ್ಲಾ ಕೆಲಸಗಳು ಪೂರ್ಣಗೊಂಡು ನಿಮ್ಮ ಅದೃಷ್ಟದ ಬಾಗಿಲು ಶೀಘ್ರದಲ್ಲೇ ತೆರೆಯಲಿವೆ ಎಂದರ್ಥ. ಜೀವನದಲ್ಲಿ ನಿಮ್ಮೊಂದಿಗೆ ಬಹಳ ಒಳ್ಳೆಯ ಘಟನೆಗಳು ಸಂಭವಿಸಲಿವೆ. ಅಂತಹ ಕನಸನ್ನು ನೋಡಿದ ನಂತರ, ನೀವು ಹಸುವಿನ ಹಸಿರು ಮೇವನ್ನು ನೀಡಿದರೇ ಇನ್ನು ಹೆಚ್ಚಿನ ಫಲ ಪಡೆಯಬಹುದಾಗಿದೆ.

ಇನ್ನು ಎರಡನೆಯದಾಗಿ ನಿಮ್ಮ ಕನಸಿನಲ್ಲಿ ಮನೆಯ ಅಂಗಳದಲ್ಲಿ ನವಿಲು ನೃತ್ಯ ಮಾಡುವುದನ್ನು ನೀವು ನೋಡಿದರೆ, ಅದು ಅದೃಷ್ಟದ ಸಂಕೇತವಾಗಿದೆ. ಕನಸು ಕಂಡ ನಂತರ, ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಎಲ್ಲಾ ಕೆಲಸಗಳು ನಿಂತು ಹೋಗಿ ಒಳ್ಳೆಯ ದಿನಗಳು ಆರಂಭವಾಗುತ್ತವೆ ಎಂದರ್ಥ. ಒಂದು ವೇಳೆ ನೀವು ಈ ಕನಸು ಕಂಡರೇ, ಸಾಧ್ಯವಾದರೆ ಕು’ಷ್ಠ ರೋ’ಗಿಗಳಿಗೆ ತೈಲವನ್ನು ದಾನ ಮಾಡಿ.

ಇನ್ನು ಮೂರನೆಯದಾಗಿ ಒಂದು ಬಾಳೆ ಮರವನ್ನು ಕನಸಿನಲ್ಲಿ ನೋಡುವುದನ್ನು ಸಹ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಅದೃಷ್ಟವನ್ನು ಎಷ್ಟು ಬೆಳಗಿಸುತ್ತದೆ ಎಂದರೆ ನಿಮ್ಮ ಎಲ್ಲಾ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಈ ಕನಸು ಕಂಡ ನಂತರ ನೀವು ಹಳದಿ ಆಹಾರವನ್ನು ಸಾಧ್ಯವಾದರೇ ದಾನ ಮಾಡಬೇಕು. ಇನ್ನು ಅಷ್ಟೇ ಅಲ್ಲದೇ, ಕನಸಿನಲ್ಲಿ ನಿಮಗಾಗಿ ಬಾಗಿಲು ತೆರೆಯುವುದು ಒಳ್ಳೆಯ ಸಂಕೇತ. ಇದರರ್ಥ ನಿಮ್ಮ ಹಣೆಬರಹದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ಕನಸು ಕಂಡ ನಂತರ, ನೀವು ಬಡವರಿಗೆ ಅಥವಾ ನಿರ್ಗತಿಕರಿಗೆ ಹಳದಿ ಅಥವಾ ಕಿತ್ತಳೆ ಬಣ್ಣದ ಬಟ್ಟೆಗಳನ್ನು ನೀಡಿದರೇ ಉತ್ತಮ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಆದರೆ ಒಂದು ವಿಷಯವನ್ನು ನೆನಪಿನಲ್ಲಿಡಿ, ನೀವು ಈ ಕನಸುಗಳ ಬಗ್ಗೆ ಯಾರಿಗೂ ಹೇಳದಿದ್ದಾಗ ಮಾತ್ರ ಹೆಚ್ಚಿನ ಪ್ರಯೋಜನವಾಗುತ್ತದೆ.